ಆನಂದೂರು ಯುವಕ ನಾಪತ್ತೆ ಪೊಲೀಸರಿಗೆ ದೂರು

ಅರಕಲಗೂಡು: ತಾಲೂಕಿನ ಆನಂದೂರು ಗ್ರಾಮದಲ್ಲಿ 32 ವರ್ಷ ವಯಸ್ಸಿನ ವ್ಯಕ್ತಿ ಕಾಣೆಯಾಗಿದ್ದಾನೆ.

ಗ್ರಾಮದ ಗಂಗಾಧರ್ ನಾಪತ್ತೆಯಾದವ. ಜೂನ್ 13ರಂದು ರಾಮನಾಥಪುರಕ್ಕೆ ಹೋಗಿ ಬರುವುದಾಗಿ ತೆರಳಿದ್ದ ಗಂಗಾಧರ್ ಸಂಜೆಯಾದರೂ ವಾಪಾಸ್ಸಾಗಲಿಲ್ಲ. ಸಂಬಂಧಿಕರ ಮನೆಗಳಲ್ಲಿ ಹುಡುಕಿದರೂ ಪತ್ತೆಯಾಗಿಲ್ಲ.

ಕಾಣೆಯಾದ ಮಗನನ್ನು ಪತ್ತೆಹಚ್ಚಿಕೊಂಡಬೇಕು ಎಂದು ಗಂಗಾಧರ್ ತಾಯಿ ಚೆನ್ನಮ್ಮ ಕೊಣನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


                    ಸಂಪಾದಕ - ರವಿ                    

Post a Comment

0 Comments