ತೈಲ ಬೆಲೆ ಹೆಚ್ಚಿಸಿದ ಬಿಜೆಪಿ ವಿರುದ್ದ ಕಾಂಗ್ರೆಸ್ ಲೇವಡಿ

ರಾಮನಾಥಪುರ:   ಪೆಟ್ರೊಲಿಯಂ ವಸ್ತುಗಳ ದಿನ ನಿತ್ಯವೂ ಹೆಚ್ಚುತ್ತಿದ್ದು , ಬಿಜೆಪಿ  ಎಂಬ ವೈರಸ್‌ ಅನ್ನು ಈ ದೇಶದಿಂದ ಓಡಿಸಲು ಪ್ರತಿಯೊಬ್ಬ ಯುವಶಕ್ತಿ ಸಂಘಟತವಾಗಬೇಕಿದೆ ಎಂದು ತಾಲ್ಲೂಕು ಬ್ಯಾಂಕ್ ಕಾಂಗ್ರೆಸ್ ಅಧ್ಯಕ್ಷರು ಪ್ರಸನ್ನಕುಮಾರ್ ಹೇಳಿದರು. 

ರಾಮನಾಥಪುರ ಕೆ.ಬಿ. ಮಲ್ಲಪ್ಪ ವೃತ್ತದಲ್ಲಿರುವ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಪ್ರತಿಭಟನೆ ಮಾಡಿದ ನಂತರ ಮಾತನಾಡಿದ ಅವರು ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರತಿಯೊಂದು ವಸ್ತುಗಳ  ಬೆಲೆಗಳು ಗಗನಕ್ಕೇರಿದ್ದು ಜನಸಾಮಾನ್ಯರು  ಜೀವನ ನಡೆಸುವುದು ದುಸ್ತರವಾಗಿದೆ ಎಂದರು.

  ಜಿಲ್ಲಾ ಹಿರಿಯ  ಮುಖಂಡ ಶೇಷೇಗೌಡ ಪೆಟ್ರೋಲ್ ಡೀಸೆಲ್ ಬೆಲೆ ನೂರು ರೂಪಾಯಿ ಲೀಟರ್ಗೆ ಆಗಿದ್ದು ಇದನ್ನು ಖಂಡಿಸಿ ಮಾತನಾಡಿದ ಅವರು  ಸಾಮಾನ್ಯ ಜನರ ಪಿಕ್ ಪಾಕೆಟ್ ಮಾಡುವ ಕೆಲಸದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿರತವಾಗಿದೆ. 35 ರೂಪಾಯಿ ಇರುವ ತೈಲದ ಮೇಲೆ ಸಾಕಷ್ಟು ತೆರಿಗೆಯನ್ನು ವಿಧಿಸಿ ನೂರು ರೂಪಾಯಿ ಲೀಟರ್ಗೆ ಮಾಡಿದ್ದಾರೆ ಅಧಿಕಾರಕ್ಕೆ ಬರುವ ಮುನ್ನ ಸೈಕಲ್ನಲ್ಲಿ ನಲ್ಲಿ ಓಡಾಡುತ್ತಿದ್ದ ಬಿಜೆಪಿ ಮುಖಂಡರುಗಳು ಈಗ ಬಡವರ ಕಷ್ಟವನ್ನು ಮರೆತಿದ್ದಾರೆ ಎಂದರು. 

ಕೆ.ಪಿ.ಸಿ.ಸಿ ಸದಸ್ಯ ಮಂಜುನಾಥ್ ಮಾತನಾಡಿ ಪೆಟ್ರೋಲ್,  ಡೀಸೆಲ್ ಬೆಲೆ .ಸಿಮೆಂಟ್ ಕಬ್ಬಿಣದ ಬೆಲೆ .ಕೂಡ ಹೆಚ್ಚಾಗಿದೆ. ದೇಶದ ಪ್ರಧಾನಿಯವರು ಈಗ  ಬಡವರು ಪಕೋಡ ತಯಾರಿಸಲು ಅಡುಗೆ ಎಣ್ಣೆಯೂ ಸಹ ಬೆಲೆ ಕೂಡ ಹೆಚ್ಚಿಸಿದ್ದಾರೆ ದೂರಿದರು.

 ಮಕ್ಕಳ ತಜ್ಲರು  ಡಾ. ದಿನೇಶ್ ಬೈರೇಗೌಡ ಮಾತನಾಡಿ  ರಾಸಾಯನಿಕ ಗೊಬ್ಬರ, ಕೆಇಬಿ ಕರೆಂಟ್ ದರ ಕೂಡ ಹೆಚ್ಚಾಗಿದೆ. ಕರೋನ ವನ್ನು ಬೇರೆ ದೇಶದಿಂದ ನಮ್ಮ ದೇಶಕ್ಕೆ ತಂದಿದ್ದು ಪ್ರತಿಯೊಂದಕ್ಕೂ ದೇಶದ ಜನರು ಸಾಲಿನಲ್ಲಿ ನಿಲ್ಲುವಂತೆ ಮಾಡಿದ್ದು,  ಮಾತ್ರ ಬಿಜೆಪಿ ಸರ್ಕಾರದ ಸಾಧನೆಯಾಗಿದೆ ಎಂದರು.

ಮುಖಂಡರಾದ ಬಿಳಗೂಲಿ ಬಿ. ಜೆ. ರಾಮೇಗೌಡ ಮಾತನಾಡಿ ಅಧಿಕಾರಕ್ಕೆ ಬರುವ ಮುನ್ನ ಬಿಜೆಪಿ ಪಕ್ಷದವರು ಸಾಮಾಜಿಕ ಜಾಲ ತಾಣಕ್ಕೆ ಯುವಕರನ್ನು ಬಳಸಿಕೊಂಡರು. ಈಗ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಯಾರಾದರೂ ಮಾತನಾಡಿದರೆ ಕಾನೂನು ತರುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಜನರಿಗೋಸ್ಕರ ಯಾವಾಗಲೂ ಹೋರಾಟ ಮಾಡಲು ಸಿದ್ಧವಾಗಿದೆ. ಪೆಟ್ರೋಲ್, ಡೀಜಲ್ ಬೆಲೆ ದಿನಾಲೂ ಹೆಚ್ಚಾಗಿ ಇದು, ದೀನ- ದಲಿತರ, ರೈತರು, ಸಾಗಿಸುವ ಸಾಗಣೆಯ ವ್ಯವಸ್ಥೆಯ ಮೇಲೆ ಹೆಚ್ಚಿನ ಪರಿಣಾಮ ಉಂಟುಮಾಡುತ್ತದೆ.  ಇದರ ಹೊರೆ ಜನಸಾಮಾನ್ಯರ ಮೇಲೆ ಹೊರುವಂತಾಗಿದೆ. ಈಗ
ಕಾಂಗ್ರೆಸ್ ಪಕ್ಷದ ಹೋರಾಟದ ನಂತರ ಜನರಿಗೆ ವ್ಯಾಕ್ಸಿನ್ ನೀಡಲು ಸರ್ಕಾರಗಳು ಮುಂದಾಗಿವೆ ಎಂದು ಛೇಡಿಸಿದರು.

 ಕಾಂಗ್ರೆಸ್ ಯುವ ಘಟಕ ಅಧ್ಯಕ್ಷ  ಮಂಜಣ್ಣ, ಶಿರದನಹಳ್ಳಿ ಮಧು,  ಕೂಡಲೂರು ಕುಮಾರ್, ಮಹೇಶ್, ರಾಮನಕೊಪ್ಪಲು ಅರವಿಂದ್, ಮಲ್ಲಿನಾಥಪುರ ದಿಲೀಪ್, ಹಂಪಾಪುರ ಅರುಣ್  ಮತ್ತಿತರರು ಇದ್ದರು.

                         ಸಂಪಾದಕ- ರವಿ                           

Post a Comment

0 Comments