ಹಾಳು ಸುರಿಯುತ್ತಿದೆ ನೋಡಿ ಅರಕಲಗೂಡು ಕ್ರೀಡಾಂಗಣ! ಕೆರೆಯಂಗಳದಿ ಎಲ್ಲಿವೆ ಸೌಲಭ್ಯಗಳು?

ಅರಕಲಗೂಡು: ಇದೇನು ಕೆರೆಯೋ ಕ್ರೀಡಾಂಗಣವೋ ಎನ್ನುವ ಅನುಮಾನ, ಹೌದು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳು ತಾಲೂಕಿನಲ್ಲಿ ಇದ್ದಾರೆ. ಆದರೆ, ಕ್ರೀಡಾ ಪ್ರತಿಭೆಗಳನ್ನು ತರಬೇತಿಗೊಳಿಸುವ ಪಟ್ಟಣದ ತಾಲೂಕು ಕ್ರೀಡಾಂಗಣ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷö್ಯ ಧೋರಣೆಗೆ ಒಳಗಾಗಿ ಮೂಲಭೂತ ಸೌಲಭ್ಯಗಳು ಇಲ್ಲದೆ ಹಾಳು ಕೊಂಪೆಯಂತಿದೆ.

ಪಟ್ಟಣದ ಹೃದಯ ಭಾಗದಲ್ಲಿದ್ದ ದೊಡ್ಡಕೆರೆಯನ್ನು ಮುಚ್ಚಿ ಒಂದು ಭಾಗಕ್ಕೆ ತಾಲೂಕು ಕ್ರೀಡಾಂಗಣ ಮತ್ತೊಂದು ಕಡೆಗೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸ್ಥಾಪಿಸಲಾಗಿದೆ. ದುರಾದೃಷ್ಟವಶಾತ್ ಕ್ರೀಡಾಂಗಣ ಮಾತ್ರ ಇಂದಿಗೂ ಮಳೆ ಸುರಿದರೆ ಕೆರೆಯಾಗಿಯೇ ನೀರು ತುಂಬಿಕೊAಡು ಕೆಸರುಮಯವಾಗುತ್ತದೆ.
ಕಾಂಪೌಂಡ್ ಸೌಲಭ್ಯವಿಲ್ಲದೆ ಕ್ರೀಡಾಂಗಣ ಸುತ್ತಲೂ ಅನಗತ್ಯವಾದಿ ಗಿಡಗಂಟಿ ಹಸಿರು ಪೊದೆ ಆವರಿಸಿ ಸ್ವಚ್ಚತೆ ಮಾಯವಾಗಿದೆ. ಕ್ರೀಡಾಂಗಣ ಪಕ್ಕದ ಕುವೆಂಪು ಉದ್ಯಾನಕ್ಕೆ ಹೊಂದಿಕೊAಡAತೆ ಕೆಲ ಮೀಟರ್‌ಗಳ ವರೆಗೆ ನಿರ್ಮಿಸಿರುವ ಚರಂಡಿ ಕಾಮಗಾರಿ ಅರ್ಧಕ್ಕೆ ನಿಲ್ಲಿಸಲಾಗಿದೆ. ಚರಂಡಿ ಹಾದು ಹೋಗಿರುವ ಕ್ರೀಡಾಂಗಣ ಕಡೆಗೆ ಮುಖ ತಿರುಗಿಸಲು ಆಗದಷ್ಟು ಗಬ್ಬೆದ್ದು ಮಲ ಮೂತ್ರಾಲಯದ ತಾಣವಾಗಿ ಹಾಳು ಸುರಿಯುತ್ತಿದೆ.

ದೊಡ್ಡಕೆರೆ ಮುಚ್ಚುವಾಗ ಕ್ರೀಡಾಭಿಮಾನಿಗಳಲ್ಲಿ ಸುಂದರವಾದ ಕ್ರೀಡಾಂಗಣ ತಲೆಎತ್ತುವ ಹೊಸತೊಂದು ಆಸೆ ಚಿಗುರಿತ್ತು. ಆದರೆ ವಿಸ್ತಾರವಾದ ಕ್ರೀಡಾಂಗಣದಲ್ಲಿ ಏನೊಂದು ಸೌಕರ್ಯಗಳನ್ನು ಕಲ್ಪಿಸದೆ ಮಳೆ ನೀರು ನಿಂತು ಕೆರೆಯ ಅಂಗಳವಾಗಿ ಮಾರ್ಪಟ್ಟಿದೆ.
ಎಲ್ಲಕ್ಕಿಂತ ದೊಡ್ಡ ಅಪಾಯಕಾರಿ ಸಂಗತಿಯೆAದರೆ ಪಟ್ಟಣದ ಮುಖ್ಯ ರಸ್ತೆಯಿಂದ ಕ್ರೀಡಾಂಗಣ ಕಡೆಗೆ ತೆರಳುವ ರಸ್ತೆಗೆ ಕಾಲಿಡಲು ಅಸಹ್ಯಕರವಾಗಿದೆ. ಉತ್ತಮವಾದ ರಸ್ತೆ ಇಲ್ಲದೆ ಕೆಸರು ಹೂಳು ತುಂಬಿದ್ದು ಕಚ್ಚಾ ರಸ್ತೆಗೂ ಕಡೆಯಾಗಿ ಗುಂಡಿ ಹೊಂಡವಾಗಿದೆ. ಖಾಸಗಿ ವಾಹನಗಳ ಓಡಾಟ ಹಾಗೂ ಶುಂಠಿ ಸ್ವಚ್ಚಗೊಳಿಸುವ ಲಾರಿಗಳ ಸಂಚಾರದಿAದ ಕ್ರೀಡಾಂಗಣಕ್ಕೆ ತೆರಳುವ ರಸ್ತೆ ಸ್ಥಿತಿ ನರಕ ಸದೃಶ್ಯವಾಗಿದೆ.

ಒಂದೆಡೆ ರಸ್ತೆ ಹಾಳಾಗಿದ್ದರೆ ಇನ್ನೊಂದೆಡೆ ರಸ್ತೆ ಬದಿ ಚರಂಡಿಯಲ್ಲಿ ಕೆಸರು ಮಡುಗಟ್ಟಿ ಮುಂದೆ ಹೋಗದೆ ದುರ್ನಾತ ಬೀರುತ್ತಾ ರೋಗ ರುಜಿನಗಳನ್ನು ಆಹ್ವಾನಿಸುತ್ತಿದೆ. ಸೊಳ್ಳೆಗಳು ಉತ್ಪತ್ತಿಯಾಗಿ ಗಬ್ಬೆದ್ದಿದೆ. ಕನಿಷ್ಠ ಕ್ರೀಡಾಂಗಣಕ್ಕೆ ತೆರಳುವ ರಸ್ತೆ ಸರಿಪಡಿಸಿ ಚರಂಡಿ ಸ್ವಚ್ಚಗೊಳಿಸಲು ಸಾಧ್ಯವಾಗಿಲ್ಲ ಎಂದು ಸಾರ್ವಜನಿಕರು ದೂರುತ್ತಾರೆ.
ಕ್ರೀಡಾಂಗಣಕ್ಕೆ ತೆರಳುವ ಅರ್ಧ ಕಿಮೀ ಉದ್ದದ ರಸ್ತೆ ಮಾತ್ರವಲ್ಲ ಒಳ ಭಾಗಕ್ಕೆ ಪ್ರವೇಶಿಸದಂತೆ ಕೆಸರಿನ ರಾಡಿ ಹರಡಿದೆ. ಕ್ರೀಡಾಂಗಣದ ಪೆವಿಲಿಯನ್ ಕಟ್ಟಡಗಳು ನಿರ್ವಹಣೆ ಇಲ್ಲದೆ ಭೂತದ ಬಂಗಲೆಯಾಗಿವೆ. ಕ್ರೀಡಾಂಗಣ ಮೆಟ್ಟಿಲುಗಳು ಹದಗೆಟ್ಟು ಹೋಗಿವೆ. ಟ್ರಾö್ಯಕ್ ಸೌಲಭ್ಯ ಇಲ್ಲ. ವಾಲಿಬಾಲ್ ಕೋಟ್, ಡಿಸ್ಕಸ್, ಶಾಟ್‌ಪುಟ್, ಹೈಜಂಪ್, ಲಾಂಗ್‌ಜAಪ್ ಮತ್ತಿತರ ಕ್ರೀಡಾಭ್ಯಾಸಕ್ಕೆ ಅಗತ್ಯ ಸೌಕರ್ಯಗಳಿಲ್ಲದೆ ಬಯಲು ಮೈದಾನವಾಗಿದೆ.
ಕ್ರೀಡಾಂಗಣ ಒಳ ಪ್ರವೇಶಕ್ಕೆ ಗೇಟ್ ಇಲ್ಲ. ಹೀಗಾಗಿ ಎಮ್ಮೆ, ದನಗಳು ನುಗ್ಗಿ ಕ್ರೀಡಾಂಗಣವನ್ನು ತುಳಿದು ಇನ್ನಷ್ಟು ಹಾಳುಗೆಡವುತ್ತಿವೆ. ಸಂಜೆ ವೇಳೆಗೆ ಕೆಲವು ಎಣ್ಣೆ ಪಾರ್ಟಿಗಳು ನಡೆಯುತ್ತವೆ. ಮೆಟ್ಟಿಲುಗಳ ಪಕ್ಕದಲ್ಲಿ ಶುಚಿತ್ವ ಇಲ್ಲದೆ ಮದ್ಯದ ಬಾಟಲ್‌ಗಳು ಚೆಲ್ಲಾಡಿವೆ.
ಕ್ರೀಡಾಂಗಣವು ಬೇಸಿಗೆ ಸಮಯದಲ್ಲಿ ಕ್ರೀಡೆಗಳಿಗಷ್ಟೆ ಸೀಮಿತವಾಗಿದ ಅನೇಕ ಖಾಸಗಿ ಕಾರ್ಯಕ್ರಮಗಳು, ರಾಜಕೀಯ ಸಮಾರಂಭಗಳನ್ನು ಆಯೋಜಿಸಲಾಗುತ್ತದೆ. ಎ. ಮಂಜು ಪಶುಸಂಗೋಪನಾ ಸಚಿವರಾಗಿದ್ದಾಗ ಒಂದು ವಾರಗಳ ಕಾಲ ರಾಜ್ಯ ಮಟ್ಟದ ಜಾನುವಾರ ಮೇಳ ವ್ಯವಸ್ಥೆಗೊಳಿಸಲಾಗಿತ್ತು. ಆದರೆ ಕ್ರೀಡಾಂಗಣ ಮಾತ್ರ ಕ್ರೀಡಾಪಟುಗಳಿಗೆ ಅಗತ್ಯವಾಗಿರುವ ಸೌಕರ್ಯಗಳನ್ನು ಹೊಂದಿಲ್ಲ.

ವಿಶಾಲವಾದ ಕ್ರೀಡಾಂಗಣವಿದ್ದರೂ ಉತ್ತಮ ಸೌಲಭ್ಯಗಳಿಲ್ಲ. ಅಂತರಾಷ್ಟಿçÃಯ ಮಟ್ಟದ ಕ್ರೀಡೆಗಳಲ್ಲಿ ಸಾಧನೆ ಮಾಡಿದ ಕೊಳ್ಳಂಗಿ ಶಾಂತಕುಮಾರ್, ಹೊಸನಗರದ ಪ್ಯಾರಾಲಿಂಪಿಕ್ ಗಿರೀಶ್, ರಾಷ್ಟçಮಟ್ಟದಲ್ಲಿ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಹೆಸರು ಗಳಿಸಿದ ದೊಡ್ಡಮಗ್ಗೆ ರಂಜಿತ್ ಮತ್ತಿತರ ಹೆಸರಾಂತ ಕ್ರೀಡಾಪಟುಗಳಿದ್ದಾರೆ. ಅಂತಹ ತಾಲೂಕಿನಲ್ಲಿ ಕ್ರೀಡಾಂಗಣ ಅಭಿವೃದ್ಧಿಗೆ ಆಸಕ್ತಿ ವಹಿಸಿಲ್ಲ. 
- ಮೋಹನ್, ಕಾಲೇಜು ವಿದ್ಯಾರ್ಥಿನಿ ಕ್ರೀಡಾಭಿಮಾನಿ.
ಕೆರೆಯನ್ನು ಕ್ರೀಡಾಂಗಣವಾಗಿ ಮಾರ್ಪಡಿಸಿದ್ದರಿಂದ ಮಳೆಗಾಲದಲ್ಲಿ ಮತ್ತೆ ಕೆರೆಯಾಗುತ್ತದೆ. ನೀರು ನಿಲ್ಲದಂತೆ ಎತ್ತರವಾಗಿ ಹತ್ತು ಅಡಿ ಮಟ್ಟಕ್ಕೆ ಮಣ್ಣು ಸುರಿಯಬೇಕು. ಕ್ರೀಡಾಂಗಣಕ್ಕೆ ಬರುವ ರಸ್ತೆ ನಿರ್ಮಿಸಿ ಮೂಲಭೂತ ಸೌಲಭ್ಯಗಳ ಕೊರತೆ ನೀಗಿಸಬೇಕಿದೆ.
- ಕೆ.ಆರ್. ಶಾಂತಕುಮಾರ್, ಅಂತರಾಷ್ಟಿçÃಯ ಕ್ರೀಡಾಪಟು.

ತಾಲೂಕು ಕ್ರೀಡಾಂಗಣಕ್ಕೆ ತರಬೇತುದಾರರನ್ನು ನಿಯೋಜಿಸಿಲ್ಲ. ತಾಲೂಕು ಮಟ್ಟದ ಕ್ರೀಡಾಂಗಣದ ಅಭಿವೃದ್ಧಿಗೆ ಸರ್ಕಾರ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. ಅರಕಲಗೂಡಿನ ತಾಲೂಕು ಕ್ರೀಡಾಂಗಣ ಅಭಿವೃದ್ಧಿಗಾಗಿ ಶಾಸಕ ಎ.ಟಿ. ರಾಮಸ್ವಾಮಿ ಅವರು ನಿರ್ಮಿತಿ ಕೇಂದ್ರದ ಮುಖೇನ 30 ಲಕ್ಷ ರೂ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
- ಹರೀಶ್, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿ ಹಾಸನ.

Post a Comment

0 Comments