ಅಂಗವಿಕಲ ಚೇತನ ಯೋಗೇಶ್ ಫೋನ್ ಕರೆಗೆ ಮಿಡಿದ ಪೋಲಿಸ್ ವೃತ್ತ ನಿರೀಕ್ಷಕರಾದ ಎಚ್‌ ಪಿ ಶ್ರೀಧರ್ ಗೌಡ

ಅರಕಲಗೂಡು ತಾಲ್ಲೂಕಿನಾದ್ಯಂತ ಕಳೆದ ಒಂದು ತಿಂಗಳಿನಿಂದ ಅನ್ನ ದಾಸೋಹಕ್ಕೆ ವ್ಯಾಪಕ ಪ್ರಶಂಸೆ

ಅರಕಲಗೂಡು: ತಾಲ್ಲೂಕಿನ ದೊಡ್ಡಮಗ್ಗೆ ಹೋಬಳಿಯ ಕಾರೇಹಳ್ಳಿ ಗ್ರಾಮದಲ್ಲಿ ನೆಲಸಿರುವ ಅಂಗವಿಕಲ ಚೇತನ ಯೋಗೇಶ್ ಅವರಿಗೆ ಕಳೆದ ಇಪ್ಪತ್ತು ದಿನಗಳಿಂದ ಊಟದ ವ್ಯವಸ್ಥೆ ಮಾಡುತ್ತಿರುವ ಎಸ್ ಜಿ ಚಾರಿಟಬಲ್ ಟ್ರಸ್ಟ್‌ನ ಸ್ಥಾಪಕರಾದ ಪೋಲಿಸ್ ವೃತ್ತ ನಿರೀಕ್ಷಕ ಎಚ್ ಪಿ ಶ್ರೀಧರ್ ಗೌಡ ಅವರನ್ನು ಭೇಟಿ ನೀಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಮನೆಗೆ ಭೇಟಿ ನೀಡಿ, ಧೈರ್ಯ ತುಂಬುವುದರ ಜೊತೆಗೆ ಆತನ ಜೊತೆಗೆ ಊಟವನ್ನು ಮಾಡಿದರು.

ಅಷ್ಟೇ ಅಲ್ಲದೇ ಲಾಕ್‌ಡೌನ್ ಅವಧಿ ಮುಗಿದ ಮೇಲೆ ಊಟಕ್ಕೆ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಮೂರು ತಿಂಗಳಿಗೆ ಆಗುವಷ್ಟು ಫುಡ್ ಕಿಟ್ ಅನ್ನು ವಿತರಣೆ ಮಾಡಿದರು.

ಮುಂದಿನ ದಿನಗಳಲ್ಲಿ ಚಿಕಿತ್ಸೆಗೆ ಬೇಕಾದ ನೆರವು ನೀಡುವುದಾಗಿ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

Post a Comment

0 Comments