ಅರಕಲಗೂಡು: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜನರೇ ನಿಬ್ಬೆರಗಾಗುವಂತೆ ಉತ್ತಮ ಆಡಳಿತ ನೀಡಿ ವಿರೋಧ ಪಕ್ಷಗಳ ನಿದ್ದೆಗೆಡಿಸಿರುವ ಎಎಪಿ ಗೆ ಈಗ ಎಲ್ಲೆಡೆ ಜನಸಾಮಾನ್ಯರ ಬೆಂಬಲ ಇದ್ದೆ ಇದೆ, ಇಲ್ಲಿಯೂ ಅರಕಲಗೂಡು ವಿಧಾನಸಭಾ ಕ್ಷೇತ್ರದ ಎಎಪಿ ಅಭ್ಯರ್ಥಿ ಬಿ.ಟಿ. ಜವರೇಗೌಡ ಅವರು ಬಹಳಷ್ಟು ಜನ ಬೆಂಬಲದೊಂದಿಗೆ ಮೆರವಣಿಗೆಯಲ್ಲಿ ಸಾಗಿ ಇಂದು ನಾಮಪತ್ರ ಸಲ್ಲಿಸಿ ಗಮನ ಸೆಳೆದರು.
ಪಟ್ಟಣದ ಅನಕೃ ವೃತ್ತದಿಂದ ಪೊರಕೆ ಹಿಡಿದು ಕುಣಿದು ಕುಪ್ಪಳಿಸಿದ ಎಎಪಿ ಕಾರ್ಯಕರ್ತರು ಅಭ್ಯರ್ಥಿ ಜವರೇಗೌಡ ಅವರಿಗೆ ಜೈಕಾರ ಮೊಳಗಿಸಿ ಸಂಭ್ರಮಿಸಿದರು.
ಕಾರ್ಯಕರ್ತರ ಜತೆ ಹೆಜ್ಜೆ ಹಾಕಿದ ಅಭ್ಯರ್ಥಿ ಜವರೇಗೌಡ ಅವರು ಅನಕೃ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮೆರವಣಿಗೆಯಲ್ಲಿ ಸಾಗಿದರು.
ನಂತರ ಮಾತನಾಡಿ, ಮತದಾರರಿಗೆ ನಾನು ಹಣ ಹೆಂಡ ಇತರೆ ಆಮಿಷ ಒಡ್ಡುವುದಿಲ್ಲ, ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿ ದೆಹಲಿಯಲ್ಲಿ ನೀಡುತ್ತಿರುವ ಉತ್ತಮ ಆಡಳಿತ ಕಾರ್ಯವೈಖರಿ ಅಭಿವೃದ್ಧಿ ಸಾಧನೆಗಳನ್ನು ನೋಡಿ ಜಾತ್ಯಾತೀತವಾಗಿ ಎಲ್ಲ ಮತದಾರರು ನನ್ನನ್ನ ಬೆಂಬಲಿಸಬೇಕು.
ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಪಕ್ಷಗಳು ನಾನು ಮಾಡಿದೆ ಎಂದು ಅಹಂನಿಂದ ಸುಳ್ಳು ಹೇಳಿ ಜನರಿಗೆ ವಂಚಿಸುತ್ತಿದ್ದಾರೆ. ಸರ್ಕಾರಿ ಸೇವೆಯಲ್ಲಿದ್ದು ಈಗ ಜನ ಸೇವೆಗಾಗಿ ಎಎಪಿ ಸೇರಿದೆ. ಮತದಾರರು ನನಗೆ ಒಮ್ಮೆ ಅವಕಾಶ ನೀಡಿದರೆ ಜನರೆಲ್ಲ ಮೆಚ್ಚುವ ಮಾದರಿ ಕ್ಷೇತ್ರ ಅಭಿವೃದ್ಧಿ ಮಾಡಿ ತೋರಿಸುವೆ ರಂದು ಮತದಾರರ ಆಶೀರ್ವಾದ ಕೇಳಿದರು.
0 Comments