ಅರಕಲಗೂಡು; ನಿಲ್ಲದ ಶ್ರೀಗಂಧ ಮರಗಳ್ಳತನ, ಬೋಳಾಗುತ್ತಿದೆ ಚಂದನವನ!?

ಅರಕಲಗೂಡು: ನಿಲ್ಲದ ಶ್ರೀಗಂಧ ಮರಗಳ್ಳತನ,  ಗೊಬ್ಬಳಿ ಮೀಸಲು ಅರಣ್ಯ ಪ್ರದೇಶದಲ್ಲಿ ಬುಧವಾರ ಶ್ರೀಗಂಧದ ಮರಗಳನ್ನು ಕಳ್ಳತನ ಮಾಡಿರುವ ಮೂವರು ಆರೋಪಿಗಳನ್ನು ಬಂಧಿಸಿರುವ ಅರಣ್ಯ ಇಲಾಖೆ ಸಿಬ್ಬಂದಿ 12.100 ಕೆಜಿ ತೂಕದ ಶ್ರೀಗಂಧ ತುಂಡುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. 

ಮೈಸೂರು ಜಿಲ್ಲೆ ಎಚ್.ಡಿ. ಕೋಟೆ ತಾಲೂಕು ಮಹದೇಶ್ವರ ಕಾಲನಿ ಮಲ್ಲೇಶ್, ಪಿರಿಯಾಪಟ್ಟಣ ತಾಲೂಕು ಚನ್ನಕಲ್ಲು ಕಾವಲು ಹಾಡಿ ಗ್ರಾಮದ ಅಭಿ, ಮುತ್ತುರಾಜ್ ಬಂಧಿತ ಆರೋಪಿಗಳು. ಅರಣ್ಯ  ಇಲಾಖೆ ಸಿಬ್ಬಂದಿ ಗಸ್ತು ವೇಳೆ ಮರ ಕಡಿಯುವ ಶಬ್ಧ ಕೇಳಿ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಿದಾಗ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ಕೃತ್ಯಕ್ಕೆ ಬಳಸಿದ ಕೈ ಅರೆ, ಗರಗಸ, ಬೈಕ್ ವಶಕ್ಕೆ ಪಡೆಯಲಾಗಿದೆ.

 ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಗೊಬ್ಬಳಿ ಅರಣ್ಯದಲ್ಲಿ ಅನೇಕ ಬಾರಿ ಕಳ್ಳತನ ನಡೆಯುತ್ತಿದ್ದು ಆರೋಪಿಗಳು ತಲೆಮರೆಸಿಕೊಳ್ಳುತ್ತಿದ್ದಾರೆ.‌ ಶ್ರೀಗಂಧ ಕಳ್ಳತನದ ಪ್ರಮುಖ ಆರೋಪಿ ಪರಾರಿಯಾಗಿದ್ದು ಈ ಕುರಿತು ತನಿಖೆ ಕೈಗೆತ್ತಿಕೊಳ್ಳಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಯಶ್ಮ ಮಾಚಮ್ಮ ತಿಳಿಸಿದರು.

Post a Comment

0 Comments