ಅರಕಲಗೂಡು: ಪಟ್ಟಣದಲ್ಲಿ ಸೋಂಕು ಮಾರಮ್ಮನ ಉತ್ಸವ ಭಕ್ತಿ ಸಂಭ್ರಮದಿಂದ ಆಚರಿಸಲಾಯಿತು.
ಬೆಳಿಗ್ಗೆ ಗ್ರಾಮ ದೇವತೆ ದೊಡ್ಡಮ್ಮ ದೇವಾಲಯದಲ್ಲಿ ತಿದ್ದಮ್ಮನನ್ನು ಪ್ರತಿಷ್ಠಾಪಿಸಿ ಪೂಜಾ ಕೈಂರ‍್ಯಗಳನ್ನು ನಡೆಸಿದ ಬಳಿಕ ಪಟ್ಟಣದ ವಿವಿದ ಬಡಾವಣೆಗಳಲ್ಲಿ ದೇವರನ್ನು ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು.
ಜನರು ಹಣ್ಣು,ಕಾಯಿ ನೀಡಿ ಪೂಜೆ ಸಲ್ಲಿಸಿ ಮಡಿಲಕ್ಕಿ ನೀಡಿದರು. ಪ್ರತಿ 5 ರ‍್ಷಗಳಿಗೊಮ್ಮೆ ಗ್ರಾಮ ದೇವತೆ ದೊಡ್ಡಮ್ಮ ದೇವತೆಯ ಜಾತ್ರೆ ವೈಭವದಿಂದ ನಡೆಯುತ್ತದೆ. ಈ ವೇಳೆ ರೋಗ ರುಜಿನ, ಸೊಂಕುಗಳು ಬಾಧಿಸದಂತೆ ಹಾಗೂ ಉತ್ತಮ ಮಳೆ ಬೆಳೆಯಾಗಿ ಸಮೃದ್ಧಿ ನೆಲೆಸುವಂತೆ ಪ್ರರ‍್ಥಿಸಿ ಸೋಂಕುಮಾರಿಯನ್ನು ಊರಿಂದ ಕಳಿಸುವುದು ವಾಡಿಕೆಯಾಗಿತ್ತು.
ಈ ರ‍್ಷ ನಡೆಯಬೇಕಿದ್ದ ಜಾತ್ರೆಯನ್ನು ಕೋವಿಡ್ ಹಿನ್ನೆಲೆಯಲ್ಲಿ ಮುಂದೂಡಿರುವ ಹಿನ್ನೆಲೆಯಲ್ಲಿ ಸೋಂಕು ಮಾರಿ ಉತ್ಸವವನ್ನು ಸರಳ ರೀತಿಯಲ್ಲಿ ಆಚರಿಸಲಾಯಿತು
0 Comments