ಕುಟುಂಬ ಕಲ್ಯಾಣ ಕಾರ್ಯಕ್ರಮಗಳು ಸದುಪಯೋಗವಾಗಲಿ ಕಾಂತಮಣಿ ಅಭಿಲಾಷೆ

ಅರಕಲಗೂಡು: ದೇಶದ ಅನೇಕ ಸಮಸ್ಯೆಗಳಿಗೆ ಜನಸಂಖ್ಯಾ ಸ್ಫೋಟವು ಕಾರಣವಾಗಿದೆ. ಹಾಗಾಗಿ ಜನಸಂಖ್ಯೆ ನಿಯಂತ್ರಣಕ್ಕೆ ಕಡಿವಾಣ ಹಾಕಿ ದುರಷ್ಪರಿಣಾಮಗಳನ್ನು ತಡೆಗಟ್ಟುವುದು ಅನಿವಾರ್ಯವಾಗಿದೆ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕಾಂತಾಮಣಿ ತಿಳಿಸಿದರು.

ಪಟ್ಟಣದ ಆರ್ಯುವೇದ ಆಸ್ಪತ್ರೆ ಆವರಣದಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ವಿಶ್ವ ಜನಸಂಖ್ಯಾ ದಿನಾಚರಣೆ ಪ್ರಯುಕ್ತ ಶನಿವಾರ ಆಯೋಜಿಸಿದ್ದ ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜನಸಂಖ್ಯಾ ಸ್ಥಿರತೆ ಕಾಪಾಡಲುÄ ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಕನಿಷ್ಠ ಮೂರು ವರ್ಷ ಅಂತರವಿರಬೇಕು. ತಾತ್ಕಾಲಿಕ ವಿಧಾನಗಳಾದ ವೆಂಕಿ (ಐಯುಸಿಡಿ) ಅಳವಡಿಕೆ, ದಿನಾಲು ನುಂಗುವ ಮಲಾ ಎನ್ ಮಾತ್ರೆಗಳು, ವಾರಕ್ಕೊಮ್ಮೆ ತೆಗೆದುಕೊಳ್ಳುವ ಛಾಯಾ ಮಾತ್ರೆಗಳು, ಮೂರು ತಿಂಗಳಿಗೊಮ್ಮೆ ತೆಗೆದುಕೊಳ್ಳುವ ಅಂತರ ಇಂಜೆಕ್ಷನ್, ಕಾಂಡೊಮ್ಸ್ ಬಳಕೆ. ಶಾಶ್ವತ ವಿಧಾನಗಳಾದ ಟ್ಯೂಬೆಕ್ಟಮಿ, ಲ್ಯಾಪ್ರೊಸ್ಕೋಪಿಕ್, ಪುರುಷ ಸಂತಾನಹರಣ ಶಸ್ತ್ರಚಿಕಿತ್ಸೆ ಮುಖ್ಯ. ಎಲ್ಲಾ ಸೇವೆಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ದೊರೆಯುತ್ತವೆ ಎಂದು ಸಾರ್ವಜನಿಕರಿಗೆ ಮಾಹಿತಿ ನೀಡಿದರು.

ಸಾರ್ವಜನಿಕರು ವಸ್ತು ಪ್ರದರ್ಶನವನ್ನು ವೀಕ್ಷಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಆರೋಗ್ಯ ಶಿಕ್ಷಣಾಧಿಕಾರಿಗಳಾದ ಪರಮೇಶ್, ಲಕ್ಷ್ಮಣಗೌಡ, ಕವಿತ ಸುಬ್ರಮಣ್ಯ, ವನಿತಾ ಮುಂತಾದವರು ಹಾಜರಿದ್ದರು.


                           ಸಂಪಾದಕ - ರವಿ


Post a Comment

0 Comments