ಅರಕಲಗೂಡು: ಜಯ ಕರ್ನಾಟಕ ಜನಪರ ವೇದಿಕೆಯ ಯುವ ಸಂಸ್ಥಾಪಕ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಬಿ.ಗುಣರಂಜನ್ ಶೆಟ್ಟಿ ರವರ ನೇತೃತ್ವದಲ್ಲಿ, ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀ ಆರ್.ಚಂದ್ರಪ್ಪ ಅವರು ಅಧ್ಯಕ್ಷತೆಯಲ್ಲಿ,
ಅರಕಲಗೂಡು ಶಾಸಕರಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ತಮ್ಮ ಕ್ಷೇತ್ರದ ಜನರಿಗೆ ಅನುಕೂಲವಾಗುವಂತೆ ಉಚಿತವಾಗಿ ಲಸಿಕೆ ಕೊಡಿಸುವುದರ ಜೊತೆಗೆ ಕೊರೋನಾ 3ನೇ ಅಲೆಯಲ್ಲಿ ಮಕ್ಕಳನ್ನು ರಕ್ಷಿಸಲು ಮುಂಜಾಗೃತ ಕ್ರಮವನ್ನು ಕೈಗೊಳ್ಳಲು ಹಾಗೂ ಕೊರೋನ ಮೂರನೇ ಅಲೆಗೆ ಭಾರತ ದೇಶದ ಭವಿಷ್ಯವಾಗಿರುವ ಈ ಮಕ್ಕಳ ಆರೋಗ್ಯಕ್ಕೆ ಯಾವುದೇ ತೊಂದರೆಗೆ ಎಡೆ ಮಾಡಿಕೊಡದೆ ನಮ್ಮ ರಾಜ್ಯದ ಜನರಲ್ಲಿ ಜಾಗೃತಿ ಮೂಡಿಸಿ ಸೋಂಕು ಹೆಚ್ಚಾಗದಂತೆ ಕಾರ್ಯನಿರ್ವಹಿಸಿ, ಕಡ್ಡಾಯವಾಗಿ ಕೊರೋನ ಲಸಿಕೆ ಕೊಡಿಸುವ ಕಾರ್ಯ ಮಾಡಿಸುವ ವಿಚಾರವಾಗಿ ಹಲವು ಗಂಟೆಗಳ ಕಾಲ ಚರ್ಚಿಸಿ ಮನವಿಯನ್ನು ಸಲ್ಲಿಸಲಾಯಿತು.
ಇದಕ್ಕಾಗಿ ನಿಮ್ಮೊಡನೆ ಸದಾ ನಮ್ಮ ಜಯಕರ್ನಾಟಕ ಜನಪರ ವೇದಿಕೆಯ ಎಲ್ಲಾ ಸದಸ್ಯರು ಸಹ ಯೋಧರಂತೆ ನಿರಂತರವಾಗಿ ನಿಮ್ಮ ಜೊತೆ ಪ್ರಾಮಾಣಿಕವಾಗಿ ಕೈ ಜೋಡಿಸಿ ಕೊರೋನಾ ಎಂಬ ಮಹಾಮಾರಿಯನ್ನು ರಾಜ್ಯದಿಂದ ತೊಲಗಿಸಿ ಕೊರೋನ ಮುಕ್ತ ರಾಜ್ಯವನ್ನಾಗಿ ಮಾಡಲು ಸದಾ ನಿಮ್ಮೊಂದಿಗೆ ಇರುತ್ತೇವೆ ಎಂದು ಅರಕಲಗೂಡು ತಾಲೂಕು ಅಧ್ಯಕ್ಷರಾದ ಮಂಜುನಾಥ್ ಕಾಕೋಡನಹಳ್ಳಿ ಹಾಗೂ ಸದಸ್ಯರುಗಳಾದ ರಂಜಿತ್. ರಘು. ಹರೀಶ್ .ಪ್ರದೀಪ. ಮತ್ತು ಇತರರು ಇದರು.
ಸಂಪಾದಕ - ರವಿ
0 Comments