ಅರಕಲಗೂಡು: ಪಟ್ಟಣದಲ್ಲಿ ಮಂಗಳವಾರ ಮಲೇರಿಯಾ ಮಾಸಾಚರಣೆ ಜಾಗೃತಿ ವಾಹನಕ್ಕೆ ತಾಲೂಕು ಆರೋಗ್ಯಾಧಿಕಾರಿ ಡಾ. ಸ್ವಾಮಿಗೌಡ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಪಟ್ಟಣ ಮಾತ್ರವಲ್ಲದೇ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಲೇರಿಯಾ ಮಾಸಾಚರಣೆ ಕುರಿತು ಅರಿವು ಮೂಡಿಸಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಕೋವಿಡ್ ಸಂಕಷ್ಟದ ನಡುವೆ ಜನರು ತಮ್ಮ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಬೇಕು ಎಂದು ತಿಳಿಸಿದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕಾಂತಮಣಿ, ಸಿಬ್ಬಂದಿ ಇದ್ದರು.
ಸಂಪಾದಕ - ರವಿ
0 Comments