ಅರಕಲಗೂಡು: ತಾಲೂಕಿನ ಕುಟುಕುಮಂಟಿ ಕಾವಲು ಗ್ರಾಮದಲ್ಲಿ ಹಕ್ಕಿಪಿಕ್ಕಿ ಜನಾಂಗದವರಿ ಶಾಸಕ ಎ.ಟಿ. ರಾಮಸ್ವಾಮಿ ಶನಿವಾರ ಆಹಾರ ಕಿಟ್ ಗಳನ್ನು ವಿತರಿಸಿದರು.
ಊರಿನ 26 ಕುಟುಂಬಗಳಿಗೆ ಕಿಟ್ ವಿತರಿಸಿ ಮಾತನಾಡಿದ ಶಾಸಕರು, ಲಾಕ್ ಡೌನ್ ಸಂಕಷ್ಟದ ಕಾಲದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಕ್ಕಿಪಿಕ್ಕಿ ಜನಾಂಗದವರಿಗೆ ಆಹಾರ ಕಿಟ್ ನೀಡಲಾಗುತ್ತಿದೆ. ಈ ಹಿಂದೆ ತಲಾ ಮೂರು ಎಕರೆ ಮಂಜೂರು ಮಾಡಲಾಗಿತ್ತು. ಗ್ರಾಮಸ್ಥರು ಪರಸ್ಪರ ಸೌಹಾರ್ದ ಯುತವಾಗಿ ಜೀವನ ಸಾಗಿಸಬೇಕು ಎಂದರು.
ರಾಮನಾಥಪುರ ಉಪ ತಹಸೀಲ್ದಾರ್ ಸಿ. ಸ್ವಾಮಿ, ಗ್ರಾಮಸ್ಥರು ಇದ್ದರು.
ಸಂಪಾದಕ - ರವಿ
0 Comments