ಅರಕಲಗೂಡು: ತೀವ್ರ ಹದಗೆಟ್ಟು ಹೋಗಿರುವ ತಾಲೂಕಿನ ಕೊಣನೂರು ಹೋಬಳಿಯ ರಾಮೇನಹಳ್ಳಿ ಗ್ರಾಮದ ರಸ್ತೆ ದುರಸ್ತಿ ಪಡಿಸುವಂತೆ ಆಗ್ರಹಿಸಿ ಸುವರ್ಣ ಕರ್ನಾಟಕ ರಕ್ಷಣಾ ಸೇನೆ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಗುರುವಾರ ದಿಢೀರ್ ಪ್ರತಿಭಟನೆ ನಡೆಸಿದರು.
ಹದಗೆಟ್ಟು ಕೆಸರುಮಯವಾಗಿದ್ದ ರಸ್ತೆಯಲ್ಲಿ ನಿಂತು ಪ್ರತಿಭಟನಾಕಾರರು ಘೋಷಣೆ ಕೂಗಿದರು. ರಾಮೇನಹಳ್ಳಿಯ ರಸ್ತೆ ಹಾಳಾಗಿದ್ದು ಗ್ರಾಮಸ್ಥರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು ಜನಪ್ರತಿನಿಧಿಗಳು ಅಧಿಕಾರಿಗಳು ಕೂಡಲೆ ರಸ್ತೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಗ್ರಾಮದ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ಮಳೆಗಾಲದಲ್ಲಿ ವೃದ್ಧರು ನಡೆದಾಡಲು, ಮಕ್ಕಳು ಶಾಲೆಗೆ ಹೋಗಲು ಪ್ರತಿದಿನ ತೊಂದರೆ ಅನುಭವಿಸುತ್ತಿದ್ದಾರೆ. ಒಂದು ತಿಂಗಳ ಒಳಗೆ ರಸ್ತೆ ಮಾಡಿ ಕೊಡದಿದ್ದಲಿ ತಾಲ್ಲೂಕ ಕಚೇರಿಯ ಮುಂದೆ ಸುವರ್ಣ ಕರ್ನಾಟಕ ರಕ್ಷಣಾ ಸೇನೆ ಮತ್ತು ರಾಮೇನಹಳ್ಳಿಯ ಗ್ರಾಮಸ್ಥರು ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕರ್ನಾಟಕ ರಕ್ಷಣಾ ಸೇನೆ ಸೇನೆಯ ರಾಘವೇಂದ್ರ ಗೌಡ, ಮುತ್ತುಕುಮಾರ್, ಶ್ರೀನಿವಾಸ್, ಶ್ರೀನಾಥ್, ಪ್ರಕಾಶ್ ಗೌಡ, ಲಿಖಿತ್ ಗೌಡ, ರಾಮೇನಹಳ್ಳಿಯ ಮಂಜು, ಶಶಿಕುಮಾರ್, ಪ್ರಜ್ವಲ್ ಗೌಡ, ನಂಜೇಗೌಡ, ಜಯಣ್ಣ, ಕೃಷ್ಣೇಗೌಡ, ನಿಂಗೇಗೌಡ, ಮಂಜೇಗೌಡ, ತಿಮ್ಮಮ್ಮ, ಶೈಲಜಾ, ಯಶೋದಮ್ಮ ಮತ್ತು ಸ್ಥಳೀಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
0 Comments