ಅಂತೂ ಅಬ್ಬರಿಸಿದ ವರುಣ ಬೆಳೆಗಳು ಹಸಿರಾಗಿ ರೈತ ಫುಲ್ ಖುಷ್

 

ಅರಕಲಗೂಡು: ತಾಲೂಕಿನಲ್ಲಿ ಮಂಗಳವಾರ ಧಾರಾಕಾರವಾಗಿ ಸುರಿದ ಸೋನೆ ಮಳೆ ಒಣಗುತ್ತಿದ್ದ ಬೆಳೆಗಳಿಗೆ ವರದಾನವಾಗಿ ಪರಿಣಮಿಸಿತು.

ಕಳೆದೆರಡು ದಿನಗಳಿಂದ ಸಾಧಾರಣವಾಗಿ ಮೋಡು ಮುಸುಕಿದ ವಾತಾವರಣದ ನಡುವೆ ತುಂತುರು ಮಳೆ ಬೀಳುತ್ತಿತ್ತು. ಅಗಸದಲ್ಲಿ ಮಳೆ ಮೋಡಗಳು ದಟ್ಟೆöÊಸಿದ್ದರೂ ಇಳೆಗೆ ಜೋರು ಮಳೆ ಬೀಳದೆ ರೈತಾಪಿ ವರ್ಗದ ಜನರಲ್ಲಿ ನಿರಾಸೆ ಮೂಡಿಸುತ್ತಿತ್ತು. ಮಂಗಳವಾರ ಬೆಳಗಿನಿಂದ ದಿನವಿಡೀ ಬಿಟ್ಟು ಬಿಟ್ಟು ಹದ ಮಳೆ ಸುರಿದು ಬೆಳೆಗಳಿಗೆ ಜೀವ ಕಳೆ ತುಂಬಿತು.

ಕೆಲ ವಾರಗಳಿಂದ ಮಳೆ ಮಾಯವಾಗಿದ್ದು ರೈತರು ಮುಗಿಲಿನತ್ತ ದೃಷ್ಟಿ ನೆಟ್ಟಿದ್ದರು. ವರುಣನ ಅವಕೃಪೆಗೆ ತುತ್ತಾಗಿ ಬಿತ್ತಿದ್ದ ಬೆಳೆಗಳು ಬಾಡುತ್ತಿದ್ದವು. ಬಿಸಿಲಿನ ತಾಪಕ್ಕೆ ಒಣಗಿದ್ದ ಬೆಳೆಗಳು ನೆಲಕಚ್ಚುವ ಆತಂಕ ಎದುರಾಗಿತ್ತು. ಇದೀಗ ಬಿದ್ದ ಸೋನೆ ಮಳೆ ಸಾಯುತ್ತಿದ್ದ ಬೆಳೆಗಳಿಗೆ ಚೈತನ್ಯ ನೀಡಿತು.

ತಾಲೂಕಿನಲ್ಲಿ ಈ ಬಾರಿ ಅಪಾರ ಪ್ರಮಾಣದಲ್ಲಿ ರೈತರು ಮುಸುಕಿನ ಜೋಳದ ಬೆಳೆಗೆ ಮೊರೆ ಹೋಗಿದ್ದಾರೆ. ಮಲ್ಲಿಪಟ್ಟಣ, ದೊಡ್ಡಬೆಮ್ಮತ್ತಿ, ಕೊಣನೂರು, ರಾಮನಾಥಪುರ, ಕಸಬಾ, ದೊಡ್ಡಮಗ್ಗೆ ಹೋಬಳಿ ಭಾಗದಲ್ಲಿ ಎತ್ತ ನೋಡಿದರೂ ಮುಸುಕಿನ ಜೋಳದ ಬೆಳೆ ಕಣ್ಣಿಗೆ ಬೀಳುತ್ತಿದೆ. ಮಳೆಯಿಲ್ಲದೆ ಬಾಡಿ ನಾಶವಾಗುತ್ತಿದ್ದ ಬೆಳೆ ಇದೀಗ ಹಸಿರಿನಿಂದ ಕಂಗೊಳಿಸುತ್ತಿದೆ.

ಪ್ರಮುಖ ವಾಣಿಜ್ಯ ಬೆಳೆಗಳಾದ ಆಲೂಗಡ್ಡೆ ಮತ್ತು ಹೊಗೆಸೊಪ್ಪು ಬೆಳೆಗಳ ಬೆಳವಣಿಗೆಗೆ ಮಳೆ ಅನುಕೂಲಕರವಾಗಿದೆ. ಹಲವೆಡೆ ಮಳೆ ನಡುವೆಯೇ ರೈತರು ಹೊಗೆಸೊಪ್ಪು ಬೆಳೆಗೆ ಮೇಲು ಗೊಬ್ಬರ ನೀಡಿದ್ದರು. ಆಲೂಗಡ್ಡೆ ಬೆಳೆ ಕಳೆ ತೆಗೆದು ಗಿಡಗಳ ಆರೈಕೆಯಲ್ಲಿ ತೊಡಗಿದ್ದ ದೃಶ್ಯ ಕಂಡುಬAತು.

ಮಳೆ ಕೈಕೊಟ್ಟ ಪರಿಣಾಮ ಬೆಳೆಗಳೆಲ್ಲ ಬಾಡುತ್ತಿದ್ದವು. ಸಾಲ ಮಾಡಿ ಬಿತ್ತಿದ ಬೆಳೆಗಳಿಗೆ ರಸಗೊಬ್ಬರ ನೀಡಿ ಕೈತೊಳೆದುಕೊಂಡಿದ್ದೆವು. ಇನ್ನೇನು ಬೆಳೆ ಹಾಳಾಯಿತು ಎನ್ನುವಷ್ಟರಲ್ಲಿ ಕಡೆಗೂ ಹದ ಮಳೆ ಬಿದ್ದು ಬೆಳೆಗಳನ್ನು ಉಳಿಸಿದೆ ಎಂದು ರೈತ ಸಣ್ಣೇಗೌಡ ಸಂತಸ ವ್ಯಕ್ತಪಡಿಸಿದರು.

 

ಸಂಪಾದಕ - ರವಿ

Post a Comment

0 Comments