ಅರಕಲಗೂಡು: ತಾಲೂಕಿನ ಬರಗೂರು ಕೋವಿಡ್ ಕೇರ್ ಸೆಂಟರ್‌ನಲ್ಲಿ ಕಾಂಗ್ರೆಸ್ ಮುಖಂಡ ಡಾ. ದಿನೇಶ್ ಭೈರೇಗೌಡ ಅವರು ಸೋಂಕಿತರಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕು ಬ್ಲಾಂಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕ್ಷೇತ್ರದಲ್ಲಿ 40 ವರ್ಷಗಳ ಕಾಲ ರಾಜಕಾರಣದಲ್ಲಿ ಉತ್ತಮ ಜನಸೇವೆ ಸಲ್ಲಿಸಿದ್ದ ತಮ್ಮ ತಂದೆ ದಿ. ಕಬ್ಬಳಿಗೆರೆ ಭೈರೇಗೌಡರ ಮೂರನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಸೋಂಕಿತರಿಗೆ ನೆರವು ನೀಡುತ್ತಿದ್ದೇನೆ. ಕೊಣನೂರು, ರಾಮನಾಥಪುರ, ಬೆಳವಾಡಿ, ದೊಡ್ಡಮಗ್ಗೆ ಸರ್ಕಾರಿ ಆಸ್ಪತ್ರೆಗಳಿಗೆ ಎಮರ್ಜೆನ್ಸಿ ಔಷಧಿ, ಆಕ್ಸನ್ ಕಾನ್ಸಟೆಂಟರ್, ಪಲ್ಸ್ ಆಕ್ಸೋಮೀಟರ್ ಉಪಕರಣ, ಸ್ಯಾನಿಟೈಸರ್ ಮತ್ತಿತರ ಔಷಧಿಗಳನ್ನು ವಿತರಿಸಲಾಗಿದೆ ಎಂದು ಹೇಳಿದರು.
ಕರೊನಾ ಸೋಂಕಿನ ಎರಡನೇ ಅಲೆ ಇನ್ನೂ ತಗ್ಗಿಲ್ಲ. ಈ ನಡುವೆ ದೇಶದ ಹಲವೆಡೆ ಡೆಲ್ಟಾ ಪ್ಲಸ್ ಸೋಂಕು ಹರಡುತ್ತಿದೆ. ಎಲ್ಲರೂ ಮಾಸ್ಕ್ ಧರಿಸಿ ಸುರಕ್ಷತಾ ಕ್ರಮಗಳನ್ನು ಪಾಲಿಸುವುದು ಅನಿವಾರ್ಯವಾಗಿದೆ ಎಂದರು.
ಸಂಪಾದಕ - ರವಿ
0 Comments