ಹುಲಿಕಲ್ ಆಸ್ಪತ್ರೆಗೆ ಇಸಿಜಿ ಯಂತ್ರ, ಔಷಧ ಕಿಟ್ ಕೊಡುಗೆ ನೀಡಿದ ಉದ್ಯಮಿ ಕೃಷ್ಣೇಗೌಡ

ಅರಕಲಗೂಡು:    ತಾಲ್ಲೂಕಿನ ಹುಲಿಕಲ್  ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರೂ 1.50 ಲಕ್ಷ ವೆಚ್ಚದಲ್ಲಿ ಇಸಿಜಿ ಯಂತ್ರ ಹಾಗೂ ಅಗತ್ಯ ಔಷಧಿಗಳ ಕಿಟ್ ಅನ್ನು ಲಕ್ಷ್ಮೀ ಗ್ರೂಪ್ಸ್ ನ  ಉದ್ಯಮಿ  ಎಂ.ಟಿ. ಕೃಷ್ಣೇಗೌಡ  ಗುರುವಾರ ಕೊಡುಗೆಯಾಗಿ ನೀಡಿದರು.

ಈ ವೇಳೆ ಮಾತನಾಡಿದ  ಅವರು, ಕೊವಿಡ್ ಸಂಕಷ್ಟದ ಸಮಯದಲ್ಲಿ ಈ ಭಾಗದ ಜನರಿಗೆ ಸ್ಥಳಿಯವಾಗಿ ಅಗತ್ಯ ಚಿಕಿತ್ಸೆ ದೊರಕಬೇಕು ಎಂಬ ಸದುದ್ದೇಶದಿಂದ  ವೈದ್ಯರಿಂದ ಮಾಹಿತಿ ಪಡೆದು ಚಿಕಿತ್ಸೆಗೆ ಅಗತ್ಯವಾದ ಪರಿಕರ ಮತ್ತು ಔಷಧಿಗಳನ್ನು ನೀಡಲಾಗಿದೆ. ಜನರಿಗೆ ಇದರ ಪ್ರಯೋಜನ ದೊರಕಿ ಅವರ ಆರೋಗ್ಯಸುಧಾರಣೆಯಾಗಲಿ.  ಕೋವಿಡ್ ಸಂಕಷ್ಟ ಸಮಾಜದ  ಎಲ್ಲ ಜನರನ್ನೂ ಕಾಡುತ್ತಿದೆ. ಕೊರೊನಾ ಸೋಂಕು ದೂರವಾಗಿ ಎಲ್ಲರಿಗೂ ನೆಮ್ಮದಿಯ ಬದುಕು ಕಟ್ಟಿಕೊಳ್ಳುವಂತಾಗಬೇಕು ಎಂಬುದು ತಮ್ಮ ಆಶಯವಾಗಿದೆ ಎಂದರು. 
ಆಸ್ಪತ್ರೆ ವೈದ್ಯ ಡಾ ಕುವಾಲ್  ಮಾತನಾಡಿ ಗ್ರಾಮೀಣ  ಭಾಗದ ಈ ಆಸ್ಪತ್ರೆ  ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಾ ಬಂದಿದೆ. ಉದ್ಯಮಿ  ಕೃಷ್ಣೇಗೌಡ  ಅಗತ್ಯ ಪರಿಕರಗಳನ್ನು ಕೊಡುಗೆಯಾಗಿ ನೀಡುವ ಮೂಲಕ  ಇನ್ನಷ್ಟು ಉತ್ತಮ ವಾದ ರೀತಿಯಲ್ಲಿ ಆರೋಗ್ಯ ಸೇವೆ ದೊರಕಿಸಲು ನೆರವು ನೀಡಿದ್ದಾರೆ ಎಂದು ಕೃತಜ್ಞತೆ ಸಲ್ಲಿಸಿದರು.  

ಗ್ರಾಪಂ ಸದಸ್ಯ ಗುರು, ಮುಖಂಡರಾದ ಮಹೇಶ್, ಮಂಜುನಾಥ್,ರಾಜೇಶ್, ಸಂದೀಪ್,ದಿವಾಕರ್ ಇದ್ದರು.


                      ಸಂಪಾದಕ - ರವಿ                     

Post a Comment

0 Comments