ಅರಕಲಗೂಡು: ಕೋವಿಡ್- ೧೯ ಮೂರನೇ ಅಲೆ ಕಾಣಿಸಿಕೊಳ್ಳುವ ಹೊತ್ತಿಗೆ ಸೋಂಕಿತರಿಗೆ ಪ್ರಾಣವಾಯು ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ೩೫ ಲಕ್ಷ ರೂ ವೆಚ್ಚದಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆಗೆ ತತ್ವರಿ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಎ.ಟಿ. ರಾಮಸ್ವಾಮಿ ತಿಳಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಳಿ ಶುಕ್ರವಾರ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಕರೊನಾ ಒಂದು ಮತ್ತು ಎರಡನೇ ಅಲೆ ವೇಳೆ ಪ್ರಾಣವಾಯು ಕೊರತೆ ಪರಿಣಾಮ ಅನೇಕ ಜೀವಗಳನ್ನು ಕಳೆದುಕೊಳ್ಳಬೇಕಾಯಿತು. ಈ ಹಿನ್ನಲೆಯಲ್ಲಿ ಸರ್ಕಾರ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆಗೆ ಮುಂದಾಗಿದ್ದು ಇಲ್ಲಿಗೆ ಒಂದು ಘಟಕ ಮಂಜೂರು ಮಾಡಿದೆ ಎಂದರು.
ಆಮ್ಲಜನಕ ಉತ್ಪಾದನಾ ಘಟಕ ಒಂದು ತಿಂಗಳೊಳಗೆ ಬಹುಬೇಗ ಸ್ಥಾಪನೆಗೆ ಆರೋಗ್ಯ ಇಲಾಖೆ ಕ್ರಮ ವಹಿಸಿದೆ. ೫೦೦ ಲೀ ಸಾಮರ್ಥ್ಯ ಆಮ್ಲಜನಕ ಉತ್ಪಾದನೆಯಾಗಲಿದ್ದು ೧೦೦ ರೋಗಿಗಳಿಗೆ ಪ್ರಾಣವಾಯು ದೊರಕಲಿದೆ. ಇದು ಕರೊನಾ ಸೋಂಕಿತರಿಗೆ ನಿಜಕ್ಕೂ ಸಿಹಿ ಸುದ್ದಿ ಎನಿಸಲಿದೆ ಎಂದು ಹೇಳಿದರು.
ಪಪಂ ಅಧ್ಯಕ್ಷ ಹೂವಣ್ಣ, ಸದಸ್ಯರಾದ ಅನಿಕೇತನ್, ಅಬ್ದುಲ್ ಬಾಸಿದ್, ತಾಲೂಕು ಆರೋಗ್ಯಾಧಿಕಾರಿ ಡಾ. ಸ್ವಾಮಿಗೌಡ, ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ದೀಪಕ್ ಇತರರು ಇದ್ದರು.
ಸಂಪಾದಕ - ರವಿ
0 Comments