ಮೀಸಲಾತಿ ನಿಗದಿ ಸರಿಯಿಲ್ಲ ಎಂದ ಶಾಸಕ


ಅರಕಲಗೂಡು: ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಸರ್ಕಾರ ತಾಲೂಕಿನಲ್ಲಿ ನಿಗದಿ ಪಡಿಸಿರುವ ಮೀಸಲಾತಿ ಸಮರ್ಪಕವಾಗಿಲ್ಲ ಎಂದು ಶಾಸಕ ಎ.ಟಿ. ರಾಮಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. 

ಜಿಪಂ ಮತ್ತು ತಾಪಂ ಕ್ಷೇತ್ರಗಳ ಮರು ವಿಂಗಡಣೆಯಲ್ಲೂ ಅನ್ಯಾಯ ಎಸಗಲಾಗಿದೆ. ತಾಲೂಕಿನಲ್ಲಿ ಬಹಳಷ್ಟು ಕ್ಷೇತ್ರಗಳಲ್ಲಿ ಹಿಂದೆ ಇದ್ದ ಪ್ರವರ್ಗಗಳನ್ನೆ ಈ ಬಾರಿಯ ಮೀಸಲಾತಿಯಲ್ಲೂ ಮುಂದುವರೆಸಲಾಗಿದೆ. ಈ ಕುರಿತು ಸಾರ್ವಜನಿಕ ವಲಯದಲ್ಲೂ ಬೇಸರವಿದ್ದು ತಮಗೂ ಇದು ಸಮಾಧಾನ ತಂದಿಲ್ಲ. ಈ ಕುರಿತು ಕೆಲವರು ನ್ಯಾಯಾಲಯದಲ್ಲಿ ಪ್ರಶ್ನಿಸಲು ಮುಂದಾಗಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು.

                      - ಸಂಪಾದಕ - ರವಿ

Post a Comment

0 Comments