ಅರಕಲಗೂಡು: ತಾಲೂಕಿನ ರಾಮನಾಥಪುರ ಪ್ರವಾಸಿ ಮಂದಿರದಲ್ಲಿ ಇತ್ತೀಚೆಗೆ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಪದಾಧಿಕಾರಿಗಳ ಸಭೆ ಆಯೋಜಿಸಲಾಗಿತ್ತು.
ಅರಕಲಗೂಡು ತಾಲೂಕು ಘಟಕದ ಅಧ್ಯಕ್ಷರಾಗಿ ಲಿಂಗರಾಜ, ಹೊಳೆನರಸೀಪುರ ತಾಲೂಕು ರಘು, ಚನ್ನರಾಯಪಟ್ಟಣ ತಾಲೂಕು ಅಶೋಕ್, ಅರಸೀಕೆರೆ ತಾಲೂಕು ಅಧ್ಯಕ್ಷ ರವಿ, ಹಾಸನ ತಾಲೂಕು ಅಧ್ಯಕ್ಷ ನಾಗರಾಜ್ ಆಲೂರು ತಾಲೂಕು ಅಧ್ಯಕ್ಷ ಗಣೇಶ್, ಬೇಲೂರು ತಾಲೂಕು ಅಧ್ಯಕ್ಷ ಪರಮೇಶ್ ಹಾಗೂ ಸಕಲೇಶಪುರ ತಾಲೂಕು ಅಧ್ಯಕ್ಷರಾಗಿ ಎಂ.ಎಂ. ಸಂತೋಷ ಅವರನ್ನು ನೇಮಕ ಮಾಡಲಾಯಿತು.
ಆರ್‌ಪಿಐ ಜಿಲ್ಲಾ ಘಟಕದ ಅಧ್ಯಕ್ಷ ಪುಟ್ಟರಾಜು ಮಾತನಾಡಿ, ಸಂಘ ಸ್ಥಾಪನೆ ಮುಖ್ಯವಲ್ಲ, ಅದರ ಉದ್ದೇಶಗಳು ಸಕಾರಾತ್ಮಕ ರೀತಿಯಲ್ಲಿ ಸಾಕಾರವಾಗಿ ಸಾರ್ವಜನಿಕರ ಆಗು ಹೋಗುಗಳಿಗೆ ಸ್ಪಂದಿಸುವಂತಿರಬೇಕು. ಸದ್ಯಕ್ಕೆ ಮಹಾಮಾರಿ ಕೋವಿಡ್ ಸೋಂಕು ತಡೆಗಟ್ಟಲು ಎಲ್ಲರೂ ಒಗ್ಗಟ್ಟಿನಿಂದ ಸ್ವಯಂ ಪ್ರೇರಿತವಾಗಿ ಶ್ರಮಿಸಬೇಕು ಎಂದು ತಿಳಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೇತನ್‌ಗೌಡ ಮುಂತಾದವರು ಹಾಜರಿದ್ದರು.
ಸಂಪಾದಕ - ರವಿ
0 Comments