ಆರ್ಯವೈಶ್ಯ ಸಮುದಾಯದವರಿಂದ ಕೋವಿಡ್ ರೋಗಿಗಳಿಗೆ ಸಹಾಯ

ಅರಕಲಗೂಡು: ತಾಲೂಕಿನ ಕೊಣನೂರಿನಲ್ಲಿ ವಾಸವಿ ಪೀಠಕ್ಕೆ 2ನೇ ಫೀಠಾಧಿಪತಿಯಾಗಿ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಪೀಠಾರೋಹಣ ಮಾಡಿದ ಪ್ರಯುಕ್ತ ಸಮಾಜದ ಭಕ್ತರು ಸರ್ಕಾರಿ ಆಸ್ಪತ್ರೆಗೆ ಆಹಾರ ಪದಾರ್ಥಗಳ ಕಿಟ್ ನೀಡಿದರು.

ಇದಕ್ಕೂ ಮುನ್ನ ಗ್ರಾಮದ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಜರುಗಿತು. ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ಪಂಚಾಮೃತ ಮತ್ತು ಅಷ್ಟೋತ್ತರ ಸೇವೆ ಸೇರಿದಂತೆ ಗೋ ಪೂಜೆ ನೆರವೇರಿಸಿದರು. ಆರ್ಯವೈಶ್ಯ ಸಮುದಾಯದ ಪ್ರತಿ ಮನೆಯಲ್ಲೂ ವಾಸವಿ ಜೀಜಾಕ್ಷರ ಮಂತ್ರವನ್ನು ಪಠಣ ಮಾಡಿ ಗುರುವಂದನೆ ಸಲ್ಲಿಸಿದರು.

ಸರ್ಕಾರಿ ಆಸ್ಪತ್ರೆಯಲ್ಲಿನ ಕೋವಿಡ್ ಮತ್ತು ಇತರೆ ರೋಗಿಗಳಿಗೆ ಬ್ರೆಡ್, ಹಾಲು ಮತ್ತಿತರ ಅವಶ್ಯಕ ವಸ್ತುಗಳನ್ನು ನೀಡಿದರು.


                     ಸಂಪಾದಕ - ರವಿ        ‌            

Post a Comment

0 Comments