ದೊಡ್ಡಬೆಮ್ಮತ್ತಿ ಗ್ರಾಮದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮುಂದೆ ಹೋರಾಟ
ಅರಕಲಗೂಡು: ತಾಲೂಕಿನ ದೊಡ್ಡಬೆಮ್ಮತ್ತಿ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆ ವ್ಯವಸ್ಥಾಪಕರನ್ನು ಕೂಡಲೇ ಬೇರೆಡೆಗೆ ವರ್ಗಾಯಿಸಬೇಕು, ಇವರು ರೈತರು ಮತ್ತು ಗ್ರಾಹಕರೊಂದಿಗೆ ಅನುಚಿತವಾಗಿ ವರ್ತಿಸಿ ಅವಮಾನಿಸುತ್ತಿದ್ದಾರೆ ಎಂದು ಆರೋಪಿಸಿ ತಾಲೂಕು ರೈತ ಸಂಘದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ಬ್ಯಾಂಕ್ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು ವ್ಯವಸ್ಥಾಪಕ ಶ್ರೀಪಾದ ಭಟ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬ್ಯಾಂಕಿಗೆ ಬರುವ ರೈತರೊಂದಿಗೆ ವ್ಯವಸ್ಥಾಪಕರು ಸೌಜನ್ಯದಿಂದ ವ್ಯವಹರಿಸದೆ ಬೇಜಾಬಾಬ್ದಾರಿಯಾಗಿ ವರ್ತಿಸುತ್ತಿದ್ದಾರೆ. ಕೃಷಿ ಸಾಲದ ನೆಪ ಹೇಳಿ ಹಿರಿಯ ನಾಗರಿಕರ ವಯಸ್ಕರ ವೇತನ, ವಿಧಾವ ವೇತನ ಹಾಗೂ ಉದೋಗ್ಯ ಖಾತ್ರಿ ಯೋಜನೆ ಹಣವನ್ನು ಮುಟ್ಟುಗೋಲು ಹಾಕಿಕೊಂಡು ಗ್ರಾಹಕರನ್ನು ಪೀಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪ್ರತಿಭಟನೆ ಪಾಲ್ಗೊಂಡಿದ ಹಿರಿಯ ಮಹಿಳೆ ನಿಂಗಮ್ಮ ಮಾತನಾಡಿ, ವ್ಯವಸ್ಥಾಪಕರೊಂದಿಗೆ ಪರಿಪರಿಯಾಗಿ ಬೇಡಿಕೊಂಡರು ವೃದ್ಯಾಪ್ಯ ವೇತನದ ಹಣವನ್ನು ನೀಡದೆ ಸತಾಯಿಸುತ್ತಾರೆ. ಆರೋಗ್ಯ ಹದಗೆಟ್ಟಿದೆ ಆಸ್ಪತ್ರೆ ಹೋಗಬೇಕು ಕಡೆ ಪಕ್ಷ ಎರಡು ನೂರು ಹಣ ನೀಡಿ ಎಂದು ಗೋಗರೆದರೂ ಕೇಳಲಿಲ್ಲ. ರೈತ ಮುಖಂಡ ಪ್ರಕಾಶ ಪೆಮ್ಮನಹಳ್ಳಿ ಮಾತನಾಡಿ, ಸ್ನೇಹಿತರಿಗೆ ಸಾಲ ಸೌಲಭ್ಯ ನೀಡುವಂತೆ ಮನವಿ ಸಲ್ಲಿಸಲು ತೆರಳಿದಾಗ ನಿರಾಕರಿಸಿ ಅನುಚಿತವಾಗಿ ವರ್ತಿಸಿದರು ಎಂದು ಕಿಡಿಕಾರಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ಯೋಗಣ್ಣ ಮಾತನಾಡಿ, ಸರ್ಕಾರದ ಯಾವುದೇ ಸವಲತ್ತುಗಳನ್ನು ಬ್ಯಾಂಕ್ ಆಡಳಿತ ವ್ಯವಸ್ಥೆ ನೀಡುತ್ತಿಲ್ಲ. ಸರ್ಕಾರ ಮತ್ತು ಆರ್‌ಬಿಐ ಸಂಸ್ಥೆ ಆದೇಶದಂತೆ ಗ್ರಾಮೀಣ ಬ್ಯಾಂಕುಗಳು ವ್ಯವಹರಿಸಬೇಕು. ರೈತರನ್ನು ಸಾಲದ ನೆಪದಲ್ಲಿ ಶೋಷಣೆ ಮಾಡುವುದನ್ನು ನಿಲ್ಲಸಬೇಕು. ಶೀಘ್ರವೇ ಬ್ಯಾಂಕ್ ವ್ಯವಸ್ಥಾಪಕನ್ನು ಬದಲಿಸಬೇಕು. ಇಲ್ಲವಾದರೆ ಬ್ಯಾಂಕ್‌ಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದರು.
ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಎಚ್.ಈ. ಜಗದೀಶ್, ರೈತ ಸಂಘದ ಮುಖಂಡರಾದ ಬಂದಿಗನಹಳ್ಳಿ ರವಿ, ಜಗನ್ನಾಥ್, ಹರಳಹಳ್ಳಿ ತಮ್ಮೇಗೌಡ, ಭುವನೇಶ್, ವೇದಾನಂದ, ಮುಗಳಿ ಕೃಷ್ಣೇಗೌಡ, ತಾಲೂಕು ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಹೇಮಲತಾ, ಲಕ್ಷö್ಮಮ್ಮ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
0 Comments