ಪ್ರತಿಭಟನಾ ವೇಳೆ ಆಡಿದ ಮಾತಿಗೆ ವಿಷಾದವಿದೆ ಎಂದು ಸ್ಪಷ್ಟನೆ ನೀಡಿದ ಪ್ರಸನ್ನ ಕುಮಾರ್

ಅರಕಲಗೂಡು:  ತೈಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ  ಕಾಂಗ್ರೆಸ್ ಪಕ್ಷ ಪಟ್ಟಣದಲ್ಲಿ  ಇತ್ತೀಚೆಗೆ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ತಾವು ಆಡಿದ ಮಾತುಗಳ ಕುರಿತು ವಿಷಾದ ವ್ಯಕ್ತಪಡಿಸುವುದಾಗಿ ಕಾಂಗ್ರಸ್ ಪಕ್ಷದ  ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಎಸ್. ಪ್ರಸನ್ನ ಕುಮಾರ್  ಸ್ಪಷ್ಟಪಡಿಸಿದರು. 

ತಾವು ಯಾವುದೇ ದುರುದ್ದೇಶದಿಂದ  ಬಿಜೆಪಿ ನಾಯಕರ ಕುರಿತು ಅನುಚಿತ ಮಾತುಗಳನ್ನು ಆಡಿಲ್ಲ. ಕೋವಿಡ್  ಸಮಸ್ಯೆ ನಿಭಾಯಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವೈಫಲ್ಯ ಕುರಿತು ಜನಸಾಮಾನ್ಯರು ಮಾಧ್ಯಮಗಳಲ್ಲಿ ವ್ಯಕ್ತಪಡಿಸಿದ ಭಾವನೆಗಳನ್ನೆ  ನಾನು ಸಹ ಸಭೆಯಲ್ಲಿ ಪ್ರಸ್ತಾಪಿಸಿದ್ದು ಇದು  ನನ್ನ ವೈಯುಕ್ತಿಕ  ಅಭಿಪ್ರಾಯವಲ್ಲ  ಎಂದು ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದರು. 

ತೈಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ರಾಜ್ಯದಲ್ಲಿ ಕಾಂಗ್ರೆಸ್ ನಿರಂತರ ಹೋರಾಟ ನಡೆಸುತ್ತಾ ಬಂದಿದೆ.  ಸರ್ಕಾರಗಳ ಜನ ವಿರೋಧಿ ನೀತಿ  ಖಂಡಿಸಿ ಪ್ರತಿಭಟನೆ ನಡೆಸುವ ವೇಳೆ ಅಧಿಕಾರದಲ್ಲಿದ್ದ ನಾಯಕರನ್ನು ಟೀಕಿಸುವುದು ಸಾಮಾನ್ಯ ಸಂಗತಿ.  ಇದನ್ನು ಅರಗಿಸಿಕೊಳ್ಳಲಾರದ ವಿರೋಧಿಗಳು  ಸಲ್ಲದ ಅಪ್ರಚಾರ ನಡೆಸಲು ಮುಂದಾಗಿದ್ದು ಇದು  ಖಂಡನೀಯವಾಗಿದೆ ಎಂದರು.

ಕಾಂಗ್ರೆಸ್ ಮುಖಂಡ  ಎಂ.ಕೆ. ಶೇಷೇಗೌಡ ಮಾತನಾಡಿ ಜನಪರವಾಗಿ ತಮ್ಮ ಪಕ್ಷ ಹೋರಾಟ ನಡೆಸುತ್ತಿದ್ದು ಇದನ್ನು ಸಹಿಸಲಾರದ ಬಿಜೆಪಿಯವರು ವಿರೋಧ ಪಕ್ಷಗಳ  ಬಾಯಿ ಮುಚ್ಚಿಸಲು ಸಲ್ಲದ ಟೀಕೆ ಮಾಡುತ್ತಿದ್ದಾರೆ. ಬಿಜೆಪಿ ಎಂದು ಹೇಳಿಕೊಳ್ಳುವ ಇವರು ಕೆಪಿಸಿಸಿ ಅಧ್ಯಕ್ಷರು ಮತ್ತು ವಿರೋಧ ಪಕ್ಷದ ನಾಯಕರ ಮನೆಯಲ್ಲಿ ಇರುತ್ತಾರೆ. ಕಾಂಗ್ರೆಸ್ ಅಧ್ಯಕ್ಷರ ಕುರಿತು ಪ್ರಶ್ನಿಸಲು ಇವರಿಗೆ ನೈತಿಕತೆ ಇಲ್ಲ  ಎಂದು ತಿರುಗೇಟು ನೀಡಿದರು. 

ಮೋದಿ ಮತ್ತು ಯಡಿಯೂರಪ್ಪ ವಿರುದ್ದ  ಆ ಪಕ್ಷದವರಲ್ಲೇ ಆಕ್ಷೇಪವಿದೆ. ತಮ್ಮ ಪಕ್ಷದವರ ಹುಳುಕುಗಳನ್ನು ಮುಚ್ಚಿಕೊಳ್ಳಲಾಗದೆ ವಿರೋಧ ಪಕ್ಷದವರ ಕಡೆಗೆ ಬೆರಳು ತೋರಿಸುವುದು ಏಕೆ ಎಂದು ಗುರಪ್ಪ ಗರಂ ಆದರು.

 ಕೆಪಿಸಿಸಿ ಸದಸ್ಯ ಎಚ್.ಟಿ.ಮಂಜುನಾಥ್, ಪಪಂ ಸದಸ್ಯ ಪ್ರದೀಪ್ ಕುಮಾರ್, ಮುಖಂಡರಾದ ಸಲೀಂ ಅಹಮದ್, ಗಣೇಶ್ ವೇಲಾಪುರಿ ಗೋಷ್ಠಿಯಲ್ಲಿದ್ದರು.


                       -ಸಂಪಾದಕ - ರವಿ

Post a Comment

0 Comments