ಭಾರತ ಸಂವಿಧಾನ; ಇಂದಿನಿಂದ ತರಬೇತಿ ಶುರು

ಅರಕಲಗೂಡು:   ಇಲ್ಲಿನ ರೋಟರಿ ಕ್ಲಬ್ ವತಿಯಿಂದ  ಭಾರತೀಯ ಸೇನೆ ಮತ್ತು ಪೊಲೀಸ್ ಇಲಾಖೆಗೆ ಸೇರಬಯಸುವ  ಅಭ್ಯರ್ಥಿಗಳಿಗೆ  ಭವಿಷ್ಯದ ಬಾಗಿಲು ಕಾರ್ಯಕ್ರಮದಡಿ ಉಚಿತ  ಆನ್ ಲೈನ್ ತರಬೇತಿಯನ್ನು ಸ್ಪರ್ಧಾಯುಗ ಯೂಟ್ಯೂಬ್ ಚಾನಲ್ ಮೂಲಕ ಹಮ್ಮಿಕೊಳ್ಳಲಾಗಿದೆ.

ಅ19 ಮಂಗಳವಾರ ದಿಂದ ಅ 22  ಶುಕ್ರವಾರದವರೆಗೆ ಪ್ರತಿದಿನ ಸಂಜೆ 6  ರಿಂದ 8 ರ ವರೆಗೆ ನಡೆಯುವ ತರಬೇತಿಯಲ್ಲಿ ಭಾರತೀಯ ಸಂವಿಧಾನ, ಸಾಮಾನ್ಯ ವಿಜ್ಞಾನ, ಪ್ರಚಲಿತ ಘಟನೆಗಳು, ಇತಿಹಾಸ ಹಾಗೂ ಭೂಗೋಳಶಾಸ್ತ್ರದ ವಿಷಯಗಳ ಮೇಲೆ ಉಪನ್ಯಾಸಕರಾದ ಎನ್.  ಶಂಕರಪ್ಪ ಮತ್ತು  ಎಂ. ಮಹೇಶ್ ತರಬೇತಿ ನೀಡುವರು.  ಅಭ್ಯರ್ಥಿಗಳು ಇದರ ಉಪಯೋಗವನ್ನು ಪಡೆದು ಕೊಳ್ಳುವಂತೆ  ರೋಟರಿ  ಅಧ್ಯಕ್ಷ ಶಶಿಧರ್ ಕೋರಿದ್ದಾರೆ.

Post a Comment

0 Comments