ಅರಕಲಗೂಡು : ಬದುಕಿನ ಕಷ್ಟದ ದಿನಗಳ ಬಗ್ಗೆ ಅರಿವಿದೆ ಇದಕ್ಕಾಗಿ ನನ್ನ ಸಹಾಯವೇ ಹೊರತು ಬೇರೇನು ಉದ್ದೇಶವಿಲ್ಲ, ಮುಖ್ಯವಾಗಿ ಕೋವಿಡ್ ಸಂಕಷ್ಟ ಕಾಲದಲ್ಲಿ ಸೋಂಕು ತಡೆಗಟ್ಟಿ ಜನರ ಜೀವ ಉಳಿಸುವ ಪಾತ್ರದಲ್ಲಿ ವಾರಿಯರ್ಸ್ ಗಳ ಸೇವೆ ಬಹಳ ಶ್ಲಾಘನೀಯವಾಗಿದೆ ಎಂದು ಎಸ್.ಜಿ. ಚಾರಿಟಬಲ್ ಟ್ರಸ್ಟ್ ಮುಖಂಡ ಶ್ರೀಧರ್ ಗೌಡ ಪ್ರಶಂಸೆ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಕೋರೋನಾ ಸೇನಾನಿಗಳಾದ ತಾಲೂಕಿನ ಆರೋಗ್ಯ ಇಲಾಖೆ ನೌಕರರಿಗೆ, ಪೊಲೀಸರು, ಅತಿಥಿ ಉಪನ್ಯಾಸಕರಿಗೆ, ಕಲಾವಿದರಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿದ ಅವರು, ಕೋವೀಡ್- ೧೯ ಸೋಂಕು ಎಂತಹ ಗಂಡಾಂತರಗಳನ್ನು ಸೃಷ್ಟಿಸಿತೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ವಿಶ್ವ ವ್ಯಾಪ್ತಿ ಸಂಕಷ್ಟ ಪರಿಸ್ಥಿತಿಯನ್ನು ಹುಟ್ಟುಹಾಕಿತು. ಇಂತಹ ಸಂದರ್ಭದಲ್ಲಿ ಸಹಾಯ ಮಾಡುವ ಮನಸ್ಸು ಗುರಿಯತ್ತ ಸ್ಪಂದಿಸಿತು. ಇಲ್ಲಿ ಕೋರೋನಾ ವಾರಿಯರ್ಸ್‌ಗಳಾಗಿ ವೈದ್ಯರು, ನರ್ಸ್ ಗಳು ಹಾಗೂ ಡಿ ದರ್ಜೆ ನೌಕರರು ಕರ್ತವ್ಯ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದು ಇವರ ಪಾತ್ರ ಮೆಚ್ಚಬೇಕು. "ವೈದೋ ನಾರಾಯಣ ಹರಿ" ಎಂಬ ಮಾತಿನಂತೆ ನಾಡಿನ ಜನತೆಯ ಆರೋಗ್ಯವನ್ನು ಕಾಪಾಡುತ್ತಿರುವ ವಾರಿಯರ್ಸ್ ಗಳಿಗೆ ಅಲ್ಪ ಮಟ್ಟನಿ ಸಹಾಯ ನೀಡುವ ಹಿತದೃಷ್ಟಿಯಿಂದ ಆಹಾರ ಕಿಟ್ ವಿತರಣೆ ಮಾಡಲಾಗಿದೆ. ಇದು ನನ್ನ ಅಲ್ಪ ಕಾಣಿಕೆಯಷ್ಟೆ ಎಂದರು.
ನನ್ನ ಸ್ನೇಹ ಬಳಗ ನೀಡಿದ ಸಲಹೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ ತೃಪ್ತಿ ಇದೆ, ಇದರಲ್ಲಿ ಬೇರೊಂದು ಉದ್ದೇಶ ಇಲ್ಲ ಎಂದು ತಿಳಿಸಿದರು.
ಡಾ ದೀಪಕ್ , ತಾಲ್ಲೂಕು ಆರೋಗ್ಯ ಅಧಿಕಾರಿ ಡಾ ಸ್ವಾಮಿಗೌಡ, ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ರವಿ ,ರೇವಣ್ಣ ಹಾಗೂ ಇತರೆ ಗಣ್ಯರು ಇದ್ದು ಸಹಕರಿಸಿದರು.
ಸಂಪಾದಕ - ರವಿ
0 Comments