ಅತಿವೃಷ್ಟಿಯಿಂದ ಮನೆಗಳಿಗೆ ಹಾನಿ ಬೇಗ ಪರಿಹಾರ ಸಿಗುವಂತಾಗಲಿ : ಮಲ್ಲಿಪಟ್ಟಣ ಗ್ರಾಪಂ ಅಧ್ಯಕ್ಷ ರಂಗಸ್ವಾಮಿ

ಅರಕಲಗೂಡು: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪ್ರಕೃತಿ ವಿಕೋಪದಿಂದ ಹಾನಿಗೀಡಾದ ವಾಸದ ಮನೆಗಳ ಸ್ಥಳಕ್ಕೆ ಬುಧವಾರ ನ್ಯಾಯಾಧೀಶರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜೆಎಂಎಫ್‌ಸಿ ನ್ಯಾಯಾಧೀಶರಾದ ಮುಝಫರ್, ಹರೀಶ್ ಅವರು, ಮಲ್ಲಿಪಟ್ಟಣ ಗ್ರಾಪಂ ವ್ಯಾಪ್ತಿಯ ಮಣಜೂರು, ಮಾಗೋಡು, ಮಾಗೋಡು ಕೊಪ್ಪಲು, ದೊಡ್ಡಬೆಮ್ಮತ್ತಿ ಗ್ರಾಪಂ ವ್ಯಾಪ್ತಿಯ ಹೆಣ್ಣೂರು ಕೊಂಗಳಲೆ ಹಾಗೂ ಹೆಗ್ಗಡಿಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಹಾನಿಗೀಡಾದ ಮನೆಗಳನ್ನು ಪರಿಶೀಲಿಸಿ ಸಂತ್ರಸ್ತರ ಸಮಸ್ಯೆ ಆಲಿಸಿದರು.

ಅತಿಯಾದ ಮಳೆಗೆ ಸಿಲುಕಿದ ಮನವೆಗಳ ಗೋಡೆಗಳು ಕುಸಿದು ನಿವಾಸಿಗಳು ವಾಸಿಸಲು ಸೂರು ಇಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಇಂತವರಿಗೆ ಶೀಘ್ರ ಪರಿಹಾರ ದೊರಕಿಸಿಕೊಡಬೇಕು. ಈ ನಿಟ್ಟಿನಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.

ಉಪ ತಹಸೀಲ್ದಾರ್ ನಂಜೇಗೌಡ, ರಾಜಸ್ವ ನಿರೀಕ್ಷಕ ಶಶೀಧರ್, ಗ್ರಾಪಂ ಪಿಡಿಒ ರಂಗಸ್ವಾಮಿ ಮುಂತಾದವರು ಇದ್ದರು.

                   ಸಂಪಾದಕ - ರವಿ

Post a Comment

0 Comments