ಗೂಡಿನಿಂದ ಗೂಡಿಗಾರುವ ಹಕ್ಕಿಗೇಕೆ ಅನ್ಯ ಸಮುದಾಯದ ಚಿಂತೆ, ಸ್ವತಂತ್ರ ಬಸವಲಿಂಗ ಶಿವಯೋಗಿ ತೋಂಟದಾರ್ಯ ಶ್ರೀ ಹಿಗ್ಗಾಮುಗ್ಗ ಲೇವಡಿ


ಅರಕಲಗೂಡು: ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಬದಲಿಸಿ ಹೊಸ ನಾಯಕತ್ವಕ್ಕೆ ಮನ್ನಣೆ ನೀಡಿ ಲಿಂಗಾಯತ ಸಮುದಾಯದ ಪಂಚಮಸಾಲಿ ಸಮಾಜದ ನಾಯಕನಿಗೆ ಪಟ್ಟ ಕಟ್ಟುವಂತೆ ಹೈಕಮಾಂಡ್ ಗೆ ಸಲಹೆ ನೀಡಿ ಮಠಾಧೀಶರಿಗೂ ಸಲಹೆ ನೀಡಿದ ಹಳ್ಳಿಹಕ್ಕಿ ಹೆಚ್ ವಿಶ್ವನಾಥ್ ಒಬ್ಬ ರಾಜಕೀಯ ಜೀವನದ  ಅಂತ್ಯಕಾಲದ ನಾಯಕ ಎಂಬುದು ಇಡೀ ನಾಡಿಗೆ ತಿಳಿದ ಸಂಗತಿ ಎಂದು ವ್ಯಂಗ್ಯವಾಗಿ ವಿಶ್ಲೇಷಿಸಿದ್ದಾರೆ  ಬಸವಾಪಟ್ಟಣದ ಸ್ವತಂತ್ರ ಬಸವಲಿಂಗ ಶಿವಯೋಗಿ ತೋಂಟದಾರ್ಯ ಶ್ರೀಗಳು.

ತನ್ನ ರಾಜಕೀಯ ಭವಿಷ್ಯದ ಉದ್ದಕ್ಕೂ ವಿವಾದಗಳಿಂದಲೇ ವಿರಾಜಮಾನರಾದವರು ಹೆಚ್ ವಿಶ್ವನಾಥ್ ಅವರು ಕೆ ಆರ್ ನಗರ ವಿಧಾನಸಭಾ ಕ್ಷೇತ್ರದ ವ್ಯಕ್ತಿ ತನ್ನನ್ನು ಬೆಳೆಸಿದ ನಾಯಕರನ್ನೆಲ್ಲ ವಿನಾಕಾರಣ ಆರೋಪಿಗಳನ್ನಾಗಿಸುತ್ತಲೇ ಬಂದವರು ಊರಿಂದ ಊರಿಗೆ ಅಲೆದಾಡುತ್ತಾ ಒಂದೆಡೆ ಎಲ್ಲೂ ನೆಲೆ ಕಾಣದೆ ರಾಜಕೀಯ ಜೀವನದುದ್ದಕ್ಕೂ ಮತ್ತೊಬ್ಬರ ಹಂಗಿನಲ್ಲೇ ಬೆಳೆದ ಈ ವ್ಯಕ್ತಿ ತನ್ನ ಸ್ವಸಾಮರ್ಥದಿಂದ ಎಂದೂ ಬೆಳೆದವರಲ್ಲ ಜನತಾಪರಿವಾರ ಕಾಂಗ್ರೆಸ್ ಜೆಡಿಎಸ್ ಇದೀಗ ಬಿಜೆಪಿ ಹೀಗೆ ಗೂಡಿನಿಂದ ಗೂಡಿಗೆ ಹಾರುತ್ತಾ ತನ್ನ ಬೇಳೆ ಬೇಯಿಸಿಕೊಂಡವರು

ಕಳೆದ ಚುನಾವಣೆಯಲ್ಲಿ ಹುಣಸೂರಿನ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಹೆಚ್ ಡಿ ದೇವೇಗೌಡ ಅವರ ಬೆಂಬಲದಿಂದ ಗೆಲುವು ಸಾಧಿಸಿ ಕೊನೆಗೆ ಉಂಡ ಮನೆಗೇ ದ್ರೋಹ ಬಗೆದು ಜೆಡಿಎಸ್ ತೊರೆದು ಬಿಜೆಪಿ ಪಕ್ಷದಿಂದ ಮತ್ತೆ ಸ್ಪರ್ಧಿಸಿ ಸೋಲು ಅನುಭವಿಸಿದರು ಬಿ ಎಸ್ ಯಡಿಯೂರಪ್ಪ ಅವರ ಬೆಂಬಲದಿಂದ ಇದೀಗ ವಿಧಾನಪರಿಷತ್ ಸದಸ್ಯರಾಗಿ ಸಚಿವ ಸ್ಥಾನ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸಿ ಯಶ ಕಾಣದೆ ರಾಜಕೀಯ ಪುನರ್ಜನ್ಮ ನೀಡಿದ ಬಿ ಎಸ್ ಯಡಿಯೂರಪ್ಪ ವಿರುದ್ಧವೇ ತಿರುಗಿ ಬಿದ್ದ ಮಹಾನುಭಾವ ಇದೀಗ ಯಡಿಯೂರಪ್ಪನವರನ್ನು ಪದಚ್ಯುತಗೊಳಿಸುವ ಹಗಲುಗನಸು ಕಾಣುತ್ತಾ ಬಿಎಸ್ವೈ ಆರೋಗ್ಯ ಉತ್ಸಾಹ ವಯಸ್ಸಿನ ಬಗ್ಗೆ ಮಾತನಾಡುತ್ತಿರುವ ಚಿರಮುದಿಯುವಕ

ವೀರಶೈವ ಲಿಂಗಾಯತ ಸಮಾಜದ ಪ್ರಶ್ನಾತೀತ ನಾಯಕ ಬಿ ಎಸ್ ಯಡಿಯೂರಪ್ಪ ಅವರನ್ನು ಬದಲಿಸಿ ಆ ಸ್ಥಾನದಲ್ಲಿ ಮತ್ತೊಬ್ಬ ಲಿಂಗಾಯತ ಸಮುದಾಯದ ವ್ಯಕ್ತಿಯನ್ನು ಅದರಲ್ಲೂ ಪಂಚಮಸಾಲಿ ಸಮಾಜದ ನಾಯಕನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಎಂದು ಹೇಳುವ ಮೂಲಕ ಲಿಂಗಾಯತ ಸಮಾಜವೆಂಬ ಜೇನುಗೂಡಿಗೆ ಕಲ್ಲೆಸೆಯುವ ವ್ಯರ್ಥ ಪ್ರಯತ್ನ ಮಾಡುತ್ತಿರುವುದು ವಾಸ್ತವ ದುರಂತ ತನ್ನ ಸ್ವಂತ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯನನ್ನಾಗಿ ತನ್ನ ಮಗನನ್ನು ಗೆಲ್ಲಿಸಿಕೊಳ್ಳಲಾಗದ ಅಸಹಾಯಕ ವ್ಯಕ್ತಿ ಕೆ ಆರ್ ನಗರದ ಜನತೆಗೆ ಈ ವ್ಯಕ್ತಿಯ ನಡವಳಿಕೆ ತಿಳಿದು ತಿರಸ್ಕರಿಸಿರುವುದು ಇಡೀ ನಾಡಿಗೆ ತಿಳಿದಿದೆ.
ತನ್ನ ಮನೆಯ ವ್ಯವಸ್ಥೆಯನ್ನೇ ಸರಿದೂಗಿಸಿಕೊಳ್ಳಲಾಗದ ಈ ವ್ಯಕ್ತಿ ಬಹುಸಂಖ್ಯಾತ ಲಿಂಗಾಯತ ಸಮುದಾಯದ ಬಗ್ಗೆ ಮಾತನಾಡುವ ವ್ಯಕ್ತಿತ್ವವಾಗಲಿ ನೈತಿಕತೆಯಾಗಲಿ ಇದೆಯೇ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಹತ್ತು ಜನರ ಬದುಕಿಗೆ ಬೆಳಕಾಗದ ವ್ಯಕ್ತಿ ಸಾವಿರ ಸಾವಿರ ಸಂಖ್ಯೆಯ ಜನರ ಬಾಳಿಗೆ ಬೆಳಕಾದ ನಾಡಿನ ಮಠಾಧೀಶರಿಗೆ ಸಲಹೆ ನೀಡುವ ಯಾವ ತಾಕತ್ತೂ ಈ ಮನುಷ್ಯನಿಗಿಲ್ಲ ಇಷ್ಟಕ್ಕೂ ಮತ್ತೊಂದು ಸಮುದಾಯದ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಾದರೂ ಏನಿದೆ ತನ್ನ ವಯಸ್ಸಿಗೆ ತಕ್ಕಂತೆ ಮಾತನಾಡದ ಹೆಚ್ ವಿಶ್ವನಾಥ್ ಅವರ ಹೇಳಿಕೆಯನ್ನು ನಾನು ವೈಯಕ್ತಿಕವಾಗಿ ಖಂಡಿಸುತ್ತಾ ಮುಂದಿನ ದಿನಗಳಲ್ಲಾದರೂ ತೆಪ್ಪಗಿದ್ದು ತನ್ನ ರಾಜಕೀಯ ಸಂಧ್ಯಾಕಾಲವನ್ನಾದರೂ ವಿವಾದ ರಹಿತವಾಗಿಸಿಕೊಳ್ಳಲಿ

ಇಷ್ಟಕ್ಕೂ
ಬಿ ಎಸ್ ಯಡಿಯೂರಪ್ಪ ಅವರ ವಯಸ್ಸು ಆರೋಗ್ಯ ಉತ್ಸಾಹ ಇದಾವುದೂ ಅವರ ಕೆಲಸಕ್ಕೆ ಅಡ್ಡಿಪಡಿಸದೇ ಇಡೀ ದೇಶದಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ ನೆರೆ ಬರ ಸಂಧರ್ಭ ಕೋವಿಡ್ 19 ಮಹಾಮಾರಿ ವಿರುದ್ಧದ ಹೋರಾಟದಲ್ಲಿ ಅವರ ತಾಕತ್ತೇನು ಎಂಬುದು ಇಡೀ ದೇಶಕ್ಕೆ ತಿಳಿದಿದೆ ಜಾತ್ಯತೀತ ತತ್ವ ಸಾಮಾಜಿಕ ಬದ್ಧತೆ ರೈತ ದೀನ ದಲಿತ ಪರ ಕಾಳಜಿ ಯಡಿಯೂರಪ್ಪ ಅವರಿಗೆದೆ ಅವರಿಗೆ ಪರ್ಯಾಯ ನಾಯಕರಿದ್ದರೆ ಅದರ ಬಗ್ಗೆ ಸಮಾಜ ಚಿಂತಿಸುತ್ತದೆ ಹೆಚ್ ವಿಶ್ವನಾಥ್ ಅವರಿಗೆ ಅದರ ಅವಶ್ಯಕತೆ ಇಲ್ಲ ಎಂಬುದನ್ನು ಮನವರಿಕೆ ಮಾಡಿಕೊಡತ್ತೇನೆ ಮಹಾಭಾರತದ ಶಕುನಿಯ ಪಾತ್ರವನ್ನು ಭಾರತೀಯ ಜನತಾ ಪಕ್ಷದಲ್ಲಿ ಕೆಲಸ ಮಾಡುವುದನ್ನು ಬಿಟ್ಟು ಬಿಡಲೆಂದು ಈ ಮೂಲಕ ಎಚ್ಚರಿಕೆ ನೀಡುತ್ತಾ ಮುಂದಿನ ದಿನಗಳಲ್ಲಿ ಇದೇ ನಡವಳಿಕೆ ಮುಂದುವರೆದರೆ ಹೋರಾಟ ಅನಿವಾರ್ಯವಾಗುತ್ತದೆ ಎಂದು ಸ್ವತಂತ್ರ ಬಸವಲಿಂಗ ಶಿವಯೋಗಿಗಳು ಶ್ರೀ ತೋಂಟದಾರ್ಯ ಸಂಸ್ಥಾನಮಠ ಬಸವಾಪಟ್ಟಣ ಅರಕಲಗೂಡು ತಾಲೂಕು ಹಾಸನ ಜಿಲ್ಲೆ ಇವರು ಗುಡುಗಿ ಎಚ್ಚರಿಸಿದ್ದಾರೆ.

                    ಸಂಪಾದಕ- ರವಿ                         

Post a Comment

0 Comments