ಕೋವಿಡ್ ಸೋಂಕು ತೀವ್ರತರದಲ್ಲಿ ತಗ್ಗಿಸಲು ಇನ್ನುಷ್ಟು ಬಿಗಿ ಕ್ರಮ; ಸೋಂಕಿತರನ್ನು ಸಿಸಿ ಕೇಂದ್ರಕ್ಕೆ ಕಳುಹಿಸಿ ನೋಡೆಲ್ ಅಧಿಕಾರಿ ಅರುಣ್ ಕುಮಾರ್ ಸೂಚನೆ

ಅರಕಲಗೂಡು: ತಾಲೂಕಿನ ರಾಮನಾಥಪುರ ನಾಡಕಚೇರಿ ಆವರಣದಲ್ಲಿ ವಲಯ ಅರಣ್ಯಾಧಿಕಾರಿಹಾಗೂ ರಾಮನಾಥಪುರ ನೋಡಲ್ ಅಧಿಕಾರಿ ಅರುಣ್ ಕುಮಾರ್ ಅಧ್ಯಕ್ಷತೆಯಲ್ಲಿ ಕೋವಿಡ್ ಟಾಸ್ಕ್ ಪೋರ್ಸ್ ಸಭೆ ಜರುಗಿತು.

ಸಭೆಯಲ್ಲಿ ಮಾತನಾಡಿದ ಅರುಣ್ ಕುಮಾರ್ ಅವರು, ಕೋವಿಡ್ ಸೋಂಕಿನ ವೇಗದ ಪ್ರಮಾಣ ಇನ್ನಷು ತೀವ್ತತರದಲ್ಲಿ ತಗ್ಗಬೇಕಿದೆ. ಇದಕ್ಕಾಗಿ ಎಲ್ಲಾ ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪಂಚಾಯಿತಿ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ಜತೆಗೂಡಿ ಪಾಸೀಟೀವ್ ಬಂದಂತ ವ್ಯಕ್ತಿಗಳನ್ನು ತಪ್ಪದೇ ಸಿ.ಸಿ.ಸೆಂಟರ್ ಗೆ ಕಳುಹಿಸಲು ಕ್ರಮವಹಿಸಬೇಕು. ಹಾಗೂ ಪ್ರತಿದಿನ ಸಂಜೆ 4-00 ಗಂಟೆಗೆ ಪಂಚಾಯಿತಿ ಅಭಿವೃಧ್ದಿ ಅಧಿಕಾರಿಗಳು ಪಾಸೀಟೀವ್ ಬಂದ ವ್ಯಕ್ತಿಗಳನ್ನು ಸಿ.ಸಿ.ಸೆಂಟರ್ ಗೆ ಕಳುಹಿಸಿರುವ ವ್ಯಕ್ತಿಗಳ ಸಂಖ್ಯಾವಾರು ವರದಿ ನೀಡಬೇಕೆಂದು ತಿಳಿಸಿದರು.

ಉಪ ತಹಶೀಲ್ದಾರ್ ಸಿ.ಸ್ವಾಮಿ ಮಾತನಾಡಿ, ಈಗಾಗಲೇ ಕೋವಿಡ್ ಸೆಂಟರ್ ಗಳು ಶೇಕಡ 50ರಷ್ಟು ಖಾಲಿ ಇದ್ದು ಬಸವಾಪಟ್ಟಣ ಕೋವಿಡ್ ಸೆಂಟರ್ ನ್ನು ತಾತ್ಕಲಿಕವಾಗಿ ಸ್ಥಗಿತಗೂಳಿಸಿದ್ದು ಬರಗೂರು ಹಾಗೂ ಕಬಳಿಗೆರೆ ಸಿ.ಸಿ.ಸೆಂಟರ್ ಗೆ ಪಾಸೀಟೀವ್ ಬಂದಂತ ವ್ಯಕ್ತಿಗಳನ್ನು ಕಡ್ಡಾಯ ವಾಗಿ ಕಳುಹಿಸಬೇಕು ಹಾಗೂ ಲಾಕ್ ಡೌನ್ ಮುಗಿಯುವವರೆಗೂ ಯಾರು ಸರ್ಕಾರಿ ರಜಾದಿನಗಳಂದು ಗೈರು ಹಾಜರಾಗದೇ ಎಲ್ಲಾ ನೌಕರರು ತಪ್ಪದೇ ಕರ್ತವ್ಯ ನಿರ್ವಹಿಸಬೇಕೆಂದು ತಿಳಿಸಿದರು.

ಈ ಸಂಧರ್ಭದಲ್ಲಿ ರಾಮನಾಥಪುರ ವೈದ್ಯರಾದ ದಿವ್ಯ ಗ್ರಾಮಪಂಚಾಯಿತಿ ಉಪಾಧ್ಯಕ್ಷರಾದ ಗೌರಮ್ಮ ಗ್ರಾಮಪಂಚಾಯಿತಿ ಅಭಿವೃಧ್ದಿ ಅಧಿಕಾರಿಗಳಾದ ಮಂಜುನಾಥ್ .ನಿಂಗಣ್ಣ ಎಲ್ಲಾಗ್ರಾಮಲೆಕ್ಕಿಗರು ಎಲ್ಲಾ ಆಶಾಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆಯರು ಗ್ರಾಮಸಹಾಯಕರು ಹಾಗೂ ಪಂಚಾಯಿತಿ ಹಾಗೂ ಆಸ್ವತ್ರೆಯ ಸಿಬ್ಬಂದಿಗಳು ಹಾಜರಿದ್ದರು..

                       ಸಂಪಾದಕ - ರವಿ                       

Post a Comment

0 Comments