ಮಂತ್ರಿಯಾಗಿದ್ದಾಗ ಲಸಿಕೆ ಕೊಡಿಸಿ ಯಶಸ್ವಿಯಾಗಿದ್ದೆ, ಈಗ ೨೫ ಲಕ್ಷ ರೂಗೆ ಮನವಿ ಮಾಡಿರುವೆ, ಎಲ್ಲ ಜಾನುವಾರುಗಳಿಗೆ ಲಸಿಕೆ ಹಾಕಿಸಲು ಎ. ಮಂಜು ವಿನಂತಿ

ಅರಕಲಗೂಡು:  ತಾಲ್ಲೂಕಿನಲ್ಲಿ ಈಗ ಜಾನುವಾರಗಳ ಸಾವಿನದ್ದೆ ಸದ್ದು, ಇದೀಗ ಮಾಜಿ ಪಶು ಸಂಗೋಪನಾ ಸಚಿವ ಎ. ಮಂಜು ರೋಗ ತಾಂಡವಾಡುತ್ತಿರುವ ಹಳ್ಳಿಗಳಿಗೆ ಇಂದು ಭೇಟಿ..

ಇಲಾಖೆಯಲ್ಲಿ ಖಾಲಿ ಇರುವ ಪಶುವೈದ್ಯರ ಹುದ್ದೆಗಳನ್ನು ಭರ್ತಿಮಾಢಲು ಸರ್ಕಾರ ಕೂಡಲೆ ಕ್ರಮ ಕೈಗೊಳ್ಳುವಂತೆ ಮಾಜಿ ಸಚಿವ  ಎ.ಮಂಜು ಸರ್ಕಾರವನ್ನು ಒತ್ತಾಯಿಸಿದರು. 
 ತಾಲ್ಲೂಕಿನ ಶಾನುಭೋಗನಹಳ್ಳಿ ಗ್ರಾಮಕ್ಕೆ ಶುಕ್ರವಾರ ಬೇಟಿ ನೀಡಿ ಕಾಲು ಬಾಯಿ ರೋಗಕ್ಕೆ ತುತ್ತಾಗಿರುವ ಹಸುಗಳನ್ನು ವೀಕ್ಷಿಸಿ  ಸುದ್ದಿಗಾರರೊಂದಿಗೆ ಮಾತನಾಡಿದ  ಅವರು,  ತಾಲ್ಲೂಕಿನಲ್ಲಿ 25 ಪಶು ಆಸ್ಪತ್ರೆಗಳಿದ್ದು ಕೇವಲ 5ರಲ್ಲಿ ಮಾತ್ರ ವೈದ್ಯರಿದ್ದು 20 ಹುದ್ದೆಗಳು ಖಾಲಿ ಉಳಿದಿವೆ, ತಾವು ಇಲಾಖೆ ಸಚಿವರಾಗಿದ್ದ ವೇಳೆ ಗ್ರಾಮೀಣ ಭಾಗಗಳಲ್ಲಿ ಆಸ್ಪತ್ರೆ ತೆರೆದು  ವೈದ್ಯರನ್ನು ನೇಮಕ ಮಾಡಿದ್ದಲ್ಲದೆ ರಾಜ್ಯದಾದ್ಯಂತ ಪಶುಗಳಿಗೆ ಪಲ್ಸ್ ಪೊಲಿಯೋ  ಮಾದರಿಯಲ್ಲಿ ವರ್ಷಕ್ಕೆ ಎರಡು ಬಾರಿ ಲಸಿಕೆ ಹಾಕುವ ಕಾರ್ಯಕ್ರಮ ಜಾರಿಗೆ ತರಲಾಗಿತ್ತು. ಸರ್ಕಾರ ಕೂಡಲೆ ಈ ಕುರಿತು ಗಮನ ಹರಿಸಬೇಕು ಎಂದು ಒತ್ತಾಯಿಸಿದರು. 
ಕಳೆದ  ಅಕ್ಟೋಬರ್ ನಲ್ಲಿ ಮೊದಲ ಹಂತದ ಲಸಿಕೆ ನೀಡಲಾಗಿತ್ತು. ಲಸಿಕೆ ಸರಭರಾಜಾಗದ ಕಾರಣ ಎರಡನೆ ಹಂತದ ಲಸಿಕೆಯನ್ನು ಏಪ್ರಿಲ್ ನಲ್ಲಿ  ನೀಡದಿರುವುದೇ ರೋಗ ಹಬ್ಬಲು ಕಾರಣವಾಗಿದೆ. ಈ ಕುರಿತು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ತಾವು ಮಾತನಾಡಿದ್ದು ಲಸಿಕೆ ಕಾರ್ಯಕ್ರಮಕ್ಕೆ ತಾಲ್ಲೂಕಿಗೆ ರೂ25ಲಕ್ಷ ಹಣ ಬಿಡುಗಡೆಮಾಡಿರುವುದಾಗಿ ಹೇಳಿದ್ದಾರೆ. ರೋಗ ಬಾದೆ ಕಾಣಿಸಿಕೊಂಡಿರುವ ಕಡೆಗಳಲ್ಲಿ ತುರ್ತು ಲಸಿಕೆ ಹಾಕುವ ಕಾರ್ಯ ಪ್ರಾರಂಭಿಸಲಾಗಿದೆ ರೈತರು ಕಡ್ಡಾಯವಾಗಿ ಜಾನುವಾರುಗಳಿಗೆ ಲಸಿಕೆ ಹಾಕಿಸುವಂತೆ ಮನವಿ ಮಾಡಿದರು. ಗ್ರಾಮದ ಮುಖಂಡರು ಹಾಜರಿದ್ದರು.

Post a Comment

0 Comments