ರಸ್ತೆ ವಿಸ್ತರಣೆ ಕಾಮಗಾರಿ ಅವೈಜ್ಞಾನಿಕವಾಗಿ ನಡೆದರೆ ಟೋಲ್ ವಸೂಲಿಗೆ ಅವಕಾಶವಿಲ್ಲ ಎಂದು ಎಚ್ಚರಿಸಿದ ಪ್ರತಿಭಟನಾಕಾರರು!

ಅರಕಲಗೂಡು: ತಾಲೂಕಿನಲ್ಲಿ ಹಾದು ಹೋಗಿರುವ ಮಾಗಡಿ- ಸೋಮವಾರಪೇಟೆ ಮಾರ್ಗದ ರಸ್ತೆ ವಿಸ್ತರಣೆ ಕಡಿತಗೊಳಿಸಿ ಅವೈಜ್ಞಾನಿಕವಾಗಿ ನಿರ್ಮಿಸಿದರೆ ಟೋಲ್ ವಸೂಲಿಗೆ ಸುರಾಂ ಅವಕಾಶ ನೀಡುವುದಿಲ್ಲ ಎಂದು   ಪ್ರತಿಭಟನಾಕಾರರು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಬಸವಾಪಟ್ಟಣದಲ್ಲಿ ಇಂದು ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ, ಮಾಗಡಿ- ಸೋಮವಾರಪೇಟೆ ಮಾರ್ಗದ ರಸ್ತೆಯನ್ನು ಸರಿಯಾಗಿ ಅಗಲೀಕರಣ ಗೊಳಿಸಿದೆ ಮನಸ್ಸೋ ಇಚ್ಚೆ ಕಿಷ್ಕಿಂದೆಗೊಳಿಸಿ ತೀರ ಅವೈಜ್ಞಾನಿಕವಾಗಿ ನಿರ್ಮಿಸಲಾಗುತ್ತಿದೆ.  ರಸ್ತೆ ನಿರ್ಮಾಣ ಕಾರ್ಯದಲ್ಲಿ ಹೆದ್ದಾರಿ ನಿಯಮಗಳನ್ನು  ಗಾಳಿಗೆ ತೂರಲಾಗಿದೆ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಯೋಗಣ್ಣ ಆರೋಪಿಸಿದರು.

ಮೂಲ ಡಿಪಿಆರ್ ಅನ್ನೇ ಸರಿಯಾಗಿ ಸಿದ್ದಪಡಿಸದೆ ಲೋಪ ಎಸಗಲಾಗಿದೆ. ಪುಟ್ ಪಾತ್, ಡಿವೈಡರ್, ವಾಹನಗಳ ಓಡಾಟಕ್ಕೆ ಮತ್ತೆದೆ ಸಂಕಷ್ಟ ಎದುರಾಗಲಿದೆ. ರಸ್ತೆ ಅಭಿವೃದ್ಧಿ ಸರಿಯಾಗದಿದ್ದರೆ ಟೋಲ್ ವಸೂಲಿಗೆ ಕಡಿವಾಣ ಹಾಕುವಂತೆ ಉಗ್ರ ಹೋರಾಟ ಮುಂದುವರಿಯಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ತಾಲೂಕು ರೈತ ಸಂಘದ ಕಾರ್ಯಕರ್ತರು, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರು, ಸ್ಥಳೀಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

Post a Comment

1 Comments

  1. ಪ್ರತೀ ಊರಿನಲ್ಲಿಯೂ ರಸ್ತೆ ವಿಬಜಿಕರ್ಣ (Road devider ) ಇರಬೇಕು

    ReplyDelete