ಅರಕಲಗೂಡು: ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾರ್ವಜನಿಕರಿಗೆ ಸಂಚಾರಕ್ಕೆ ಅಡೆತಡೆ ಉಂಟಾಗುವತ್ತಿರುವ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯತಿ ವತಿಯಿಂದ ವಾಹನ ನಿಲುಗಡೆ ಪ್ರದೇಶವನ್ನು ಸೂಚಿಸಲು ೧೬ ನಾಮ ಫಲಕಗಳನ್ನು ಪೋಲೀಸ್ ಇಲಾಖೆ ಅಧಿಕಾರಿಗಳಿಗೆ ಶಾಸಕ ಎ ಟಿ ರಾಮಸ್ವಾಮಿ ಹಸ್ತಾಂತರಿಸಿದರು.
ನಂತರ ಮಾತನಾಡಿದ ಶಾಸಕರು ಪಟ್ಟಣ ವ್ಯಾಪ್ತಿಯಲ್ಲಿ ಪ್ರಮುಖ ಬೀದಿಗಳಲ್ಲಿ ಜನದಟ್ಟಣೆಯು ಹೆಚ್ಚುತ್ತಿದ್ದು ಅದೇರೀತಿ ವಾಹನಗಳ ಸಂಖ್ಯೆಯು ಅಧಿಕವಾಗಿದೆ ಅದರ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಂಚಾರ ವ್ಯವಸ್ಥೆ ಸುಗಮ ಗೊಳಿಸಲು ಪೋಲೀಸ್ ಇಲಾಖೆ ಮತ್ತು ಪಟ್ಟಣ ಪಂಚಾಯತಿ ಜಂಟಿಯಾಗಿ ಕಾರ್ಯ ಪ್ರವೃತ್ತರಾಗಿ ಪಟ್ಟಣ ಪ್ರಮುಖ ಸ್ಥಳಗಳಲ್ಲಿ ವಾಹನ ನಿಲುಗಡೆ ಪ್ರದೇಶ ಮತ್ತು ವಾಹನ ನಿಲುಗಡೆ ನಿಷೇಧ ಸ್ಥಳಗಳ ಸೂಚಿಸುವ ನಾಮಫಲಕಗಳ ಅಳವಡಿಸಿಲಾಗುತ್ತದೆ ಸಾರ್ವಜನಿಕರು ಸಹಕಾರಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ತಲ್ಹಾಶೀಧರ್ ವೈ ಎಂ ರೇಣುಕುಮಾರ್ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಶಿವಕುಮಾರ್, ಸರ್ಕಲ್ ಇನ್ ಪೆಕ್ಟರ್ ಸತ್ಯನಾರಾಯಣ ಸಬ್ಇನ್ ಪೆಕ್ಟರ್ ಮಾಲಾ ಹಾಜರಿದ್ದರು.
ಸಂಪಾದಕ - ರವಿ
0 Comments