ಮಲ್ಲಿಪಟ್ಟಣದಲ್ಲಿ ಕೋವಿಡ್ ವಾರಿಯರ್ಸ್ ಗಳಿಗೆ ಸಹಾಯ ಧನ ನೀಡಿ ಮಾದರಿಯಾದ ರಮೇಶ್ ಕುಮಾರ್ ಎಂಬ ಮಾನವೀಯ ಕೃಷಿ ಅಧಿಕಾರಿ


ಅರಕಲಗೂಡು: ತಾಲೂಕಿನ ಮಲ್ಲಿಪಟ್ಟಣದಲ್ಲಿ ನಡೆದ ಕೋವಿಡ್ ವಾರಿಯರ್ಸ್ ಗಳ ಸಭೆಯಲ್ಲಿ ನೋಡೆಲ್ ಅಧಿಕಾರಿಯೂ ಆದ ಕೃಷಿ ಸಹಾಯಕ ನಿರ್ದೇಶಕ ರಮೇಶ್  ಕುಮಾರ್ ಅವರು ಕರೊನಾ‌ ಸೇನಾನಿಗಳಿಗೆ ಸಹಾಯ ಧನದ ನೀಡಿ ಅವರಿಗೆ ಸಂಕಷ್ಟ ಸಮಯದ ಮಾನವೀಯ ನೆಲೆಗೆ ಪ್ರತ್ಯಕ್ಷ ಸಾಕ್ಷಿಯಾದರು.

ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿದ್ದ ಶಾಸಕ ಎ.ಟಿ. ರಾಮಸ್ವಾಮಿ, ತಹಸೀಲ್ದಾರ್ ವೈ.ಎಂ. ರೇಣುಕುಮಾರ್, ತಾಪಂ ಇಒ ರವಿಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ. ಸ್ವಾಮಿಗೌಡ ಮತ್ತಿತರ ಗಣ್ಯರು ನೆರೆದಿದ್ದ ಸಮ್ಮುಖದಲ್ಲಿ ರಮೇಶ್ ಕುಮಾರ್ ಅವರು ಕೋವಿಡ್ ವಾರಿಯರ್ಸ್ ಗಳಿಗೆ ಗಣ್ಯರಿಂದ ಚೆಕ್ ವಿತರಿಸಿದರು.

ತನ್ನಯ ಕೃಷಿ ಇಲಾಖೆ ಕರ್ತವ್ಯದಲ್ಲಷ್ಟೆ ಅಲ್ಲದೆ ನೋಡೆಲ್ ಅಧಿಕಾರಿಯಾಗಿ ನೇಮಕಗೊಂಡ ನಂತರ ಕೋವಿಡ್ ಸೋಂಕು ತಡೆಗೆ ಕಟ್ಟುನಿಟ್ಟಿನ ಕ್ರಮಗಳನ್ನು‌ಪರಿಣಾಮಕಾರಿಯಾಗಿ ಅನುಸರಿಸಿ, ರೋಗದಿಂದ ಜನರ ಜೀವ ಉಳಿಸುವ ದಿಸೆಯಲ್ಲಿ ಯೋಜನಾಬದ್ಧವಾಗಿ ಎಲ್ಲ ವಾರಿಯರ್ಸ್ ಗಳ ಸಹಾಕರ ಪಡೆದು ಸಮರ್ಪಕ ಕಾರ್ಯ ನಿರ್ವಹಿಸಿದ್ದು ರಮೇಶ್ ಕುಮಾರ್ ಅವರ ದೂರದೃಷ್ಟಿ ಕರ್ತವ್ಯ ನಿಷ್ಠೆ ಪ್ರಶಂಸೆಗೂ ಪಾತ್ರ.


                      ಸಂಪಾದಕ - ರವಿ                     

Post a Comment

0 Comments