ತಾಲೂಕಿನ ಮದಲಾಪುರ ಗ್ರಾಮದಲ್ಲಿ ಸೋಮವಾರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಬೇಸಾಯದಲ್ಲಿ ನಷ್ಟವೇ ಅಧಿಕವಾಗುತ್ತಿರುವ ಪರಿಣಾಮ ಬಹುತೇಕ ರೈತರು ಕೃಷಿಯಿಂದ ದೂರ ಉಳಿಯುತ್ತಿದ್ದು ದೇಶದಲ್ಲಿ ಆಹಾರ ಕ್ಷಾಮ ತಲೆದೋರುವ ಅಪಾಯವಿದೆ. ಸಕರ್ಾರ ಎಚ್ಚೆತ್ತು ಕೃಷಿ ಮತ್ತು ಹೈನುಗಾರಿಕೆಯನ್ನು ಲಾಭದಾಯವನ್ನಾಗಿಸುವ ತುತರ್ು ಅನಿವಾರ್ಯವಿದೆ ಎಂದು ಆಗ್ರಹಿಸಿದರು.
ಹೈನುಗಾರಿಕೆಯಲ್ಲಿ ಮುಖ್ಯವಾಗಿ ನಾಟಿ ತಳಿಯ ಹಸು, ಎಮ್ಮೆಗಳ ಸಾಕಾಣಿಕೆಗೆ ಆದ್ಯತೆ ಕಲ್ಪಿಸುವ ಸಲುವಾಗಿ ಡೇರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಿ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ. ಇದರ ಉಪಯೋಗ ಪಡೆದು ಗುಣಮಟ್ಟದ ಹಾಲು ಉತ್ಪಾದನೆಗೆ ಒತ್ತು ನೀಡಬೇಕು ಎಂದು ತಿಳಿಸಿದರು.
ಹಾಸನ ಹಾಲು ಒಕ್ಕೂಟ ವಿಸ್ತರಣಾಧಿಕಾರಿ ಎಸ್.ಪಿ. ಗಂಗಾಧರ್ ಮಾತನಾಡಿ, ಕಟ್ಟಡ ಸ್ಥಾಪನೆಗೆ 7 ಲಕ್ಷ ರೂ ಅನುದಾನ ಸಿಗಲಿದೆ. ಹಾಲಿನ ಉತ್ಪನ್ನಗಳಿಂದ ದೊರೆಯುವ ಲಾಭಾಂಶವನ್ನು ಉತ್ಪಾದಕರಿಗೆ ಒದಗಿಸಲಾಗುತ್ತಿದೆ ಎಂದರು.
ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷತೆ ರಾಜಲಕ್ಷ್ಮೀ ರಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಒಕ್ಕೂಟದ ವಿಸ್ತರಣಾಧಿಕಾರಿ ವೇಣುಗೋಪಾಲ್, ಅಶ್ವಥ್, ಮೋಹನ್, ಸಂಘದ ಕಾರ್ಯದರ್ಶಿ ಲತಾ ಲೋಕೇಶ್, ಗ್ರಾಪಂ ಉಪಾಧ್ಯಕ್ಷೆ ಜಯಲಕ್ಷ್ಮೀ, ಜಿಲ್ಲಾ ಕೃಷಿಕ ಸಮಾಜದ ನಿರ್ದೇಶಕ ಆಲದಹಳ್ಳಿ ಕೃಷ್ಣರಾಜ್, ಕುಮಾರ್, ನಿರ್ವಾಣೇಗೌಡ ರಾಮಚಂದ್ರಯ್ಯ, ರಾಜೇಗೌಡ, ಮೋದಾಮಣಿ, ಸಂಘದ ನಿರ್ದೇಶಕರು ಪಸ್ಥಿತರಿದ್ದರು.
ಸಂಪಾದಕ - ರವಿ
0 Comments