ಅಡಿಕೆಬೊಮ್ಮನಹಳ್ಳಿ: ಟೇಲೆಂಡ್ ನಾಲೆಗೆ ನೀರು ಕೊಡದಿದ್ದರೆ ಇಂಜಿನಿಯರ್ ಜಯಕುಮಾರ್ ಗೆ ಬಿಜೆಪಿ ಮುಖಂಡರು ಮತ್ತು ರೈತರಿಂದ ಹೋರಾಟದ ಎಚ್ಚರಿಕೆ!

ಅರಕಲಗೂಡು: ತಾಲೂಕಿನ ಕತ್ತಿಮಲ್ಲೇನಹಳ್ಳಿ- ಮೋಕಲಿ ಮಾರ್ಗವಾಗಿ ಹಾದು ಹೋಗಿರುವ ಅಡಿಕೆ ಬೊಮ್ಮನಹಳ್ಳಿ ನಾಲೆ ಶಿಥಿಲಗೊಂಡು ಕೆರೆ ಕಟ್ಟೆಗಳು ತುಂಬದೆ ಬೆಳೆ ಜಮೀನು ಪಾಳು ಬಿಡುವಂತಾಗಿದೆ ಎಂದು ಅಚ್ಚುಕಟ್ಟು ರೈತರು ಆರೋಪಿಸಿದ್ದಾರೆ.

ಮೋಕಲಿ ಗ್ರಾಮದ ಬಳಿ ಶುಕ್ರವಾರ ನಾಲೆಯಲ್ಲಿ ನೀರು ಹರಿಯದೆ ಹದಗೆಟ್ಟಿರುವುದನ್ನು ತೋರಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಇಂಜಿನಿಯರ್‌ಗಳ ನಿರ್ಲಕ್ಷö್ಯ ಧೋರಣೆಯಿಂದಾಗಿ ನಾಲೆ ನಿರ್ವಹಣೆ ಇಲ್ಲವಾಗಿದೆ. ಪರಿಣಾಮವಾಗಿ ನಾಲೆ ನಿರ್ಮಾಣವಾಗಿ 17 ವರ್ಷ ಕಳೆದರೂ ಸರಿಯಾಗಿ ನೀರು ಹರಿದಿಲ್ಲ. ಕತ್ತಿಮಲ್ಲೇನಹಳ್ಳಿ, ಮೋಕಲಿ ಮಾರ್ಗವಾಗಿ ಮಗ್ಗೆ ಬರಗೂರು ತನಕ ಕೊನೆ ಭಾಗಕ್ಕೆ ನೀರು ತಲುಪುತ್ತಿಲ್ಲ. ಏತ ನೀರವಾರಿ ಮೂಲಕ ಹರಿಸಿದ ನೀರು ಹಾಳಾದ ನಾಲೆಗೆ ಹರಿಯದೆ ಮೋಕಲಿ ಆಸುಪಾಸು ಹೊಲಗಳಿಗೆ ನುಗ್ಗಿ ಶೀತಪೀಡಿತವಾಗಿವೆ. 
ಇತ್ತ ಕೆರೆ, ಕಟ್ಟೆಗಳಿಗೂ ನೀರು ತುಂಬುತ್ತಿಲ್ಲ. ಮತ್ತೊಂದೆಡೆ ತೇವಾಂಶದಿAದ ಕೂಡಿರುವ ಹೊಲಗಳಲ್ಲೂ ವ್ಯವಸಾಯ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ನಾಮಕಾವಸ್ಥೆಗೆ ನಾಲೆಗೆ ನೀರು ಹರಿಸಿ ನಿಲ್ಲಿಸಲಾಗುತ್ತಿದೆ. ಇಂದಿಗೂ ನಾಲೆ ನಿರ್ಮಾಣದ ಉದ್ದೇಶ ಈಡೇರದೆ ಆರ್ಥಿಕವಾಗಿ ಸಂಕಷ್ಟ ಅನುಭವಿಸುವಂತಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ನಾಲೆ ಕಳೆದುಕೊಂಡವರಿಗೆ ಪರಿಹಾರ ಕೂಡ ಒದಗಿಸಿಲ್ಲ. ಜನಪ್ರತಿನಿಧಿಗಳು ಕಸಬಾ ಹೋಬಳಿಯನ್ನು ನಿರ್ಲಕ್ಷಿö್ಯಸುತ್ತಿದ್ದಾರೆ. ಈ ಭಾಗದ ನಾಲೆಗಳನ್ನು ದುರಸ್ತಿ ಪಡಿಸಿ ನೀರು ಹರಿಸಲು ಮುಂದಾಗುತ್ತಿಲ್ಲ ಎಂದು ಗ್ರಾಮದ ನವೀನ್ ದೂರಿದರು.

ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಅಡಿಕೆಬೊಮ್ಮನಹಳ್ಳಿ ಏತ ನೀರಾವರಿ ನಾಲೆ ದುರಸ್ತಿ ಪಡಿಸಿ ಮಾದಿಹಳ್ಳಿ, ಶ್ಯಾನುಭೋಗನಹಳ್ಳಿ, ಕೊಡಕಳ್ಳಿಯಿಂದ ಟೇಲೆಂಡ್ ವರೆಗೆ ನೀರು ಹರಿಸದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸ್ಥಳಕ್ಕೆ ಧಾವಿಸಿದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಜಯಕುಮಾರ್ ರೈತರ ಮನವಿ ಸ್ವೀಕರಿಸಿ ಮಾತನಾಡಿ, ನಾಲೆಯಲ್ಲಿ ತುಂಬಿಕೊAಡಿರುವ ಹೂಳು ತುಂಬಿ ಗಿಡಗಂಟಿಗಳು ಕಟ್ಟಿಕೊಂಡು ನೀರು ಮುಂದೆ ಸಾಗುತ್ತಿಲ್ಲ. ನಾಲೆ ಜಮೀನು ಕಳೆದುಕೊಂಡವರಿಗೆ ಪರಿಹಾರ ಸಹ ಸಿಕ್ಕಿಲ್ಲ. ನಾಲೆ ನವೀಕರಣಗೊಳಿಸಿ ಕೊನೆ ಭಾಗಕ್ಕೆ ನೀರು ತಲುಪಿಸಿ ರೈತರಿಗೆ ನ್ಯಾಯ ದೊರಕಿಸಿಕೊಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Post a Comment

0 Comments