ಪಪಂ ಅಧ್ಯಕ್ಷ ಹೂವಣ್ಣ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಕಳೆದ 5 ವರ್ಷಗಳ ಹಿಂದೆ ಪ್ರಾರಂಭವಾದ ಕಾಮಗಾರಿ ಅರ್ಧಕ್ಕೆ ನಿಂತಿದ್ದು ಪೂರ್ಣಗೊಳಿಸಲು ಕ್ರಮ ವಹಿಸಿಲ್ಲ, ಸರ್ಕಾರವೂ ಈ ಕುರಿತು ಗಮನ ಹರಿಸಿಲ್ಲ. ಜನರು ಮೂಲ ಸೌಕರ್ಯ ವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಪಂ ಅಧ್ಯಕರು ಅಧಿಕಾರ ವಹಿಸಿಕೊಂಡು 10 ತಿಂಗಖಾಗಿದ್ದರೂ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಗಮನ ಹರಿಸದೆ ಕೆಲವೇ ವಾರ್ಡಗಳ ಅಭಿವೃದ್ಧಿಗೆ ಆಶಕ್ತಿ ವಹಿಸುತ್ತಿದ್ದಾರೆ. ಸ್ವಚ್ಚತೆ, ಬೀದಿದೀಪ, ರಸ್ತೆ ಅಭಿವೃದ್ಧಿ ಮುಮಥಾದ ಮೂಲಬೂತ ಸೌಕರ್ಯಗಳ ವಿಚಾರದಲ್ಲಿ ಯಾವ ಬದಲಾವಣೆಯೂ ಕಂಡುಬರುತ್ತಿಲ್ಲ ಎಂದು ಆರೋಪಿಸಿದರು.
ಉಪಾಧ್ಯಕ್ಷ ನಿಖಿಲ್ ಕುಮಾರ್ ಮಾತನಾಢಿ ಪಟ್ಟಣದ ಹಲವು ಮೂಲ ಭೂತ ಸೌಕರ್ಯಗಳ ಕೊರತೆ ಕುರಿತು ಅಧ್ಯಕ್ಷರಿಗೆ ಹಲವು ಬಾರಿ ಮನವಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ, ಬೀದಿ ದೀಪ, ಬೀಇ ನಾಯಿಗಳ ಹಾವಳಿ, ಸ್ವಚ್ಚತೆ ಮುಂತಾದ ಹಲವು ವಿಷಯಗಳ ಬಗ್ಗೆ
ನಿರ್ಲಕ್ಷಿಸಲಾಗಿದೆ. ಅಭಿವೃದ್ಧಿ ಕಾಮಗಾರಿಗಳ ಕುರಿತು ಸದಸ್ಯರನ್ನು ವಿಶ್ವಾಸಕ್ಜಕೆ ತೆಗೆದುಕೊಳ್ಳದೆ ಏಕಪಕ್ಷಿಯವಾಗಿ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಸಭೆಯಲ್ಲಿ ಚರ್ಚಿಸಿ ಅನುಮೋದನೆ ಪಡೆಯದೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಪಪಂ ಕಚೇರಿ ಆವರಣದಲ್ಲೆ ಇತ್ತೀಚೆಗೆ ಭೂಮಿ ಪೂಜೆ ನಡೆಸಲಾಗಿದೆ ಎಂದು ಆರೋಪಿಸಿದರು.
ಈ ಹಿಂದೆ ಸಭೆಯಲ್ಲಿ ಚರ್ಚಿತವಾಗಿರುವ ವಿಷಯಗಳು ಯಾವರೀತಿ ದಾಖಲು ಮಾಡಲಾಗಿದೆ ಎಂಬುದನ್ನು ಸಭೆಗೆ ಓದಿ ಹೆಳುವಂತೆ ಸದಸ್ಯ ಅನಿಕೇತನ್ ಪಟ್ಟು ಹಿಡಿದರಲ್ಲದೆ, ಪಪಂ ಸಿಬ್ಬಂದಿ ಸದಸ್ಯರಿಗೆ ಯಾವುದೆ ಗೌರವ ನೀಡುತ್ತಿಲ್ಲ ಎಂದು ಕಿಡಿಕಾರಿದರು. ಖರ್ಚು ವೆಚ್ಚಗಳ ಮಾಹಿತಿಯಲ್ಲಿ ನೀರಿನ ತೆರಿಗೆ ಸಂಗ್ರಹ ಮೂರು ಲಕ್ಷಕ್ಕೆ ಬದಲಾಗಿ ರೂ 30 ಲಕ್ಷ ಎಂದು ದಾಖಲಿಸಿರುವ ನಿರ್ಲಕ್ಷ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಸಿಬ್ಬಂದಿ ಈ ವೇಳೆ ಉಡಾಫೆ ಉತ್ತರ ನೀಡಿದ್ದರಿಂದ ಸಿಟ್ಟಿಗೆದ್ದ ಅವರು ಈ ಕುರಿತು ನೋಟೀಸ್ ನೀಡಿ ಕ್ರಮಕ್ಕೆ ಆಗ್ರಹಿಸಿದರು. ಸದಸ್ಯರಾದ ಪ್ರದೀಪ್ ಕುಮಾರ್, ಕೃಷ್ಣಯ್ಯ ದನಿಗೂಡಿಸಿದರು ಈವೇಳೆ ಕೆಲಕಾಲ ಸಭೆಯಲ್ಲಿ ಗದ್ದಲದ ವಾತಾವರಣ ನಿರ್ಮಾಣ ವಾಗಿತ್ತು. ಅಧ್ಯಕ್ಷ ಹೂವಣ್ಣ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ಸಭೆಯಲ್ಲಿ ಸದಸ್ಯರ ಮಾತಿಗೆ ಗೌರವ ನೀಡುವಂತೆ ತಿಳಿಸಿ ವಾತಾವರಣವನ್ನು ತಿಳಿಗೊಳಿಸಿದರು.ಸಭೆಯಲ್ಲಿ ಪಪಂ ವಾಣಿಜ್ಯ ಮಳಿಗೆಗಳಿಗೆ ಸಂಬಂಧಿಸಿದಂತೆ ಲಾಟರಿ ಮೂಲಕ ಮೀಸಲಾತಿ ನಿಗಧಿ ಗೊಳಿಸಲಾಯಿತು. ಮುಖ್ಯಾಧಿಕಾರಿ ಶಿವಕುಮಾರ್ ಇದ್ದರು.
ಸಂಪಾದಕ - ರವಿ
0 Comments