ಅರಕಲಗೂಡು: ತಾಲೂಕಿನ ಮುಂಡಗೋಡು ಗ್ರಾಮದಲ್ಲಿ ಇಂದು ಬೆಳಂ ಬೆಳಗ್ಗೆಯೇ ಕಾಡಾನೆ ಪ್ರತ್ಯಕ್ಷವಾಗಿ ಜನರನ್ನು ತಳಮಳಕ್ಕೆ ದೂಡಿತು.
ಮುಂಡಗೋಡಿಗೆ ನುಗ್ಗಿದ ಕಾಡಾನೆ ರಾತ್ರಿಯಿಂದಲೂ ಬೆಳೆಗಳ ಮೇಲೆ ಸುತ್ತಾಡಿ ಬೆಳಗ್ಗೆ ಹೊತ್ತಿಗೆ ಗ್ರಾಮದೇವತೆ ದೇವಸ್ಥಾನ ಬಳಿ ನಿಂತಿದೆ.
ಎದ್ದೊಡನೆ ಅತ್ತ ಧಾವಿಸಿದ ಗ್ರಾಮಸ್ಥರನ್ನು ಕಂಡು ದೇವಸ್ಥಾನ ಬಳಿ ಗಾಬರಿ ಪಟ್ಟು ಓಡಾಡುತ್ತಿದ್ದ ಆನೆ ದಿಕ್ಕಾಪಾಲಾಗಿ ಜೋಳದ ಹೊಲದಲ್ಲಿ ಸುತ್ತಾಡಿದೆ. ಆನೆಯನ್ನು ಓಡಿಸಲು ಜನರು ಹರಸಾಹಸ ಪಡುವಂತಾಗಿತ್ತು.
ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಮಾದಾಪುರ ಆನೆ ಅಟ್ಟಲು ಕೆಲಕಾಲ ತಡಕಾಡಿದರು.
ಮುಂಡಗೋಡು ಭಾಗದಲ್ಲಿ ಕಾಡಾನೆ ತುಳಿದು ಭತ್ತ, ರಾಗಿ ಜೋಳದ ಬೆಳೆ ಹಾನಿಯಾಗಿದೆ ಎಂದು ಜನರು ಆಕ್ರೋಶ ಹೊರ ಹಾಕಿದ್ದಾರೆ.
ಆನೆ ನೋಡಿ ಜನರಲ್ಲಿ ಆತಂಕವಾಗಿದೆ. ಮಾಹಿತಿ ನೀಡಿದರೂ ಆನೆ ಓಡಿಸಲು ಬಹಳ ತಡವಾಗಿ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತಳೆದರು ಎಂದು ಕರವೇ ಮುಖಂಡ ಸೋಮು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆನೆಗಳ ಹಾವಳಿ ತಡೆಗಟ್ಟಲು ಜನತೆ ಆಗ್ರಹಿಸಿದ್ದಾರೆ.
0 Comments