ಮನೆ ಸುತ್ತುವರಿದು ನುಗ್ಗಿದ ಮಳೆ ನೀರು; ಕೆಎನ್.ಆರ್ ಕಂಟ್ರಾಕ್ಟರ್ ಕಾಮಗಾರಿ‌ ಅದ್ವಾನ, ಗ್ರಾಮಸ್ಥರು ಆಕ್ರೋಶ

ಅರಕಲಗೂಡು: ತಾಲೂಕಿನಲ್ಲಿ ಹಾದು ಹೋಗಿರುವ ಮಾಗಡಿ- ಸೋಮವಾರಪೇಟೆ ಮಾರ್ಗದ ರಸ್ತೆ ಅಭಿವೃದ್ಧಿಗೆ ಕಾಮಗಾರಿ ಪ್ರಗತಿ ಹಂತದಲ್ಲಿದ್ದು ಇದೀಗ ಸುರಿಯುತ್ತಿರುವ ಮಳೆಗೆ ಹೆದ್ದಾರಿ ಪಕ್ಕದಲ್ಲಿ ನೀರು ವಾಸದ ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸುತ್ತಿದೆ.

ಶಿರದನಹಳ್ಳಿ ಬಳಿ ವಾಸದ ಮನೆಗಳ ಹೆದ್ದಾರಿ ನಿರ್ಮಾಣಕ್ಕೆ ಅಗೆದಿರುವ ಗುಂಡಿಗಳಲ್ಲಿ ಮಳೆ ಕೆರೆಯಾಗಿ ನಿಲ್ಲುತ್ತಿದೆ. ರಸ್ತೆ ಕಾಮಗಾರಿಗೆ ಅಗೆದು ಕೆಲವು ಕಡೆ ಚರಂಡಿಗಳನ್ನು ಮುಚ್ಚಿರುವ ಪರಿಣಾಮ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ಮನೆಗಳಿಗೆ ನುಗ್ಗುತ್ತಿದೆ. ಕಳೆದ ಎರಡು ದಿನಗಳಿಂದ ಬಿಡುವಿಲ್ಲದೆ ಭಾರಿ ಮಳೆ ಬೀಳುತ್ತಿದ್ದು ಗ್ರಾಮದ ಆನಂದ ಎಂಬುವರ ಮನೆಗೆ ನೀರು ನುಗ್ಗಿದೆ. ಮನೆ ಸುತ್ತ ನೀರು ಆವರಿಸಿದ್ದು ಗೋಡೆಗಳು ಕುಸಿದು ಬೀಳುವ ಅಪಾಯದಲ್ಲಿವೆ. ಅಕ್ಕಪಕ್ಕದ ಮನೆಗಳಲ್ಲಿ ತೇವಾಂಶ ಉಕ್ಕಿ ನಿವಾಸಿಗಳು ವಾಸಿಸಲು ಪರದಾಡುವಂತಾಗಿದೆ.

ಕಾಮಗಾರಿಯನ್ನು ಅವೈಜ್ಞಾನಿಕವಾಗಿ ನಡೆಸಲಾಗುತ್ತಿದೆ. ಮಳೆ ನೀರು ಮನೆಗಳಿಗೆ ನುಗ್ಗುತ್ತಿದ್ದರೂ ಇಂಜಿನಿಯರ್ ಮತ್ತು ಗುತ್ತಿಗೆದಾರ ಇತ್ತ ತಲೆಹಾಕುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


Post a Comment

0 Comments