ಕಾಯಕತ್ವದ ಪೌರ ಕಾರ್ಮಿಕರನ್ನು ಸಮಾಜ ಗೌರವಿಸಿ ಎಂದ ಎ. ಮಂಜು


ಅರಕಲಗೂಡು: ದುಡಿಮೆಯೇ ಸರ್ವಸ್ವ, ಪೌರ ಕಾರ್ಮಿಕರು ಶ್ರಮಜೀವಿಗಳಾಗಿದ್ದು ಸಮಾಜ ಇವರ ಸೇವೆ ಗೌರವಿಸಿ ಬೆಳೆಸುವ ಮನೋಧರ್ಮ ಹೊಂದಬೇಕು ಎಂದು ಮಾಜಿ ಸಚಿವ ಎ. ಮಂಜು ಮನವಿ ಮಾಡಿದರು.

ಪಟ್ಟಣ ಪಂಚಾಯಿತಿ ಆವರಣದಲ್ಲಿ ಪೌರ ಕಾರ್ಮಿಕರ ದಿನಾಚರಣೆ ಪ್ರಯುಕ್ತ ತಾಲೂಕು ಬಿಜೆಪಿ ಮಂಡಲದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನದ ಅಂಗವಾಗಿ ಪೌರ ಕಾರ್ಮಿರನ್ನು ಸನ್ಮಾನಿಸುವ ಮುಖೇನ ಕಾಯಕ ಸಮಾಜಕ್ಕೆ ಗೌರವ ಸಲ್ಲಿಸಲಾಗುತ್ತಿದೆ ಎಂದರು.
ಪರಿಸರ ಬೆಳೆಸುವುದು ಸಾರ್ವಜನಿಕರ ಆದ್ಯ ಕರ್ತವ್ಯವಾಗಿದೆ. ಹಾಗೆಯೇ ದಿನ ಬೆಳಗಾದರೆ ಪಟ್ಟಣವನ್ನು ಸ್ವಚ್ಚಗೊಳಿಸಿ ಅಂದವಾಗಿಟ್ಟು ನೈಜ ಪರಿಸರ ಪ್ರೇಮ ಮೆರೆಯುತ್ತಿರುವ ಪೌರ ಕಾರ್ಮಿಕರು ಆರೋಗ್ಯದ ಕಡೆಗೂ ಹೆಚ್ಚಿನ ಕಾಳಜಿ ವಹಿಸಬೇಕು. ಇವರ ಬದುಕಿನ ಭದ್ರತೆಗೆ ಸರ್ಕಾರ ಕೂಡ ಅಗತ್ಯ ಸವಲತ್ತುಗಳನ್ನು ಒದಗಿಸುತ್ತಿದೆ. ಕಾಯಕದ ಜತೆಗೆ ಪೌರ ಕಾರ್ಮಿಕರು ತಮ್ಮ ಮಕ್ಜಳಿಗೆ ಶಿಕ್ಷಣ ಕೊಡಿಸಬೇಕು ಎಂದು ಕಿವಿಮಾತು ಹೇಳಿದರು.
ಪಪಂ ಉಪಾಧ್ಯಕ್ಷ ನಿಖಿಲ್ ಕುಮಾರ್, ಸದಸ್ಯರಾದ ರಮೇಶ್ ವಾಟಾಳ್, ರಶ್ಮಿ, ರಜಿನಿ, ಮಾಜಿ ಅಧ್ಯಕ್ಷ ಮಂಜು ಶೆಟ್ಟಿಗೌಡ, ಬಿಜೆಪಿ ಮುಖಂಡರಾದ ಮುತ್ತಿಗೆ ರಮೇಶ್, ವಕಾರೆ ರವಿಕುಮಾರ್, ಎ.ಎಂ. ರಘು, ಎ.ಸಿ. ಮಧು, ಖಂಡೇಶ್ವರ್, ಜಬಿವುಲ್ಲಾ ಮುಂತಾದವರು ಹಾಜರಿದ್ದರು. ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.

Post a Comment

0 Comments