ಅರಕಲಗೂಡು: ಅಂಗನವಾಡಿ ಫಲಾನುಭವಿಗಳಿಗೆ ನೀಡುವ ಪೂರಕ ಪೌಷ್ಠಿಕ ಆಹಾರ ಪದಾರ್ಥಗಳು ಕಳಪೆಯಿಂದ ಕೂಡಿವೆ ಅಲ್ಲದೆ ತೂಕದಲ್ಲಿ ಮೋಸವನ್ನು ಎಂಎಸ್‌ಪಿಟಿಸಿ ಏಜೆನ್ಸಿ ಅಧಿಕಾರಿಗಳ ಮಟ್ಟದಲ್ಲಿ ನಡೆಸುತಿದ್ದರೂ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮಾಜಿ ಜಿಪಂ ಸದಸ್ಯ ರೇವಣ್ಣ ಅವರು ಆರೋಪಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ 280ಅಂಗನವಾಡಿ ಕೇಂದ್ರಗಳಲ್ಲಿ ಸಾವಿರಾರು ಮಕ್ಕಳು, ಬಾಣಂತಿಯರು,ಗರ್ಭಿಣಿಯರು ಫಲಾನುಭವಿಗಳಾಗಿದ್ದಾರೆ. ವಾರ್ಷಿಕವಾಗಿ 4ರಿಂದ5ಕೋಟಿ ರೂ ವಹೀವಾಟು ಈ ಏಜೆನ್ಸಿ ಮೂಲಕ ಪೂರಕ ಪೌಷ್ಠಿಕ ಆಹಾರ ಸರಬರಾಜು ನಡೆಯುತ್ತಿದೆ. ಸರ್ಕಾರಿ ಆದೇಶದ ಪ್ರಕಾರ ಯಾವುದೇ ಆಹಾರ ಪದಾರ್ಥಗಳನ್ನು ಸಂಸ್ಥೆ ಸಿದ್ಧಪಡಿಸಿ ಅಂಗನವಾಡಿ ಕೇಂದ್ರಗಳಿಗೆ ಶಿಶುಅಭಿವೃದ್ಧಿ ಇಲಾಖೆ ಮೂಲಕ ವಿತರಣೆ ಮಾಡುತ್ತಿಲ್ಲ.ಇದಕ್ಕೆ ಸ್ಥಳೀಯ ಅಧಿಕಾರಿ ಮಟ್ಟದಲ್ಲಿ ಬೆಂಬಲ ದೊರೆಯುತಿದ್ದು,ಇದು ವ್ಯಾಪಕ ಭ್ರಷ್ಠಾಚಾರಕ್ಕೆ ಕಾರಣವಾಗಿದೆ ಎಂದು ದೂರಿದರು.
ಮಕ್ಕಳಿಗೆ ಅತ್ಯವಶ್ಯಕವಾಗಿ ಬೇಕಿರುವ ಶೇಂಗಾ ಮತ್ತು ಬೆಲ್ಲದ ಮಿಶ್ರಣದಿಂದ ಸಿದ್ದಪಡಿಸುವ ಕಡ್ಲೆ ಮಿಠಾಯಿ ಪೀಸ್‌ಗಳ ಸರಬರಾಜಿನಲ್ಲಿ ವ್ಯಾಪಕ ಭ್ರಷ್ಠಚಾರ ನಡೆದಿದೆ.ಮಾಸಿಕ 1.41ಲಕ್ಷಪೀಸ್ ಸರಬರಾಜು ಆಗುತ್ತಿದ್ದು,ಕಡ್ಡಾಯವಾಗಿ 10ಗ್ರಾಂ ತೂಕದಿಂದ ಕೂಡಿರಬೇಕಿದೆ.ಆದರೆ ಹಾಲಿ 7ಗ್ರಾಂ ತೂಕದ ಪೀಸ್‌ಗಳನ್ನು ಸರಬರಾಜು ಮಾಡಲಾಗುತ್ತಿದೆ. ಇಂದು ಪೀಸ್‌ಗೆ 2 ರೂ ದರ ನಿಗದಿಯಾಗಿದ್ದು,ಮಾಸಿಕ 1.80ಲಕ್ಷ ರೂ ಹಾಗೂ ವಾರ್ಷಿಕ 33.84ಲಕ್ಷ ರೂ ವಹಿವಾಟು ನಡೆಯುತ್ತಿದೆ.ಇದರಲ್ಲಿ ಲಕ್ಷಾಂತರ ರೂ ಅಕ್ರಮ ನಡೆಸಲಾಗಿದೆ. ಎಂಎಸ್‌ಪಿಟಿಸಿ ಯವರು ನೀಡುವ ಸಿದ್ದಗೊಂಡ ಪೌಷ್ಠಿಕ ಆಹಾರ ಪದಾರ್ಥಗಳನ್ನು ತಪಾಸಣೆಗೆ ಕಳುಹಿಸದೆ ಮತ್ತು ನಿಖರವಾಗಿ ತೂಕದಲ್ಲಿ ನಿಗದಿಯನ್ನು ಖಾತ್ರಿಪಡಿಸಿಕೊಳ್ಳದೆ ತಾಲೂಕು ಶಿಶುಅಭಿವೃದ್ಧಿ ಯೋಜನಾಧಿಕಾರಿ ಅಂಗನವಾಡಿ ಕೇಂದ್ರಗಳಿಗೆ ರವಾನೆ ಮಾಡುತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯುನ್ಮಾನ ಉಪಕರಣ, ನೋಟ್ ಬುಕ್ ಖರೀದಿಯಲ್ಲಿ ಭ್ರಷ್ಟಾಚಾರ: ತಾಲೂಕಿನ 280 ಅಂಗನವಾಡಿ ಕೇಂದ್ರಗಳಿಗೆ ಅವಶ್ಯವಿರುವ ವಿದ್ಯುನ್ಮಾನ ಉಪಕರಣಗಳ ಖರೀದಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಇದು ಕಿಯೋನಿಕ್ಸ್ ಸಂಸ್ಥೆ ಮೂಲಕ ದರಪಟ್ಟಿಯನ್ನು ಪಡೆದು ಅಂದಾಜು 26ಲಕ್ಷ ರೂ ಬೆಲೆಯ ಉಪಕರಣಗಳನ್ನು ಖರೀದಿಸಲಾಗಿದೆ.ಎಲ್ಲಾ ಕೇಂದ್ರಗಳಿಗೆ ಅಗ್ನಿನಂದಕ ಯಂತ್ರ ಹಾಗೂ ಥರ್ಮಲ್ ಬಾಡಿ ಟೆಂಪ್ರೇಚರ್ ಸ್ಕಾö್ಯನರ್ ಮೆಷಿನ್ ಸಹ ಖರೀದಿಸಲಾಗಿದೆ.
ಬಾಲಕ ವಿದಾಸ ಸಮಿತಿ ಜಂಟಿ ಖಾತೆ ದಾಖಲಾತಿ ಪುಸ್ತಕ ಖರೀದಿ,ಮಕ್ಕಳ ದಾಖಲಾತಿ ಪುಸ್ತಕ,ಸ್ಟಂಟಿಗ್ ಮತ್ತು ವೇಷ್ಟಿಂಗ್ ಗ್ರಾಪ್ ಬುಕ್,ಕುಟುಂಬದ ವಿವರ ಸಂಗ್ರಹ ನೋಟ್ ಬುಕ್,ಅಂಗನವಾಡಿ ಕೇಂದ್ರಗಳ ಫಲಾನುಭವಿಗಳ ದಾಖಲಾತಿ ಪುಸ್ತಕ, 120 ರೂ ದರದಲ್ಲಿ 1400 100ಪುಟದ ಪುಸ್ತಕ ಹಾಗೂ 200 ಪುಟದ 1400 ಪುಸ್ತಕಗಳನ್ನು ಪ್ರತಿ ಪುಸ್ತಕಕ್ಕೆ 160 ರೂ ದರದಲ್ಲಿ ಖರೀದಿಸಲಾಗಿದೆ.ಇದರ ಒಟ್ಟು ವೆಚ್ಚ ತೆರಿಗೆ ಸೇರಿ 10ಲಕ್ಷದ 10ಸಾವಿರರು ರೂ ನೀಡಲಾಗಿದೆ.ಈ ಪುಸ್ತಕಗಳ ದರ ಮಾರುಕಟ್ಟೆಯಲ್ಲಿ ಕಡಿಮೆ ಇದ್ದು,ಹೆಚ್ಚಿನ ದರವನ್ನು ನೀಡಿ ಭ್ರಷ್ಟಚಾರ ಎಸಗಲಾಗಿದೆ ಎಂದು ಮಾಹಿತಿ ನೀಡಿದರು.
ಸಚಿವರ ಭೇಟಿ ಕಾಕತಾಳೀಯ: ಜಿಲ್ಲೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರು ಭೇಟಿ ನೀಡುತ್ತಿರುವುದು ಇಲಾಖೆ ಪ್ರಗತಿ ಪರಿಶೀಲನೆಯಿಂದ ಕೂಡಿರುವುದಿಲ್ಲ. ಭ್ರಷ್ಟಾಚಾರಕ್ಕೆ ಒಳಗಾಗಿರುವ ಅಧಿಕಾರಿಗಳನ್ನು ರಕ್ಷಿಸುವ ಮತ್ತು ಪೋಷಿಸುವ ನಿಟ್ಟಿನಲ್ಲಿ ಕೂಡಿದೆ ಎಂದು ಕಿಡಿಕಾರಿದರು.
ಸಂಪಾದಕ - ರವಿ
0 Comments