ಸಾರ್ವಜನಿಕ ಆಸ್ಪತ್ರೆಗೆ ಕೋವಿಡ್ ಔಷಧಗಳನ್ನು ಕೊಡುಗೆ ನೀಡಿದ ಜಿಪಂ ಮಾಜಿ‌ಸ ದಸ್ಯ ಎಸ್.ಪಿ.‌ ರೇವಣ್ಣ

ಅರಕಲಗೂಡು: ಜಿಲ್ಲಾ ಪಂಚಾಯಿತಿ ಸದಸ್ಯ ಎಸ್ .ಪಿ. ರೇವಣ್ಣ ತಮ್ಮ ಜನ್ಮದಿನದ  ಅಂಗವಾಗಿ ಸೋಮವಾರ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ರೂ 1ಲಕ್ಷ  ಬೆಲೆಯ ಚುಚ್ಚುಮದ್ದುಗಳನ್ನು ಕೊಡುಗೆಯಾಗಿ ನೀಡಿದರು. 

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ  ಅವರು, ತಾವು ಸಹ ಕೋವಿಡ್ ಸೋಂಕಿಗೆ ತುತ್ತಾಗಿ ಸಾವಿನ ಕದ ತಟ್ಟಿ ಬಂದಿದ್ದು ಚೇತರಿಸಿ ಕೊಳ್ಳುತ್ತಿದ್ದೇನೆ.  ಪಟ್ಟಣದ ಸರ್ಕಾರಿ ಆಸ್ಪತ್ರೆ ಹಾಗೂ ಹಾಸನದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ನೀಡಿದ ಚಿಕಿತ್ಸೆ ಯನ್ನು ತಾವು ಎಂದಿಗೂ ಮರೆಯಲು ಸಾಧ್ಯವಿಲ್ಲ.  ಕೋವಿಡ್  ರೋಗಿಗಳ ಸಂಕಷ್ಟ  ಅನುಭವಿಸಿರುವ ತಾವು ರೋಗಿಗಳಿಗೆ ಯಾವ ರೀತಿಯಲ್ಲಾದರೂ ನೆರವಾಗಬೇಕು ಎಂಬ ಸದುದ್ದೇಶದಿಂದ  ವೈದ್ಯ  ಡಾ ದೀಪಕ್  ಅವರ ಸಲಹೆಯಂತೆ ಚುಚ್ಚುಮದ್ದುಗಳನ್ನು ಕೊಡುಗೆಯಾಗಿ ನೀಡಿರುವುದಾಗಿ ಹೇಳಿದರು.  ಕೊರೊನಾ ಕುರಿತು ಭಯ ಬೇಡ, ಆದರೆ ಖಂಡಿತಾ ನಿರ್ಲಕ್ಷ  ಸಲ್ಲದು. ಸಾರ್ವಜನಿಕರು ಈ ಕುರಿತು ಎಚ್ಚರ ವಹಿಸುವಂತೆ ಮನವಿ ಮಾಡಿದರು. 
ಕೊಡುಗೆ ಸ್ವೀಕರಿಸಿದ  ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ ದೀಪಕ್,  ಕೋವಿಡ್ ರೋಗಿಗಳ ಚಿಕಿತ್ಸೆಗೆ  ಎನೊಕ್ಸಾ ಪ್ಯಾರಿನ್  ಚುಚ್ಚು ಮದ್ದು  ಯಥೇಚ್ಚವಾಗಿ ಅಗತ್ಯವಾಗಿದೆ. ಒಬ್ಬ ರೋಗಿಗೆ 5 ಚುಚ್ಚುಮದ್ದುಗಳ ಅಗತ್ಯವಿದ್ದು ಒಂದರ ಬೆಲೆ ರೂ 600 ಇದ್ದು ಇದರ ವೆಚ್ಚವೆ ರೂ 3 ಸಾವಿರ ತಗುಲಲಿದೆ.   ರೇವಣ್ಣ ಅವರು 200 ಚುಚ್ಚುಮದ್ದುಗಳನ್ನು ಕೊಡುಗೆಯಾಗಿ ನೀಡುವ ಮೂಲಕ  ಬಡ ರೋಗಿಗಳ ಚಿಕಿತ್ಸೆಗೆ ನೆರವು ನೀಡಿದ್ದು  ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.  ಮಾಜಿ ಜಿಪಂ ಸದಸ್ಯ ಬರಗೂರು ರವಿ ಇದ್ದರು.

                       ಸಂಪಾದಕ - ರವಿ                      

Post a Comment

0 Comments