ಕಾಳೇನಹಳ್ಳಿ ಕೆರೆಯಲ್ಲಿ ವೈಭವದ ತೆಪ್ಪೋತ್ಸವ; ಗೌರಮ್ಮನ ಮೂರ್ತಿ ವಿಸರ್ಜನೆ ವೇಳೆ ಭಕ್ತರ ಜಾತ್ರೆ


ಅರಕಲಗೂಡು: ತಾಲೂಕಿನ ಕಾಳೇನಹಳ್ಳಿ ಗ್ರಾಮದಲ್ಲಿ ಸ್ವರ್ಣಗೌರಿ ವಿಸರ್ಜನಾ ಮಹೋತ್ಸವದ ಪ್ರಯುಕ್ತ ಬುಧವಾರ ದೊಡ್ಡಕೆರೆಯಲ್ಲಿ ಆಕರ್ಷಕ ಜೋಡಿ ತೆಪ್ಪೋತ್ಸವ ನಡೆಸಲಾಯಿತು.

ಗೌರಿ ಹಬ್ಬದ ದಿನ ಊರಿನ ಗೌರಮ್ಮ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದ ಸ್ವರ್ಣಗೌರಿ ಮೂರ್ತಿಯನ್ನು ಒಂದು ತಿಂಗಳ ಕಾಲ ಪೂಜಿಸಲಾಯಿತು. ಮದುವೆಯಾಗಿ ಹೊರ ಊರಿನಲ್ಲಿರುವ ಮಹಿಳೆಯರು ಹಾಗೂ ವಲಸೆ ಹೋಗಿ ಬೇರೆಡೆ ನೆಲಸಿರುವ ಭಕ್ತರು ಬಂದು ಪೂಜೆ ಸಲ್ಲಿಸಿದರು. ಕರೊನಾ ಹಿನ್ನಲೆಯಲ್ಲಿ ಈ ಭಾರಿ ಪೂಜಾ ವಿಧಾನಗಳು ಸರಳವಾಗಿ ಜರುಗಿದವು.

ಸಂಪ್ರದಾಯದAತೆ ಒಂದು ತಿಂಗಳ ಕಾಲ ಪೂಜೆ ಸಲ್ಲಿಸಿದ ಬಳಿಕ ಬುಧವಾರ ಬೆಳಗ್ಗೆ ವಿಸರ್ಜನಾ ಮಹೋತ್ಸವ ವಿಜೃಂಭಣೆಯಿAದ ನೆರವೇರಿತು. ಅಲಂಕೃತ ಉತ್ಸವ ಅಡ್ಡೆ ತೊಟ್ಟಿಲಿನಲ್ಲಿ ಸ್ವರ್ಣಗೌರಿ ಮೂರ್ತಿ ಪ್ರತಿಷ್ಠಾಪಿಸಿ ಪ್ರಮುಖ ಬೀದಿಗಳಲ್ಲಿ ವಾದ್ಯಗೋಷ್ಠಿ ಮೆರವಣಿಗೆಯಲ್ಲಿ ಉತ್ಸವ ನಡೆಸಲಾಯಿತು. ಪ್ರತಿ ಮನೆಗಳಲ್ಲಿ ಭಕ್ತರು ಹಣ್ಣು ಕಾಯಿ ಸಮರ್ಪಿಸಿ ಕರ್ಪೂರ ಉರಿಸಿ ಭಕ್ತಿ ಭಾವ ಸಮರ್ಪಿಸಿದರು.
ನಂತರ ದೊಡ್ಡಕೆರೆ ಬಳಿ ಕೊಂಡೊಯ್ದು ಸ್ವರ್ಣಗೌರಿ ಮೂರ್ತಿಯನ್ನು ಒಂದು ತೆಪ್ಪದಲ್ಲಿ ಹಾಗೂ ಮತ್ತೊಂದು ತೆಪ್ಪದಲ್ಲಿ ದಿಡ್ಡಮ್ಮ ದೇವಿ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿ ಕೆರೆಯಲ್ಲಿ ಅದ್ದೂರಿ ತೆಪ್ಪೋತ್ಸವ ನಡೆಸಲಾಯಿತು. ಕೆರೆಯಲ್ಲಿ ಪ್ರದಕ್ಷಿಣೆ ಹಾಕುತ್ತಿದ್ದ ಜೋಡಿ ತೆಪ್ಪೋತ್ಸವಕ್ಕೆ ಜೈಕಾರ ಮೊಳಗಿಸುತ್ತಾ ಏರಿ ಮೇಲೆ ಜಮಾಯಿಸಿದ್ದ ಅಪಾರ ಭಕ್ತರು ಕಣ್ತುಂಬಿಕೊAಡು ಆನಂದಿಸಿದರು.
ತೆಪ್ಪೊತ್ಸವದ ಬಳಿಕ ನೆರೆದಿದ್ದ ಜನರ ಜಯಘೋಷಗಳ ನಡುವೆ ಸ್ವರ್ಣಗೌರಿ ಮುರ್ತಿಯನ್ನು ಕೆರೆಯಲ್ಲಿ ವಿಸರ್ಜಿಸಲಾಯಿತು. ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.

Post a Comment

0 Comments