ಸಾರ್ವಜನಿಕ ಆಸ್ಪತ್ರೆಗೆ ೩.೫೦ ಲಕ್ಷ ಮೌಲ್ಯದ ಎಬಿಜಿ ಉಪಕರಣ ಹಸ್ತಾಂತರಿಸಿದ ಶಾಸಕ

ಅರಕಲಗೂಡು: ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಶುಕ್ರವಾರ 3.50 ಲಕ್ಷ ಮೌಲ್ಯದ ಎಬಿಜಿ ಉಪಕರಣವನ್ನು ನೀಡಲಾಯಿತು.

ಶಾಸಕ ಎ.ಟಿ. ರಾಮಸ್ವಾಮಿ ಅವರು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ದೀಪಕ್ ಅವರಿಗೆ ಹಸ್ತಾಂತರಿಸಿ ಮಾತನಾಡಿ, ಶ್ರೀ ದೊಡ್ಡಮ್ಮ ದೇವಸ್ಥಾನ ಸೇವಾ ಸಮಿತಿ, ದಾನಿ ಸುರೇಶ್ ಹಾಗೂ ಆರೋಗ್ಯ ರಕ್ಷಾ ಸಮಿತಿ ವತಿಯಿಂದ ಕೊಡುಗೆಯಾಗಿ ನೀಡಿರುವ ಎಬಿಜಿ ಉಪಕರಣ ತುರ್ತು ಆರೋಗ್ಯ ಪರೀಕ್ಷೆಗೆ ಅನುಕೂಲಕವಾಗಿದೆ ಎಂದರು.

ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ದೀಪಕ್ ಮಾತನಾಡಿ, ತಾಲೂಕು ಆಸ್ಪತ್ರೆಗೆ ಇದೇ ಮೊದಲ ಬಾರಿ ಉಪಯುಕ್ತವಾದ ಎಬಿಜಿ ಮಿಷಿನ್ ಕೊಡುಗೆಯಾಗಿ ನೀಡಲಾಗಿದ್ದು ದಾನಿಗಳಿಗೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ. ಸ್ವಾಮಿಗೌಡ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಂ.ಸಿ. ರಂಗಸ್ವಾಮಿ, ದೊಡ್ಡಮ್ಮ ಸೇವಾ ಸಮಿತಿ ಅಧ್ಯಕ್ಷ ಎ.ಎಸ್. ರಾಮಸ್ವಾಮಿ, ಕಾರ್ಯದರ್ಶಿ ಶಶಿಕುಮಾರ್, ಆರೋಗ್ಯ ರಕ್ಷಾ ಸಮಿತಿಯ ಎನ್. ರವಿಕುಮಾರ್, ಬೆಮ್ಮತ್ತಿ ಸುರೇಶ್, ಪಪಂ ಅಧ್ಯಕ್ಷ ಹೂವಣ್ಣ, ಮಾಜಿ ಅಧ್ಯಕ್ಷ ಲೋಕೇಶ್, ಸಿಬ್ಬಂದಿ ಇದ್ದರು.

                       -ಸಂಪಾದಕ - ರವಿ

Post a Comment

0 Comments