ಖಾಸಗಿ‌ ಶಾಲೆಗಳಲ್ಲಿ‌ ಶುಲ್ಕ ವಸೂಲಿ‌ ಸುಲಿಗೆಗೆ ಕಡಿವಾಣ ಹಾಕಿ ಪೋಷಕರಿಗೆ ನೆರವಾಗಿ, ಕಾಂಗ್ರೆಸ್ ಮನವಿ


ಅರಕಲಗೂಡು: ಪೋಷಕರಿಗೆ ಹೊರೆಯಾಗದಂತೆ ಖಾಸಗಿ ಶಾಲೆಗಳ ಶುಲ್ಕವನ್ನು ನಿಗಧಿಗೊಳಿಸಿ ಅದನ್ನು ಸರ್ಕಾರವೆ ಭರಿಸಬೇಕು ಎಂದು ಆಗ್ರಹಿಸಿ  ಕಾಂಗ್ರೆಸ್  ಮುಖಂಡರು ಬುಧವಾರ  ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. 

 ಈ ವೇಳೆ ತಾಲ್ಲೂಕು  ಕಾಂಗ್ರೆಸ್ ಅಧ್ಯಕ್ಷ ಎಸ್.ಎಸ್.ಪ್ರಸನ್ನಕುಮಾರ್  ಸುದ್ದಿಗಾರರೊಂದಿಗೆ ಮಾತನಾಡಿ ಕಳೆದ ವರ್ಷ  ಸರ್ಕಾರ ಶೇ 70 ಟ್ಯೂಷನ್ ಫೀ ಯನ್ನು ನಿಗದಿಗೊಳಿಸಿತ್ತು.. ಆದರೆ ಕೋವಿಡ್ ಎರಡನೆ ಅಲೆ ತೀವ್ರ ಸಂಕಷ್ಟ ತಂದೊಡಿದ್ದು ಸಾಮಾನ್ಯ ಜನರು ಬದುಕು ಚಿಂತಾಜನಕ ಸ್ಥಿತಿ ತಲುಪಿದೆ. ಈ ಹಂತದಲ್ಲಿ  ಕೆಲವು ಖಾಸಗಿ ಶಾಲೆಗಳು ಪೂರ್ಣ ಪ್ರಮಾಣದ ಶುಲ್ಕ ಪಾವತಿಸುವಂತೆ ಪೋಷಕರ ಮೇಲೆ ಒತ್ತಡ ಹೇರಿ ಸಲ್ಲದ ಕಿರುಕುಳ ನೀಡುತ್ತಿವೆ  ಎಂದು ಆರೋಪಿಸಿದರು.  

ಈ ಬಾರಿಯ ಸಂಕಷ್ಟವನ್ನು ಗಣನೆಯಲ್ಲಿಟ್ಟುಕೊಂಡು ಶುಲ್ಕವನ್ನು  ನಿಗದಿ ಗೊಳಿಸುವ ಸಂಗಡ  ಅದನ್ನು ಸರ್ಕಾರವೆ  ಶಾಲೆಗಳಿಗೆ ಪಾವತಿ ಮಾಡುವ ಮೂಲಕ  ಕೊರೊನಾ ಸಂಕಷ್ಟದಿಂದ  ನರಳುತ್ತಿರುವ ಪೋಷಕರ ಹೊರೆ ತಗ್ಗಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಖಾಸಗಿ ಶಾಲೆಗಳು  ಪ್ರಾರಂಭವಾದ ಮೇಲೆ ದುಬಾರಿ ಶುಲ್ಕಕ್ಕಾಗಿ ಪೋಷಕರನ್ನು ಗೋಳು ಹುಯ್ದುಕೊಳ್ಳಬಾರು . ಇಂತಹ ಪ್ರಕರಣಗಳು ತಾಲ್ಲೂಕಿನಲ್ಲಿ ಕಂಡು ಬಂದರೆ ಕಾಂಗ್ರೆಸ್ ಕಾರ್ಯಕರ್ತರು ಅಂತಹ ಶಾಲೆಗಳ ವಿರುದ್ದ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ  ಎಂದು ಎಚ್ಚರಿಸಿ, ತಾಲ್ಲೂಕು ಆಡಳಿತ ಖಾಸಗಿ ಶಾಲೆಗಳ ಸಭೆ ಕರೆದು ಈ ಕುರಿತು ಸೂಕ್ತ ತಿಳುವಳಿಕೆ ನೀಡಲು ಕ್ರಮ ಕೈಗೊಳ್ಳಬೇಕು ಎಂದರು.

 ಪ್ರಭಾರ ಬಿಇಒ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

 ಕೆಪಿಸಿಸಿ ಸದಸ್ಯ  ಎಚ್.ಟಿ.ಮಂಜುನಾಥ್,  ಪಪಂ ಸದಸ್ಯರಾದ  ಅನಿಕೇತನ್. ಪ್ರದೀಪ್ ಕುಮಾರ್, ಸುಬಾನ್ ಷರೀಪ್, ತಾಪಂ ಮಾಜಿ ಉಪಾಧ್ಯಕ್ಷ   ನಾಗರಾಜ್, ಜಯಕುಮಾರ್  ಇದ್ದರು.

                       ಸಂಪಾದಕ - ರವಿ                               

Post a Comment

0 Comments