ಅರಕಲಗೂಡು: ತಾಲೂಕಿನ ಕೊಣನೂರು ಕಾವೇರಿ ನದಿ ದಂಡೆಯಲ್ಲಿರುವ ಬಂಡೆಗಳ ಮೇಲೆ 1008 ಶಿವ ಲಿಂಗುಗಳನ್ನು ಕೆತ್ತಿಸಿ ಪ್ರಸಿದ್ಧ ಧಾರ್ಮಿಕ ಸುಕ್ಷೇತ್ರವನ್ನಾಗಿಸುವ ಕುರಿತು ಕಾರ್ಯೋನ್ಮುಖನಾಗಿದ್ದು ಶಿಲ್ಪಿಗಳೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಸಾಹಿತಿ ಡಾ. ಸತ್ಯನಾರಾಯಣ ರಾವ್ ತಿಳಿಸಿದರು.
ತಾಲೂಕಿನ ಕೊಣನೂರು ಪ್ರವಾಸಿ ಮಂದಿರದಲ್ಲಿ ಶ್ರೀ ಗೋಪಾಲಕೃಷ್ಣಸ್ವಾಮಿ ದೇವಾಲಯ ಸಮಿತಿಯ ವತಿಯಿಂದ ಇತ್ತೀಚೆಗೆ 25 ಪೌರ ಕಾರ್ಮಿಕರ ಕುಟುಂಬಗಳಿಗೆ ಆಹಾರ ಪದಾರ್ಥಗಳ ಕಿಟ್ ಗಳನ್ನು ವಿತರಿಸಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನಮ್ಮ ಹಿರಿಯರು ಬಾಳಿ ಬದುಕಿದ ಊರನ್ನು ಶ್ರೀ ಕ್ಷೇತ್ರವನ್ನಾಗಸಲು ಜೀವಿತಾವಧಿಯ ಕೊನೆಯವರೆಗೂ ಶ್ರಮಿಸುವುದು ನನ್ನ ಉದ್ದೇಶವಾಗಿದೆ ಎಂದರು.
ಶಾಸಕ ಎ.ಟಿ. ರಾಮಸ್ವಾಮಿ ಮಾತನಾಡಿ, ಕೊಣನೂರಿನ ಮೂಲ ನಿವಾಸಿಗಳಾದ ಡಾ. ಸತ್ಯನಾರಾಯಣ ರಾವ್ ಸರ್ಕಾರಿ ವೃತ್ತಿಯಿಂದ ನಿವೃತ್ತರಾದ ಬಳಿಕ ತಮ್ಮ ಸಾಹಿತ್ಯಿಕ ಪ್ರವೃತ್ತಿಯಿಂದ ತೊಡಗಿಸಿಕೊಂಡು ಹಲವಾರು ಪ್ರಶಸ್ತಿಗಳನ್ನು ಗಳಿಸುವ ಮುಖೇನ ಪ್ರಸಿದ್ಧರಾಗಿದ್ದಾರೆ. ಈ ಹಿಂದೆ ಕೊಳಲು ಶ್ರೀ ಗೋಪಾಲಕೃಷ್ಣ ದೇವಾಲಯದ ನವೀಕರಣಕ್ಕೆ ಉದಾರ ಕೊಡುಗೆ ನೀಡಿರುವ ಇವರು ಇದೀಗ ಊರಿನ ಅಭಿವೃದ್ದಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಶ್ರಮಿಸುತ್ತಿರುವುದು ಶ್ಲಾಘನೀಯ ಸಂಗತಿ ಎಂದು ಪ್ರಶಂಸಿಸಿದರು.
ಶ್ರೀ ಕೊಳಲು ಗೋಪಾಲ ಕೃಷ್ಣ ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಆರ್. ಶ್ರೀನಿವಾಸ್, ಉಪಾಧ್ಯಕ್ಷ ಶ್ರೀನಿವಾಸ್, ಶಿವರಂಗ, ಸದಸ್ಯ ಮಧು, ಅರ್ಚಕ ಶ್ರೀಧರ್ ಮತ್ತು ದೇವಾಲಯ ಸಮಿತಿಯವರು ಇದ್ದರು.
ಸಂಪಾದಕ- ರವಿ
0 Comments