ಅರಕಲಗೂಡು: ತಾಲೂಕಿನ ಮಲ್ಲಿಪಟ್ಟಣ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದ ಸಮಸ್ಯೆ ಬಗೆಹರಿಸಿ ಮೂಲ ಸೌಕರ್ಯಗಳನ್ನು ಒದಗಿಸದ ಪರಿಣಾಮ ಶೈಕ್ಷಣಿಕವಾಗಿ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು ಸಾರ್ವಜನಿಕ ಸಮಸ್ಯೆಗಳ ಕಡೆಗೆ ಹೆಚ್ಚು ಆಸಕ್ತಿ ವಹಿಸಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ ಆಗ್ರಹಿಸಿದರು.
ಮಲ್ಲಿಪಟ್ಟಣ ಸಮುದಾಯ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗ್ರಾಪಂ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಭೆಯಲ್ಲಿ ಮುಖ್ಯ ಶಿಕ್ಷಕಿ ಸುನಂದಮ್ಮ ಅವರು, ಶಾಲೆಯಲ್ಲಿ 118 ಮಕ್ಕಳು ಕಲಿಯುತ್ತಿದ್ದು ಆಂಗ್ಲ ಮಾಧ್ಯದಲ್ಲಿ 50 ವಿದ್ಯಾರ್ಥಿಗಳಿದ್ದಾರೆ. ಶಾಲೆಗೆ ಮೂಲ ಸೌಲಭ್ಯಗಳು ಇಲ್ಲ, ಕಟ್ಟಡ ಸಮಸ್ಯೆ ಇದೆ. ಕಾಂಪೌAಡ್ ನಿರ್ಮಿಸಿಕೊಡಬೇಕು ಎಂದು ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಧ್ಯಕ್ಷ ರಂಗಸ್ವಾಮಿ ಅವರು, ವಿವಾದಿತ ಶಾಲಾ ಮೈದಾನದ ಸಮಸ್ಯೆ ಬಗೆಹರಿಸುವ ಸಂಬAಧ ಗ್ರಾಮಸ್ಥರು ಹಾಗೂ ಅಧಿಕಾರಿಗಳ ಗಮನಕ್ಕೆ ತಂದು ಆಡಳಿತಾತ್ಮಕವಾಗಿ ಒತ್ತಡ ತರದೆ ನಿರ್ಲಕ್ಷಿö್ಯಸಲಾಗುತ್ತಿದೆ. ಇದರಿಂದ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈ ಕುರಿತು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಗರಂ ಆದರು.
ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಧನಂಜಯ್, ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಶಿವಪ್ರಕಾಶ್ ಮಾತನಾಡಿ, ಮೈದಾನದ ಸುತ್ತ ಕಾಂಪೌAಡ್ ನಿರ್ಮಿಸಬೇಕು. ಕೆಂದಿಣ್ಣೆ ಭಾಗದ ಹಳ್ಳಿಗಳಿಂದ ಅಪಾರ ಮಕ್ಕಳು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಶಾಲೆಗೆ ಬರುತ್ತಿದ್ದಾರೆ. ಮಲ್ಲಿಪಟ್ಟಣದ ಇಕ್ಕಟ್ಟಾದ ಸರ್ಕಲ್‌ನ ತಿರುವಿನಲ್ಲಿ ಬಸ್ ಇಳಿಯಲು ಮಕ್ಕಳಿಗೆ ತೊಂದರೆಯಾಗಿದೆ ಎಂದರು. ಮುರಾರ್ಜಿ ದೇಸಾಯ ವಸತಿ ಶಾಲೆಯಲ್ಲಿ ಮಕ್ಕಳ ಸ್ನಾನಕ್ಕೆ ಬಿಸಿ ನೀರು ಇಲ್ಲವಾಗಿದೆ. ಕುಡಿಯುವ ನೀರಿಗೆ ತೊಂದರೆಯಾಗಿದೆ ಎಂದು ಮುಖ್ಯ ಶಿಕ್ಷಕಿ ಶೃತಿ ಸಭೆಗೆ ತಿಳಿಸಿದರು. ಸದ್ಯಕ್ಕೆ ಪಂಚಾಯಿತಿ ವತಿಯಿಂದ ನೀರಿನ ವ್ಯವಸ್ಥೆ ಒದಗಿಸಲಾಗಿದೆ. ಮುರಾರ್ಜಿ ದೇಸಾಯ ವಸತಿ ಶಾಲೆಯ ಕಟ್ಟಡದ ಮಾಲೀಕರು ಮಾಸಿಕವಾಗಿ 50 ಸಾವಿರ ರೂ ಬಾಡಿಗೆ ನೀಡುತ್ತಿದ್ದಾರೆ. ನೀರು ಪೂರೈಸಲು ಅವರು ಕ್ರಮ ಕೈಗೊಳ್ಳುವಂತೆ ಹೇಳಬೇಕು. ಎಲ್ಲದಕ್ಕೂ ಪಂಚಾಯಿತಿ ಕಡೆಗೆ ಬೆರಳು ತೋರಿಸುವುದು ಏಕೆ ಎಂದು ಪಿಡಿಒ ರಂಗಸ್ವಾಮಿ ಏರುಧ್ವನಿಯಲ್ಲಿ ಗದರಿದರು.
ಕೆನರಾ ಬ್ಯಾಂಕ್ ಶಾಲೆ ಅಧಿಕಾರಿ ಬ್ಯಾಂಕ್ ಸೇವೆ ಕುರಿತು ವಿವರಿಸಿದರು. ಪಶು ಆಸ್ಪತ್ರೆ ಸಹಾಯಕ ಮಂಜಪ್ಪ, ಕೃಷಿ ಇಲಾಖೆ ಸಹಾಯಕರಾದ ಹುಸೇನ್, ಕೃಷ್ಣ, ಲಕ್ಷಿö್ಮÃ ಹಾಗೂ ತೋಟಗಾರಿಕೆ ಇಲಾಖೆ ಸಹಾಯಕ ಧನಂಜಯ್ ಅವರು ಇಲಾಖೆಯಲ್ಲಿ ರೈತರಿಗೆ ಸಿಗುವ ಸವಲತ್ತುಗಳ ಕುರಿತು ಮಾಹಿತಿ ನೀಡಿದರು.
ಮಲೆನಾಡು ಹೋಬಳಿಯಾದ ಮಲ್ಲಿಪಟ್ಟಣದಲ್ಲಿ ಕಾಡಾನೆಗಳ ಹಾವಳಿಯಿಂದ ಬೆಳೆಗಳು ಹಾನಿಗೀಡಾಗುತ್ತಿವೆ. ಸಂತ್ರಸ್ಥ ರೈತರಿಗೆ ಪರಿಹಾರ ಒದಗಿಸಬೇಕು ಎಂದು ಅಧ್ಯಕ್ಷ ರಂಗಸ್ವಾಮಿ ಒತ್ತಾಯಿಸಿದರು.
ಇದಕ್ಕೂ ಮುನ್ನ ನಡೆದ ಅಂಗಡಿ, ಮಳಿಗೆಗಳ ವರ್ತಕರ ಸಭೆಯಲ್ಲಿ, ಗ್ರಾಮದ ಸರ್ಕಲ್‌ನಲ್ಲಿ ಆಟೋಗಳು ಹಾಗೂ ಖಾಸಗಿ ವಾಹನಗಳು ಅಡ್ಡಾದಿಡ್ಡಿಯಾಗಿ ನಿಲ್ಲುತ್ತಿದ್ದು ಅಂಗಡಿಗಳಿಗೆ ಬರುವ ಗ್ರಾಹಕರಿಗೆ ತೊಂದರೆಯಾಗಿದೆ. ಮಳಿಗೆಗಳ ಹಿಂಭಾಗದ ಸಂತೆಮಾಳದ ಜಾಗಕ್ಕೆ ಕಸ, ತ್ಯಾಜ್ಯ ಎಸೆಯಲಾಗುತ್ತಿದ್ದು ಅನೈರ್ಮಲ್ಯತೆಯಿಂದ ಕೂಡಿದೆ ಎಂದು ವ್ಯಾಪಾರಸ್ಥರು ಅಸಮಧಾನ ವ್ಯಕ್ತಪಡಿಸಿದರು. ಆಟೋ ನಿಲ್ದಾಣ ನಿರ್ಮಿಸಿ, ಕಸ ವಿಲೇವಾರಿಗೆ ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷ ರಂಗಸ್ವಾಮಿ ತಿಳಿಸಿದರು.
ಗ್ರಾಪಂ ಉಪಾಧ್ಯಕ್ಷೆ ಜಯಲಕ್ಷಿö್ಮÃ, ಸದಸ್ಯರಾದ ಪ್ರಕಾಶ್, ಯೋಗೇಶ್, ಪೂಜಾ, ಚಂದ್ರೇಗೌಡ, ನಾಗರಾಜು, ಸುಮಿತ್ರಮ್ಮ, ಯಶೋಧಮ್ಮ, ತಿಮ್ಮಯ್ಯ, ಲಲಿತ ಹಾಗೂ ಅಂಗನವಾಡಿ ಕಾರ್ಯಕರ್ತರು ಹಾಜರಿದ್ದರು.
0 Comments