ಕನ್ನಡದ ಆಸ್ತಿ ಅನಕೃ ೫೦ನೇ ಪುಣ್ಯಸ್ಮರಣೆ

ಅರಕಲಗೂಡು: ಕನ್ನಡ ಸಾಹಿತ್ಯ ಲೋಕದ ಸರ್ವತೋಮುಖ ಶ್ರೇಯೋಭಿವೃದ್ಧಿಗೆ ಕಾಂದಬರಿ ಸಾರ್ವಭೌಮ ಅ.ನ. ಕೃಷ್ಣರಾಯ ಅವರು ಸಲ್ಲಿಸಿದ ಮಹತ್ತರವಾದ ಸೇವೆ ಸಾರ್ವಕಾಲಿಕವಾಗಿ ಮೇರುಮಟ್ಟದ್ದಾಗಿದೆ ಎಂದು ಶಾಸಕ ಎ.ಟಿ. ರಾಮಸ್ವಾಮಿ ಅಭಿಪ್ರಾಯಪಟ್ಟರು.

ಕಾಂದಬರಿ ಸಾರ್ವಭೌಮ ಅ.ನ. ಕೃಷ್ಣರಾಯ ಅವರ 50ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಶುಕ್ರವಾರ ಪಟ್ಟಣದದಲ್ಲಿ ಅನಕೃ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಪ್ರಾಚೀನ ಭಾಷೆಯಾದ ಕನ್ನಡದ ಏಳಿಗೆಗೆ ಅನಕೃ ಅವರು ಜೀವಮಾನವಿಡಿ ದುಡಿದು ಅಪಾರ ಕೊಡುಗೆ ನೀಡಿದ್ದಾರೆ. ಸಾಹಿತ್ಯದ ಏಕೀಕರಣದಲ್ಲಿ ಮಂಚೂಣಿಯಲ್ಲಿ ನಿಂತು ಹೋರಾಟ ಮಾಡಿದ್ದ ಇವರ ಕನ್ನಡದ ದೊಡ್ಡ ಆಸ್ತಿಯಾಗಿದ್ದಾರೆ. ಕನ್ನಡ ತಾಯಿಗೆ ಬದುಕು ಮೀಸಲಾಗಿಟ್ಟಿದ್ದ ಇವರು ಮೊದಲು ಕನ್ನಡಕ್ಕಾಗಿಯೇ ಕೈಎತ್ತುತ್ತಿದ್ದರು. ಅವರ ಹೋರಾಟದ ಬದುಕಿನ ಆದರ್ಶಗಳು, ನ್ಯಾಯಕ್ಕಾಗಿ ಪ್ರಾಮಾಣಿಕ ಹೋರಾಟದ ಕಿಚ್ಚು ಇನ್ನು ಹಚ್ಚಹಸಿರಾಗಿವೆ. ಇಂತಹ ಮಹಾನ್ ವ್ಯಕ್ತಿಯ ಅರಕಲಗೂಡು ಇವರ ತವರೂರಾಗಿರುವುದು ನಮ್ಮೆಲ್ಲರ ಹೆಮ್ಮೆಯ ಸಂಗತಿ ಎಂದು ಕೊಂಡಾಡಿದರು.

ಪಪಂ ಅಧ್ಯಕ್ಷ ಹೂವಣ್ಣ, ಮಾಜಿ ಅಧ್ಯಕ್ಷ ಲೋಕೇಶ್, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಂ.ಸಿ. ರಂಗಸ್ವಾಮಿ, ಮುಖಂಡರಾದ ಎ.ಎಸ್. ರಾಮಸ್ವಾಮಿ, ರವಿಕುಮಾರ್, ಶಶಿಕುಮಾರ್ ಹಾಜರಿದ್ದರು.


                     - ಸಂಪಾದಕ - ರವಿ

Post a Comment

0 Comments