ಬಬ್ಬಗಳಲೆ ಗ್ರಾಮಸ್ಥರ ಕುಂದು ಕೊರತೆ ಆಲಿಸಿದ ಅಧ್ಯಕ್ಷ ರಂಗಸ್ವಾಮಿ

ಅರಕಲಗೂಡು: ತಾಲೂಕಿನ ಬಬ್ಬಗಳಲೆ ಗ್ರಾಮಕ್ಕೆ ಬುಧವಾರ ಮಲ್ಲಿಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿದರು.

ನಂತರ ಮಾತನಾಡಿದ ಅವರು, ನಗರಗಳಿಂಗಿಂತ ಹಳ್ಳಿಗಳಿಗೆ ಹೆಚ್ಚು ಹಬ್ಬಿರುವ ಕರೊನಾ ಎರಡನೇ ಅಲೆ ಎಲ್ಲರಿಗೂ ಪಾಠ ಕಲಿಸಿದೆ. ಹೀಗಾಗಿ ಪ್ರತಿಯೊಬ್ಬರೂ ಸುರಕ್ಷತಾ ಕ್ರಮಗಳನ್ನು ಪಾಲಿಸಿ ಶುಚಿತ್ವದ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಮನೆಗಳ ಮುಂಭಾಗ ಚರಂಡಿಗಳಲ್ಲಿ ಕಲುಷಿತ ನೀರು ನಿಲ್ಲದಂತೆ ಹಾಗೂ ಸೊಳ್ಳೆಗಳು ಉತ್ಪತ್ತಿಯಾಗಂತೆ ಸ್ವಚ್ಚತೆ ಕಾಪಾಡಬೇಕು. 

ಇದರಿಂದ ಸಾಂಕ್ರಾಮಿಕ ರೋಗಳು ಹರಡುವುದನ್ನು ತಪ್ಪಿಸಬಹುದು. ಈ ನಿಟ್ಟಿನಲ್ಲಿ ನಿವಾಸಿಗಳು ಜಾಗೃತಿ ವಹಿಸಬೇಕು. ನಲ್ಲಿಗಳಿಗೆ ಮುಚ್ಚಳ ಹಾಕಿ ನೀರು ಪೋಲಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಗ್ರಾಮದಲ್ಲಿ ಚರಂಡಿಗಳ ಸ್ವಚ್ಚತೆ ಮತ್ತು ಕುಡಿಯುವ ನೀರಿನ ತೊಂದರೆ ಕಾಣಿಸಿಕೊಂಡರೆ ಹಾಗೂ ಮೂಲಸೌಲಭ್ಯಗಳ ಕುರಿತು ಸಮಸ್ಯೆಗಳಿದ್ದರೆ ತಕ್ಷಣ ಪಂಚಾಯಿತಿ ಗಮನಕ್ಕೆ ತಂದು ಬಗೆಹರಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಗ್ರಾಪಂ ಸದಸ್ಯ ಯೋಗೇಶ್ ಇದ್ದರು.

                      ಸಂಪಾದಕ - ರವಿ            

Post a Comment

0 Comments