ಹಳ್ಳಿಗಳಲ್ಲಿ ಸಂಚಾರ ನಡೆಸಿದ ಕೃಷಿ ಅಭಿಯಾನ ಜಾಗೃತಿ ವಾಹನಕ್ಕೆ ಶಾಸಕ ಹಸಿರು ನಿಶಾನೆ


ಅರಕಲಗೂಡು: ವೈಜ್ಞಾನಿಕವಾದ ಯಂತ್ರಗಳನ್ನು ಸಕಾಲದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಬಳಸಿಕೊಡು ರೈತರು ಕೃಷಿ ಕ್ಷೇತ್ರದಲ್ಲಿ ಲಾಭ ಹೊಂದಬೇಕು ಎಂದು ಶಾಸಕ ಎ.ಟಿ. ರಾಮಸ್ವಾಮಿ ಕಿವಿಮಾತು ಹೇಳಿದರು.

ತಾಲೂಕಿನ ಕೊಣನೂರು ಆರ್ಯ ಈಡೀಗರ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕೃಷಿ ಯಂತ್ರದಾರೆ ಉದ್ಘಾಟನೆ ಹಾಗೂ ಕೃಷಿ ಅಭಿಯಾನ ರಥಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೃಷಿ ಯಂತ್ರೋಪಕರಣಗಳು ಒಂದೇ ಸೂರಿನಡಿ ಖಾಸಗಿಯವರಿಗಿಂತ ಕಡಿಮೆ ದರದ ಬಾಡಿಗೆಗೆ ದೊರಕುವಂತೆ ಮಾಡುತ್ತಿದ್ದು ಸಣ್ಣ ಮತ್ತು ಅತಿ ಸಣ್ಣ ರೈತರೂ ಕೂಡ ವೈಜ್ಞಾನಿಕ ರೀತಿಯಲ್ಲಿ ಬೇಸಾಯ ಕೈಗೊಳ್ಳಲು ಸಹಕಾರಿಯಾಗಿದೆ ಎಂದರು.

ಪರಿಸರದಲ್ಲಿನ ವೈಪರೀತ್ಯಗಳು ತಡೆಯುವ ನಿಟ್ಟಿನಲ್ಲಿ ವೈಜ್ಞಾನಿಕವಾಗಿ ಚಿಂತಿಸುವ ಜೊತೆಗೆ ಪರಿಸರವನ್ನು ಸಂರಕ್ಷಿಸುವುದನ್ನು ಮೈಗೂಡಿಸಿಕೊಳ್ಳಬೇಕಿದೆ. ಕೃಷಿ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳನ್ನು ಪ್ರತಿ ಹಳ್ಳಿಗೂ ತಿಳಿಸುವ ಉದ್ದೇಶದಿಂದ ಕೃಷಿ ರಥವು ಹಳ್ಳಿ ಹಳ್ಳಿಗೆ ಕೃಷಿ ಅಭಿಯಾನ ರಥವು ಸಂಚರಿಸಲಿದ್ದು ರೈತರ ಇದರ ಸದುಪಯೋಗವನ್ನು ಪಡಿಸಿಕೊಳ್ಳಬೇಕು. ಕೃಷಿ ಪ್ರದಾನವಾದ ದೇಶದಲ್ಲಿರುವ ಎಲ್ಲಾ ಜನಪ್ರತಿನಿಧಿಗಳು ಸಹ ಕೃಷಿ ಇಲಾಖೆ, ನರೇಗಾ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಜನರಿಗೆ ದೊರೆಯುವ ಸೌಲಭ್ಯಗಳನ್ನು ತಿಳಿಸಿ ಕಟ್ಟಕಡೆಯ ಪ್ರಜೆಗೂ ಸರ್ಕಾರಗಳ ಸೌಲಭ್ಯಗಳು ಮತ್ತು ಯೋಜನೆಗಳು ತಲುಪುವಂತೆ ಕ್ರಮವಹಿಸಬೇಕು ಎಂದು ತಿಳಿಸಿದರು.

ತಾಲೂಕು ಸಹಾಯಕ ನಿರ್ದೇಶಕ ರಮೇಶ್ ಕುಮಾರ್, ಕೃಷಿ ವಿಜ್ಞಾನಿ ಡಾ. ಶಿವಶಂಕರ್, ಹಾರಂಗಿ ಮಹಾಮಂಡಲ ಅಧ್ಯಕ್ಷ ಎಸ್.ಸಿ.ಚೌಡೇಗೌಡ, ಗ್ರಾ.ಪಂ ಅಧ್ಯಕ್ಷ ಕೆ.ಬಿ.ರಮೇಶ್, ಕೃಷಿ ಅಧಿಕಾರಿ ಸೋಮಶೇಖರ್, ಪ್ರಾಂಶುಪಾಲ ಬಸವರಾಜು,  ಪ್ರಗತಿಪರ ಕೃಷಿಕ ಅಣ್ಣೇಗೌಡ, ಮುಖಮಡ ಕೆರೆಕೋಡಿ ರಾಜೇಗೌಡ, ಪಿಡಿಒ ಗಣೇಶ್ ಮತ್ತು ಸಿಬ್ಬಂದಿ, ಹಾಜರಿದ್ದರು.
ಸೋಮವಾರ ಕೃಷಿ ರಥವು ಕಡವಿನಹೊಸಳ್ಳಿ, ಸರಗೂರು ಮತ್ತು ಕಟ್ಟೇಪುರ ಗ್ರಾ.ಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಸಂಚರಿಸಿ ರೈತರಲ್ಲಿ ಜಾಗೃತಿ ಮೂಡಿಸಿತು. 


                         ಸಂಪಾದಕ - ರವಿ                  

Post a Comment

0 Comments