ಗ್ರಾಮಸಭೆಗೆ ಗೈರಾಗದೇ ಅಧಿಕಾರಿ ವರ್ಗ ಪಾಲ್ಗೊಳ್ಳುವಿಕೆ ಮುಖ್ಯ, ಅಧ್ಯಕ್ಷ ರಂಗಸ್ವಾಮಿ

ಅರಕಲಗೂಡು: ಸಾರ್ವಜನಿಕರು ಗ್ರಾಮಸಭೆಗಳಿಗೆ ಸಕ್ರೀಯವಾಗಿ ಪಾಲ್ಗೊಂಡು ತಮ್ಮೂರಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಆಸಕ್ತಿ ವಹಿಸಬೇಕು ಎಂದು ಮಲ್ಲಿಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ ತಿಳಿಸಿದರು.

ತಾಲೂಕಿನ ಮಲ್ಲಿಪಟ್ಟಣ ಸಮುದಾಯ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಗ್ರಾಮಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿಗಳು ಸ್ಥಳೀಯ ಸರ್ಕಾರಗಳಿದ್ದಂತೆ. ಪಂಚಾಯಿತಿ ವತಿಯಿಂದ ನಡೆಸುವ ಇಂದಿನ ಗ್ರಾಮ ಸಭೆಗೆ ಅಧಿಕಾರಿಗಳು ಗೈರಾಗಿದ್ದಾರೆ. ವ್ಯಾಪಕವಾಗಿ ಪ್ರಚಾರ ಕೈಗೊಂಡರೂ ವಾರ್ಡ್ ಸಭೆಗಳಿಗೂ ಜನರು ಹಾಜರಾಗಲಿಲ್ಲ. ಗ್ರಾಮಾಭಿವೃದ್ಧಿ ಆಶಯ ಈಡೇರಲು ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯ ಎಂದರು.
ಅರೆಮಲೆನಾಡು ಪ್ರದೇಶವಾದ ಮಲ್ಲಿಪಟ್ಟಣ ಹೋಬಳಿಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು ಗ್ರಾಮ ಸಭೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಜರಾಗಲಿಲ್ಲ. ಸಭೆಗೆ ಗೈರಾದ ಇಲಾಖೆಗಳಿಗೆ ನೋಟೀಸ್ ನೀಡಲಾಗುವುದು ಎಂದು ತಿಳಿಸಿದರು.
ನೋಡೆಲ್ ಅಧಿಕಾರಿ ಎಸ್.ಎನ್. ಶಿವಕುಮಾರ್, ಗ್ರಾಪಂ ಪಿಡಿಒ ರಂಗಸ್ವಾಮಿ ಮಾತನಾಡಿದರು. ಉಪಾಧ್ಯಕ್ಷೆ ಜಯಲಕ್ಷಿö್ಮ, ಸದಸ್ಯರಾದ ಸುಮಿತ್ರಮ್ಮ, ಪೂಜಾ, ನಾಗರಾಜು, ಲಲಿತಮ್ಮ, ಚಂದ್ರೇಗೌಡ, ಯೋಗೇಶ್, ಯಶೋಧಮ್ಮ, ಪ್ರಕಾಶ್, ರಾಜಸ್ವ ನಿರೀಕ್ಷಕ ಶಶಿಕುಮಾರ್, ವೈದ್ಯಾಧಿಕಾರಿ ಡಾ. ಮಾನಸ, ಕೃಷಿ ಸಹಾಯಕಿ ಹರ್ಷಿತಾ ಮತ್ತಿತರರು ಉಪಸ್ಥಿತರಿದ್ದರು. ವಿವಿಧ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸಲಾಯಿತು.

                        -ಸಂಪಾದಕ - ರವಿ

Post a Comment

0 Comments