ಅರಕಲಗೂಡು: ತಾಲೂಕಿನಲ್ಲಿ ಮಾಗಡಿ-ಸೋಮವಾರಪೇಟೆಯ ಹೆದ್ದಾರಿ ಅಗಲೀಕರಣ ಕಾಮಗಾರಿಯಲ್ಲಿ ಸ್ವಲ್ಪವೂ ವ್ಯತ್ಯಾಸವಾಗಲು ಬಿಡುವುದಿಲ್ಲ, ೨೦೧೭ರ ಯೋಜನಾ ವರದಿ ಅನ್ವಯವೇ ಕಾಮಗಾರಿ ಆಗಲಿದೆ ಎಂದು ಶಾಸಕ ಎ.ಟಿ.ರಾಮಸ್ವಾಮಿ ಎ. ಮಂಜು ಅವರಿಗೆ ಪರೋಕ್ಷವಾಗಿ ಎದಿರೇಟು ನೀಡಿದರು.
ಕೆಶಿಪ್ ಅಧಿಕಾರಿಗಳೊಂದಿಗೆ ಕಾಳೇನಹಳ್ಳಿ ಬಳಿ ರಸ್ತೆ ಬಂದ್ ಆಗಿದ್ದ ಸ್ಥಳದಲ್ಲಿ ಕೆಶಿಫ್ ಅಧಿಕಾರಿಗಳೊಂದಿಗೆ ಚರ್ಚಿಸಿದ ಅವರು ಮಾಗಡಿ-ಸೋಮವಾರಪೇಟೆಯ ಹೆದ್ದಾರಿಗೆ ಕುರಿತಂತೆ 2017 ರ ಮಾರ್ಚ ನಲ್ಲಿ ಸಿದ್ಧವಾಗಿರುವ ಯೋಜನಾ ವರದಿಯಂತೆ ಕಾಮಗಾರಿಯು ನಡೆಯಲಿದ್ದು ಅದಕ್ಕಾಗಿ ಕ್ರಮ ವಹಿಸಿರುವೆ.
ಗುಣಮಟ್ಟ ಮತ್ತು ಉತ್ತಮ ಹೆದ್ದಾರಿಯನ್ನು ಹೊಂದಬೇಕು ಎನ್ನುವ ದೃಷ್ಟಿಯಿಂದ ಅಧಿಕಾರಿಗಳೊಂದಿಗೆ ಈ ಕುರಿತು ಅನೇಕ ಬಾರಿ ಸಭೆ ನಡೆಸಿದ್ದು, ಮೂಲ ಯೋಜನೆಯಲ್ಲಿ ಸ್ವಲ್ಪವನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಬದಲಾಯಿದಲು ನಾನು ಬಿಡುವುದೂ ಇಲ್ಲ ಎಂದು ತಿಳಿಸಿದರು.
ಸಂಜೆಯೊಳಗೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಕೆ.ಶಿಫ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತೋಟದ ಬೆಳೆಗಳು ನಾಶವಾಗಿರುವ ಮತ್ತು ರಸ್ತೆ ಸಂಚಾರ ಬಂದ್ ಆಗಿದ್ದ ಸ್ಥಳದಲ್ಲಿ ಕೆಶಿಫ್ ಅಧಿಕಾರಿಗಳೊಂದಿಗೆ ಚರ್ಚಿಸಿದ ಅವರು ಮಾತನಾಡುತ್ತಾ ರಸ್ತೆ ಅಗಲೀಕರಣ ಕುರಿತಂತೆ ಅಧಿಕಾರಿಗಳೊಂದಿಗೆ ಅನೇಕ ಬಾರಿ ಸಭೆ ನಡೆಸಿದ್ದು,
ಕಾಳೇನಹಳ್ಳಿ ಸಮೀಪ ಮಳೆಯ ನೀರಿನಿಂದ ತೋಟ ಮತ್ತು ವಿಳ್ಯೇದೆಲೆ ಬೆಳೆ ನಾಶಕ್ಕೆ ನೀರಿನ ಪ್ರಮಾಣ ಕಡಿಮೆಯಾದ ಮೇಲೆ ಪರಿಶೀಲಿಸಿ ಪರಿಹಾರ ನೀಡಲು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
0 Comments