ಅರಕಲಗೂಡು: ರಾಜಕೀಯ ವ್ಯವಸ್ಥೆ ಕಲುಷಿತಗೊಳ್ಳುತ್ತಿದ್ದು ದುಷ್ಟರು, ಭ್ರಷ್ಟರು, ಸ್ವಾರ್ಥಿಗಳು ಹಣ ಗಳಿಸಲು ಬರುತ್ತಿದ್ದಾರೆ ಎಂದು ಶಾಸಕ ಎ.ಟಿ. ರಾಮಸ್ವಾಮಿ ಕಿಡಿಕಾರಿದರು.
ತಾಲೂಕಿನ ರಾಮನಾಥಪುರ ಶ್ರೀ ರಾಮೇಶ್ವರ ದೇವಾಲಯದ ವಿಮಾನ ಗೋಪುರ ಮತ್ತು ರಾಜಗೋಪುರ ಸಂರಕ್ಷಣಾ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೆರಿಸಿ ಮಾತನಾಡಿದ ಅವರು, ಅಧಿಕಾರಕ್ಕಾಗಿ ಎಚಿದೂ ಸ್ವಾರ್ಥ ರಾಜಕಾರಣ ನಡೆಸದೆ ಜನರ ಸುಖಕ್ಕಾಗಿ ಶ್ರಮಿಸಿ ಕ್ಷೇತ್ರದ ಘನತೆ ಎತ್ತಿಹಿಡಿದಿರುವೆ. ಸಮಾಜದ ವಾತಾವರಣ ಯಾರು ಕೆಡಿಸುತ್ತಾರೆ ಎನ್ನುವ ಅಲೋಚನೆ ಮಾಡಬೇಕಾಗಿದೆ ಎಂದರು.
ಈ ಭಾಗದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಒಂದು ಕೋಟಿ ರೂ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಬಡವರಿಗೆ ನಿವೇಶನ ಹಚಿಂಕೆ ಮಾಡದಂತೆ ಅಡಚಣೆ ಮಾಡುತ್ತಿದ್ದಾರೆ. ಇದಕ್ಕೆಲ್ಲ ಜಗ್ಗುವವನು ಬಗ್ಗುವವನು ನಾನಲ್ಲ. ಒಳ್ಳೆಯ ಕೆಲಸಗಳಿಗೆ ಕಲ್ಲುಹಾಕುವುದನ್ನು ಸಹಿಸುವುದಿಲ್ಲ. ಎಲ್ಲ ಅಡೆತಡೆಗಳನ್ನು ನಿವಾರಿಸಿ ಬಡವರಿಗೆ ನಿವೇಶನ ವಿತರಿಸಲು ಸಿದ್ದತೆ ಕೈಗೊಳ್ಳಲಾಗಿದೆ ಎಂದು ಗುಡುಗಿದರು.
ಶ್ರೀ ರಾಮೇಶ್ವರ ದೇವಾಲಯದ ವಿಮಾನ ಗೋಪುರ ಮತ್ತು ರಾಜಗೋಪುರ ಸಂರಕ್ಷಣಾ ಕಾಮಗಾರಿಗೆ 70 ಲಕ್ಷ ರೂ ಮಂಜೂರಾಗಿದೆ. ಶಿಥಿಲಗೊಂಡಿರುವ ದೇವಾಲಯವನ್ನು ಪುನರ್ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ಬಿಜೆಪಿ ಮುಖಂಡ ಶ್ರೀನಿಧಿ ಮಾತನಾಡಿ, ಮಳೆ ಹೊಡೆತಕ್ಕೆ ಸಿಲುಕಿ ಶಿಥಿಲಗೊಂಡಿರುವ ರಾಮೇಶ್ವರ ದೇವಾಲಯದ ರಾಜಗೋಪುರ ಸ್ಮಾರಕ ಕಳಚಿ ಬಿದ್ದು ಕಳೆದ ಎರಡು ವರ್ಷಗಳಿಂದ ಭಕ್ತರ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಬೀಗ ಜಡಿಯಲಾಗಿತ್ತು. ದೇವಾಲಯ ಅಭಿವೃದ್ಧಿ ನಿರ್ಲಕ್ಷö್ಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇತ್ತ ತಲೆಹಾಕಲಿಲ್ಲ. ಇದೀಗ ರಾಜಗೋಪುರ ಕಾಮಗಾರಿಗೆ ಚಾಲನೆ ನೀಡಿರುವುದು ಸಂತಸ ತಂದಿದೆ. ದೇವಾಲಯದ ಸಂಪೂರ್ಣ ಅಭಿವೃದ್ಧಿ ನಿರ್ಲಕ್ಷಿö್ಯಸುವುದು ಸರಿಯಲ್ಲ ಎಂದರು.
ವಿಶ್ವ ಹಿಂದು ಪರಿಷತ್ ಕಾರ್ಯದರ್ಶಿ ಮಹಿಪಾಲ್ ಮಾತನಾಡಿ, ಸರ್ಕಾರದ ಮಟ್ಟದಲ್ಲಿ ದೇವಾಲಯದ ಅಭಿವೃದ್ಧಿಗೆ ಗಮನ ಹರಿಸುವುದಾಗಿ ಭರವಸೆ ನೀಡಿದರು.
ಗ್ರಾಪಂ ಅಧ್ಯಕ್ಷ ಹೇಮಲತಾ ಸಣ್ಣಸ್ವಾಮಿ, ಉಪಾಧ್ಯಕ್ಷೆ ಗೌರಮ್ಮ, ಸದಸ್ಯರಾದ ಪುಷ್ಪ, ಮಹದೇಶ್, ಪವನ್ ಕುಮಾರಿ, ಮೋಹನ್, ಹೇಮಂತ್, ಸಿದ್ದಯ್ಯ, ಪಿಡಿಒ ವಿಜಯಕುಮಾರ್, ಕಾರ್ಯದರ್ಶಿ ನಿಂಗಣ್ಣ, ರುದ್ರಪಟ್ಟಣ ಗ್ರಾಪಂ ಅಧ್ಯಕ್ಷೆ ರೂಪ, ಉಪ ತಹಸೀಲ್ದಾರ್ ರವಿ, ರಾಜಸ್ವ ನಿರೀಕ್ಷಕ ಸಿ. ಸ್ವಾಮಿ, ಗ್ರಾಮಲೆಕ್ಕಾಧಿಕಾರಿ ಧಮೇಶ್, ದೇವಕಿ ಚಂದ್ರಶೇಖರ್, ರಘು, ವಿರೂಪಾಕ್ಷ, ಗಣೇಶ್ ಮೂರ್ತಿ ಇತರರಿದ್ದರು.
0 Comments