ಅರಕಲಗೂಡು: ಪಟ್ಟಣದಲ್ಲಿ ಭಾರತ್ ಬಂದ್ ಗೆ ವಿವಿಧ ಸಂಘಟನೆಗಳ ಕಾರ್ಯಕರ್ತರಿಂದ ಅಭೂತಪೂರ್ವ ಬೆಂಬಲಸಿಕ್ಕಿತಾದರೂ ಸಾರ್ವಜನಿಕ ವ್ಯಾಪಾರಿ ವಲಯದಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.
ತಾಲೂಕು ರೈತ ಸಂಘದ ( ಪುಟ್ಟಣ್ಣಯ್ಯ ಬಣ) ಅಧ್ಯಕ್ಷ ಯೋಗಣ್ಗ ನೇತೃತ್ವದಲ್ಲಿ ಕರವೇ, ಛಲವಾದಿ ಮಹಾಸಭಾ ಸಂಘಟನೆ , ವಿದ್ಯಾರ್ಥಿ ಘಟಕ, DSS ಸಂಘಟನೆಯಗಳು , KRS ಪಕ್ಷ, ಕೆಂಪೇಗೌಡ ಸೇನೆ ಸೇರಿದಂತೆ ಹಲವು ಕಾಯರ್ಯಯಕರ್ತರು ಪ್ತವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಹೊರಟು ಬೆಲೆ ಏರಿಕೆ, ರೈತ ಮಸೂದೆ ರದ್ದತಿ ಮಾಡಬೇಕೆಂದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ವಿರುದ್ದ ದಿಕ್ಕಾರದ ಘೋಷಣೆಗಳನ್ನು ಕೂಗಿದರು. ನಂತರ ಅನಕೃ ವೃತ್ತದಲ್ಲಿ ಮಾನವ ಸರಪಳಿ ಮಾಡಿ ನಂತರ ನಂಜೇಗೌಡ ಸರ್ಕಲ್ ನಲ್ಲಿ ಅರ್ಧ ತಾಸು ಕುಳಿತು ರಸ್ತೆ ತಡೆ ಮಾಡಿ ಜನವಿರೋಧಿ ಸರ್ಕಾರದ ವಿರುದ್ದ ಘೋಷಣೆ ಮೊಳಗಿಸಿದರು.
ನಂತರ ರೈತ ಸಂಘದ ತಾಲ್ಲೂಕ್ ಅದ್ಯಕ್ಷ ಸೀಬಳ್ಳಿ ಯೋಗೇಶ್ ಮಾತನಾಡಿ ರೈತ ಬೆಳೆದ ಬೆಳೆಗೆ ಸರಿಯಾದ ಬೆಲೆಯಿಲ್ಲ ,ತೈಲ ಬೆಲೆ ಗಗನಕ್ಕೇರಿದೆ.ರೈತರ ಖಾತೆಗೆ 15 ಲಕ್ಷ ಬರಲಿಲ್ಲ, ವಸ್ತುಗಳಿಗೆ ಬೆಲೆ ನಿಗದಿಯಾಗಿಲ್ಲ, MSP ಜಾರಿಯಾಗಲಿಲ್ಲ ,ನಿರುದ್ಯೊಗ ತಾಂಡವಾಡುತ್ತಿದೆ.ನಮ್ಮ ಮಕ್ಕಳು ಡಬಲ್ ಡಿಗ್ರಿ ಪಡೆದರೂ ಕೆಲಸ ಇಲ್ಲ, ದೇಶಮೆಚ್ಚುವ ಪ್ರದಾನಿ ಆಗಬೇಕು ,ಪ್ರಪಂಚ ಗೆಲ್ಲುವ ಪ್ರದಾನಿ ಬೇಡ, ಸ್ಮಾರ್ಟ ಸಿಟಿ ಮಾಡುತ್ತೇವೆ ಎಂದು ಬರಲಿಲ್ಲ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಸಂವಿದಾನ ದ ಆಶಯ ,ಕನಸಾಗಿದೆ.ದೆಹಲಿ ರೈತರ ಚಳುವಳಿ10 ತಿಂಗಳು ತುಂಬಿದರೂ ಪರಿಹಾರ ದೊರೆತಿಲ್ಲ. ನಮ್ಮ ಸರ್ಕಾರಗಳು ಬ್ರೀಟಿಷರಿಗಿಂತ ಕೀಳಾಗಿ ರೈತರನ್ನು ನಡೆಸಿಕೊಳ್ಳುತ್ತಿದೆ.ಬ್ರಷ್ಟಚಾರ ಎಲ್ಲಡೆ ಅತಿಯಾಗಿದೆ.ರೈತರ ಮೂರು ವಿರೋಧ ನೀತಿ ರದ್ದಾಗಬೇಕು, ರೈತರು ಒಗ್ಗಟ್ಟಿನಿಂದ ಹೋರಾಟ ಮಾಡಬೇಕು, ಮೋದಿ ಸರ್ಕಾರದಲ್ಲಿ 1 ಲೀಟರ್ ಹಾಲು 35 ರೂ,ಆದರೆ ಒಂದು ಕ್ವಾಟರ್ ಮದ್ಯದ ಬೆಲೆ 300 ಆಗಿದೆ.ರೈತರ ರಕ್ಷಣೆ ಎಲ್ಲಿಯಾಗಿದೆ.ಶುಂಠಿ ಬೆಲೆ ಚೀಲಕ್ಕೆ 300 ಆಗಿದೆ ಗೊಬ್ಬರದ ಬೆಲೆ 1400 ಆಗಿದೆ.ಎಂದರು.
ಪ್ರತಿಭಟನೆಯಲ್ಲಿ ರೈತಸಂಘದ ಅದ್ಯಕ್ಷ ಸೀಬಳ್ಳಿ ಯೋಗೇಶ್, K,R,S ಪಕ್ಷದ ತಾಲ್ಲೋಕ್ ಅದ್ಯಕ್ಷ ಕೇಶವ ಮೂರ್ತಿ, ಛಲವಾದಿ ತಾ.ಉಪಾದ್ಯಕ್ಷ ಎ.ವಿ.ಲಿಂಗರಾಜು, ,ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ತಾ.ಅದ್ಯಕ್ಷ ಕುಶಾಲ್,ಛಲವಾದಿ ವಿದ್ಯಾರ್ಥಿ ಘಟಕದ ಅದ್ಯಕ್ಷ ವಿನಯ್ ಕುಮಾರ್, ಕೆಂಪೇಗೌಡ ಸೇನೆ ತಾ.ಅದ್ಯಕ್ಷ ಸಂತೋಷ . ರೈತ ಸಂಘದ ಜಗದೀಶ್ಬಿ ಜಗನ್ನಾಥ್, ಬಂದಿಗನಹಳ್ಪಿ ರವಿ, ಹೊಂಬೇಗೌಡ, ಬಿಎಸ್ಪಿ ಪಕ್ಷದ ಕಾರ್ಯಕರ್ತರು ಬಾಗವಹಿಸಿದ್ದರು.
ನಂಜೇಗೌಡ ಸರ್ಕಲ್ ಗೆ ಆಗಮಿಸಿದ ತಹಸೀಲ್ದಾರ್ ರೇಣುಕುಮಾರ್ ಮನವಿ ನೀಡಿದರು. ನಂತರ ಪ್ರತಿಭಟನಾಕಾರರು ನ್ಯಾಯಾ ಬೆಲೆ ಅಂಗಡಿಗಳು, ಮತ್ತು ಕಂದಾಯ ಇಲಾಖೆಯಲ್ಲಿ ಬ್ರಷ್ಟ ಚಾರ ನಡೆಯುತ್ತಿದೆ ಪರೀಶೀಲಿಸುವಂತೆ ಕೇಳಿದರು.
ತಹಸೀಲ್ದಾದಾರ್ ವೈ.ಎಂ. ರೇಣುಕುಮಾರ್ ಮಾತನಾಡಿ ನಾನು ಮನವಿಯನ್ನು ಸರ್ಕಾರಕ್ಕೆ
ಕಳುಹಿಸುತ್ತೇನೆ ನಾನು ರೈತರ ಜೊತೆ ಇರುತ್ತೇವೆ
ಕರೋನಾ ಲಸಿಕೆ ಬಗ್ಗೆ ಕಾಳಜಿ ವಹಿಸಿದ್ದೇವೆವು , ಈಗ ಅವುಗಳ ಕಡೆ ಗಮನ ಹರಿಸಿ ಕ್ರಮ ತೆಗೆದು ಕೊಳ್ಳುತ್ತೇನೆ ಎಂದರು.
ಪಟ್ಟಣದಲ್ಲಿ ಸಾರ್ವಜನಿಕರು ಭಾರತ್ ಬಂದ್ ಯಾವುದೇ ಪ್ರತಿಕ್ರಿಯೆ ನೀಡದೆ ಬೆಂಬಲ ವ್ಯಕ್ತ ಪಡಿಸಿರುವುದಿಲ್ಲ ,ಅಂಗಡಿ ಮುಗ್ಗಟ್ಟುಗಳು ಎಂದಿನಂತೆ ತೆರೆದಿದ್ದವು.
0 Comments